ಮಕ್ಕಳ Corona Vaccine ಟ್ರಯಲ್ ಗೆ ಅನುಮತಿ ಕೋರಿದ Bharat Biotech, ಮೊದಲು ದತ್ತಾಂಶ ತೋರಿಸಿ ಎಂದ ಸರ್ಕಾರ
Corona Vaccine For Children - ಕೋವಿಶೀಲ್ಡ್ (Covishield) ಮತ್ತು ಕೊವಾಕ್ಸಿನ್ (Covaxin) ಎಂಬ ಎರಡು ಲಸಿಕೆಗಳೊಂದಿಗೆ ಭಾರತದಲ್ಲಿ ವ್ಯಾಕ್ಸಿನೇಷನ್ ಅಭಿಯಾನ (Mega Vaccination Drive) ನಡೆಯುತ್ತಿದ್ದರೂ ಕೂಡ ಇದುವರೆಗೆ ಮಕ್ಕಳಿಗಾಗಿ ಒಂದೇ ಒಂದು ವ್ಯಾಕ್ಸಿನ್ (Covid-19 Vaccine) ಕೂಡ ಸಿದ್ಧವಾಗಿಲ್ಲ.
ನವದೆಹಲಿ: Corona Vaccine For Children - ಕೋವಿಶೀಲ್ಡ್ (Covishield) ಮತ್ತು ಕೊವಾಕ್ಸಿನ್ (Covaxin) ಎಂಬ ಎರಡು ಲಸಿಕೆಗಳೊಂದಿಗೆ ಭಾರತದಲ್ಲಿ ವ್ಯಾಕ್ಸಿನೇಷನ್ ಅಭಿಯಾನ (Mega Vaccination Drive) ನಡೆಯುತ್ತಿದ್ದರೂ ಕೂಡ ಇದುವರೆಗೆ ಮಕ್ಕಳಿಗಾಗಿ ಒಂದೇ ಒಂದು ವ್ಯಾಕ್ಸಿನ್ (Covid-19 Vaccine) ಕೂಡ ಸಿದ್ಧವಾಗಿಲ್ಲ. ಮಕ್ಕಳ ಮೇಲಿನ ಕರೋನಾ ವೈರಸ್ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಭಾರತದ ರಾಷ್ಟ್ರೀಯ ಔಷಧ ನಿಯಂತ್ರಕ (Drug Controller General Of India) ಇದುವರೆಗೆ ಯಾರಿಗೂ ಕೂಡ ಅವಕಾಶ ನೀಡಿಲ್ಲ. ಏತನ್ಮಧ್ಯೆ, ಭಾರತ್ ಬಯೋಟೆಕ್ (Bharat Biotech) ತನ್ನ ಲಸಿಕೆಯನ್ನು ಮಕ್ಕಳಿಗೆ ಪರೀಕ್ಷಿಸಲು ಸರ್ಕಾರದ ಅನುಮತಿಯನ್ನು ಕೋರಿದೆ, ಅಂದರೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಮೇಲೆ ಟ್ರಯಲ್ ನಡೆಸಲು ಭಾರತ್ ಬಯೋಟೆಕ್ ಸರ್ಕಾರವನ್ನು ಕೇಳಿದೆ. ಭಾರತ ಸರ್ಕಾರ ಭಾರತ್ ಬಯೋಟೆಕ್ ಹಾಗೂ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿರುವ ಕೋವಿಶೀಲ್ಡ್ ಲಸಿಕೆಗಳ ತುರ್ತು ಬಳಕೆಕೆ ಅನುಮೋದನೆ ನೀಡಿದ್ದು ಕೇವಲ ವಯಸ್ಕರ ವಿಷಯದಲ್ಲಿ ಎಂಬುದು ಇಲ್ಲಿ ಉಲ್ಲೇಖನೀಯ.
5 ರಿಂದ 18 ವರ್ಷದೊಳಗಿನ ಮಕ್ಕಳಿಗೆ 'ಕೋವಾಕ್ಸಿನ್' ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ಅನುಮೋದಿಸಲು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ರಾಷ್ಟ್ರೀಯ ಔಷಧ ನಿಯಂತ್ರಕ ಕೇಂದ್ರದ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಸಂಘಟನೆಯ ವಿಷಯ ತಜ್ಞರ ಸಮಿತಿಗೆ ಬುಧವಾರ ಅರ್ಜಿಯನ್ನು ಸಲ್ಲಿಸಿದೆ.
ಕಂಪನಿಯ ಈ ಬೇಡಿಕೆಯ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವಿಷಯ ತಜ್ಞರ ಸಮಿತಿ, ಮಕ್ಕಳ ಮೇಲೆ ಕೊವ್ಯಾಕ್ಸಿನ್ ಪರೀಕ್ಷೆ ನಡೆಸಲು ಅವಕಾಶ ನೀಡುವ ಮೊದಲು ವಯಸ್ಕರಿಗೆ ನೀಡಲಾಗುತ್ತಿರುವ ಲಸಿಕೆಗೆ ಸಂಬಂಧಿಸಿದ ಡೇಟಾ ಮತ್ತು ಅದರ ಪರಿಣಾಮವನ್ನು ನೋಡಲುಬಯಸುವುದಾಗಿ ಹೇಳಿದೆ. ಅಂದರೆ, ಮಕ್ಕಳ ಮೇಲೆ ಲಸಿಕೆ ಪ್ರಯೋಗವನ್ನು ಅನುಮೋದಿಸುವ ಮೊದಲು ವಯಸ್ಕರ ಮೇಲೆ ಅದು ಯಾವ ಪರಿಣಾಮ ಬೀರಿದೆ ಎಂಬುದರ ಪರಿಣಾಮಕಾರಿತ್ವದ ಡೇಟಾವನ್ನು ನೋಡಲು ಸಮೀತಿ ಬಯಸುತ್ತಿದೆ.
ಇದನ್ನೂ ಓದಿ-ಮಾರ್ಚ್ 1 ರಿಂದ Corona Vaccination ಎರಡನೇ ಹಂತ ಆರಂಭ, ಯಾರಿಗೆ ಸಿಗಲಿದೆ ಲಸಿಕೆ?
ಲಸಿಕೆಯ ಪರಿಣಾಮಕಾರಿತ್ವ ಕುರಿತಾದ ದತ್ತಾಂಶ ವಿಶೇಷ ತಜ್ಞರ ಸಮೀತಿಯ ಮೊದಲ ಆದ್ಯತೆಯಾಗಿದೆ ಮತ್ತು ತಜ್ಞರ ಸಮಿತಿಯಿಂದ ಅನುಮೋದನೆ ಪಡೆಯುವ ಮುನ್ನ ಕಂಪನಿಯು ತಜ್ಞರ ಸಮೀತಿಗೆ ನೀಡಿದ ದತಾಂಶವನ್ನು ಸಹ ಪ್ರಸ್ತುತಪಡಿಸಬೇಕು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭಾರತದಲ್ಲಿ ವಯಸ್ಕರ ಮೇಲೆ ತುರ್ತು ಬಳಕೆಗಾಗಿ ಕೊವಾಕ್ಸಿನ್ ಅನ್ನು ಈಗಾಗಲೇ ಅನುಮೋದಿಸಲಾಗಿದೆ ಮತ್ತು ಕಂಪನಿಯು ಪ್ರಸ್ತುತಪಡಿಸಿದ ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿ ದತ್ತಾಂಶವನ್ನು ಆಧರಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ-Corona Vaccination - 60 ದಿನಗಳಲ್ಲಿ 50 ಕೋಟಿ ಭಾರತೀಯರಿಗೆ ಲಸಿಕೆ ಹೇಗೆ ಸಾಧ್ಯ? ಇಲ್ಲಿದೆ Azim Premji Idea
ಆದರೆ, ಇದುವರೆಗೆ ಕಂಪನಿ ತನ್ನ ಮೂರನೇ ಹಂತದ ಪರೀಕ್ಷೆಯ ದತ್ತಾಂಶಗಳನ್ನು ಇದುವರೆಗೆ ಸಾದರುಪಡಿಸಿಲ್ಲ. ಏತನ್ಮಧ್ಯೆ ಯುಕ್ರೇನ್ ನ ಮೂರು ಸದಸ್ಯರ ಪ್ರತಿನಿಧಿ ಮಂಡಳಿ ಆದೇಶದ ಆರೋಗ್ಯ ಸಚಿವರಾಗಿರುವ ಡಾ. ಮ್ಯಾಕ್ಸಿಮ್ ಸ್ಟೆಪಾನೋವಾ ನೇತೃತ್ವದಲ್ಲಿ ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ನ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಾರತ್ ಬಯೋಟೆಕ್, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR)ಯೊಂದಿಗೆ ಸೇರಿ ಜಂಟಿಯಾಗಿ ಕೊವ್ಯಾಕ್ಸಿನ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.
ಇದನ್ನೂ ಓದಿ-ಇಡೀ ವಿಶ್ವಾದ್ಯಂತ ಬಳಕೆಯಾಗಲಿದೆ ಭಾರತದ ಈ Corona Vaccine, ಸಿಕ್ತು WHO ಅನುಮತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.