ನವದೆಹಲಿ: Corona Vaccination - ಎರಡನೇ ಹಂತದ ಕೋವಿಡ್ -19 (Covid-19) ಲಸಿಕೆ ಮಹಾ ಅಭಿಯಾನ ಮಾರ್ಚ್ 1 ರಿಂದ ಪ್ರಾರಂಭವಾಗಲಿದೆ. ಇದರಲ್ಲಿ ಅನೇಕ ಖಾಸಗಿ ಆಸ್ಪತ್ರೆಗಳು ಕೂಡ ಭಾಗವಹಿಸಲಿವೆ. ಮಾಹಿತಿ ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ (Prakash Javadekar) ಸರ್ಕಾರದ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ದೇಶದಲ್ಲಿ ಆರಂಭಿಸಲಾಗಿರುವ ಕರೋನಾ ವ್ಯಾಕ್ಸಿನೇಷನ್ (Corona Vaccination) ಅಭಿಯಾನದ ಅಡಿಯಲ್ಲಿ, ಇದೀಗ 60 ವರ್ಷ ವಯಸ್ಸಿನವರಿಗೆ ಲಸಿಕೆ ಡೋಸ್ ನೀಡಲಾಗುವುದು ಎಂದು ಜಾವಡೇಕರ್ ಹೇಳಿದ್ದಾರೆ. ಈ ಅವಧಿಯಲ್ಲಿ ಈಗಾಗಲೇ ದೊಡ್ಡ ಕಾಯಿಲೆಯನ್ನು ಹೊಂದಿರುವ 45 ವರ್ಷ ವಯಸ್ಸಿನವರಿಗೂ ಕೂಡ ಲಸಿಕೆ (Corona Vaccine)ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಖಾಸಗಿ ಕೇಂದ್ರಗಳಲ್ಲಿ ಪೇಡ್ ವ್ಯಾಕ್ಸಿನ್
10 ಸಾವಿರ ಸರ್ಕಾರಿ ಮತ್ತು 20 ಸಾವಿರ ಖಾಸಗಿ ಕೇಂದ್ರಗಳಲ್ಲಿ ಜನರಿಗೆ ಕರೋನಾ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸಚಿವ ಜಾವಡೇಕರ್ ಹೇಳಿದ್ದಾರೆ. ಸರ್ಕಾರಿ ಕೇಂದ್ರಗಳಲ್ಲಿ ಉಚಿತ ಲಸಿಕೆ ಇರುತ್ತದೆ. ಇನ್ನೊಂದೆಡೆ , ಖಾಸಗಿ ಕೇಂದ್ರದಿಂದ ಲಸಿಕೆ ಪಡೆಯಲು ಶುಲ್ಕವನ್ನು ಪಾವತಿಸಬೇಕಾಗಲಿದೆ.
From March 1, people above 60 years of age and those above 45 years of age with comorbidities will be vaccinated at 10,000 govt & over 20,000 private vaccination centres. The vaccine will be given free of cost at govt centres: Union Minister Prakash Javadekar#COVID19 pic.twitter.com/Rxhkkk8eSC
— ANI (@ANI) February 24, 2021
ಶೀಘ್ರದಲ್ಲಿಯೇ ಸಂಪೂರ್ಣ ಮಾಹಿತಿ ಪ್ರಕಟ
ಮುಂದಿನ ಮೂರು-ನಾಲ್ಕು ದಿನಗಳಲ್ಲಿ, ಲಸಿಕೆ ತಯಾರಿಸುವ ಕಂಪನಿ ಮತ್ತು ಆಸ್ಪತ್ರೆಗಳನ್ನು ಸಂಪರ್ಕಿಸಿದ ನಂತರ ಆರೋಗ್ಯ ಸಚಿವಾಲಯವು ಲಸಿಕೆಯ ಮೊತ್ತದ ಕುರಿತು ನಿರ್ಧಾರ ಕೈಗೊಳ್ಳಲಿದೆ ಎಂದು ಈ ಸಂದರ್ಭದಲ್ಲಿ ಜಾವಡೆಕರ್ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ಮಾಹಿತಿ ನೀಡುವಾಗ ಜಾವಡೆಕರ್ ಈ ಮಾಹಿತಿಯನ್ನು ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಒಂದು ವರದಿಯ ಪ್ರಕಾರ, ದೇಶದಲ್ಲಿ ಒಂದು ಕೋಟಿ 19 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಹಲವು ರಾಜ್ಯಗಳಲ್ಲಿ ವ್ಯಾಕ್ಸಿನೇಷನ್ ಕಾರ್ಯ ಭರದಿಂದ ಸಾಗುತ್ತಿದೆ.
ಇದನ್ನೂ ಓದಿ- Corona Vaccination - 60 ದಿನಗಳಲ್ಲಿ 50 ಕೋಟಿ ಭಾರತೀಯರಿಗೆ ಲಸಿಕೆ ಹೇಗೆ ಸಾಧ್ಯ? ಇಲ್ಲಿದೆ Azim Premji Idea
ಭಾರತದಲ್ಲಿ ಕೊರೊನಾ ವ್ಯಾಕ್ಸಿನೇಷನ್ ಮಹಾ ಅಭಿಯಾನ ಜನವರಿ 16 ರಿಂದ ಆರಂಭಗೊಂಡಿದೆ. ಅಂದಿನಿಂದ, 12 ದಶಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ. ನಂತರ ಫೆಬ್ರವರಿ 2 ರಿಂದ ಮುಂಚೂಣಿಯಲ್ಲಿರುವ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಕರೋನಾ ವೈರಸ್ (Coronavirus) ಲಸಿಕೆಯ ಮೊದಲ ಡೋಸ್ ನೀಡಿರುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಫೆಬ್ರವರಿ 20 ರ ಗಡುವನ್ನು ನೀಡಿದೆ. ಶೇಕಡಾ 75 ರಷ್ಟು ಆರೋಗ್ಯ ಕಾರ್ಯಕರ್ತರಿಗೆ ಎಂಟು ರಾಜ್ಯಗಳಲ್ಲಿ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ.
ಇದನ್ನೂ ಓದಿ- Corona Vaccination ವಿಷಯದಲ್ಲಿ ದಾಖಲೆ ಬರೆದ ಭಾರತ
ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಕರೋನಾ ವೈರಸ್‌ನ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯನ್ನು ಗಮನಿಸಲಾಗಿದೆ. ಈ ಕಾರಣದಿಂದಾಗಿ, ವ್ಯಾಕ್ಸಿನೇಷನ್ ವೇಗವನ್ನು ಸಹ ಚರ್ಚಿಸಲಾಗಿದೆ. ವರದಿಗಳ ಪ್ರಕಾರ ಮುಂದಿನ ನಾಲ್ಕರಿಂದ ಆರು ವಾರಗಳಲ್ಲಿ ವ್ಯಾಕ್ಸಿನೇಷನ್ ವೇಗದ ದರವನ್ನು ದಿನಕ್ಕೆ 5 ಲಕ್ಷಕ್ಕೆ ತರಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ. ದೇಶದ 200 ಸ್ಥಳಗಳಲ್ಲಿ ಸರ್ಕಾರವು ದಿನನಿತ್ಯದ ವ್ಯಾಕ್ಸಿನೇಷನ್ ಸಂಖ್ಯೆಯನ್ನುದ್ವಿಗುಣಗೊಳಿಸುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ- ಇಂದಿನಿಂದ ದೇಶಾದ್ಯಂತ ಮೊದಲ ಹಂತದ Covid Vaccine ನೀಡುವ ಅಭಿಯಾನ ಆರಂಭ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.