ಬೆಂಗಳೂರು : ಪ್ರಸ್ತುತ ಯುಗದಲ್ಲಿ ಜನರ ಜೀವನಶೈಲಿ, ಆಹಾರ, ಮಾಲಿನ್ಯ, ಕಲುಷಿತ ನೀರು ಮತ್ತು ರಾಸಾಯನಿಕಯುಕ್ತ ಉತ್ಪನ್ನಗಳಿಂದ ಕೂದಲಿಗೆ ಸಾಕಷ್ಟು ಹಾನಿಯಾಗುತ್ತಿದೆ. ಕೂದಲಿಗೆ ಸರಿಯಾದ ಪೋಷಣೆಯನ್ನು ನೀಡುವ ಸಲುವಾಗಿ ಹಲವಾರು ರೀತಿಯ ಕೂದಲು ಎಣ್ಣೆಗಳನ್ನು ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿ ಹಲವಾರು ವಿಧದ  ಎಣ್ಣೆಗಳು ಲಭ್ಯವಿದೆ. ಆದರೆ ಪ್ರತಿಯೊಂದು ಕೂದಲಿನ ಎಣ್ಣೆಯು ಪ್ರಯೋಜನಕಾರಿಯಾಗಿರುವುದಿಲ್ಲ.  ಕೂದಲಿಗೆ ಎಣ್ಣೆಗಳನ್ನು ಬಳಸುವಾಗ ಬಹಳ ಎಚ್ಚರಿಕೆ ವಹಿಸಬೇಕು. 


COMMERCIAL BREAK
SCROLL TO CONTINUE READING

ಕೂದಲಿಗೆ ಹಾನಿಕಾರಕ ಈ ಎಣ್ಣೆಗಳು :
1. ಮಿನರಲ್ ಆಯಿಲ್:
ಅನೇಕ ಜನರು ತಮ್ಮ ಕೂದಲಿಗೆ ಮಿನರಲ್ ಆಯಿಲ್ ಅನ್ನು ಹಚ್ಚುತ್ತಾರೆ. ಇದಕ್ಕೆ  ನೈಸರ್ಗಿಕವಲ್ಲದ ಪೆಟ್ರೋಲಿಯಂ ಮತ್ತು ಪ್ಯಾರಾಫಿನ್ ವ್ಯಾಕ್ಸ್ ಅನ್ನು ಬಳಸುವುದರಿಂದ ಕೂದಲಿಗೆ ಹಾನಿಕಾರಕವಾಗಿ ಸಾಬೀತಾಗಬಹುದು. ಇದನ್ನು ನಿಯಮಿತವಾಗಿ ಬಳಸಿದರೆ ಕೂದಲು ಉದುರುವ ಸಮಸ್ಯೆ ಎದುರಾಗುತ್ತದೆ. ಜೊತೆಗೆ ಕೂದಲಿನ ಬೇರುಗಳು ಕೂಡಾ ತುಂಬಾ ಹಾಳಾಗುತ್ತದೆ.


ಇದನ್ನೂ ಓದಿ : Weight Loss Tips: ಈ ಚಹಾವನ್ನು ಕುಡಿದರೆ ನಿಮ್ಮ ತೂಕ ಫಾಸ್ಟಾಗಿ ಕರಗುತ್ತದೆ..!


2. ಕರ್ಪೂರದ ಎಣ್ಣೆ:
ಕರ್ಪೂರದ ಎಣ್ಣೆಯು ಅನೇಕ ಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಆದರೆ ಇದು ಎಲ್ಲರಿಗೂ ಪ್ರಯೋಜನಕಾರಿಯಾಗಿರುವುದಿಲ್ಲ. ಕರ್ಪೂರ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡಿದರೆ, ತಲೆಯ ಚರ್ಮವು ನಿರ್ಜೀವವಾಗಲು ಪ್ರಾರಂಭಿಸುತ್ತದೆ. ಇದರಿಂದ ಶಿಲೀಂಧ್ರಗಳ ಸೋಂಕು, ದದ್ದುಗಳು ಮತ್ತು ಮೊಡವೆಗಳ ಅಪಾಯವೂ ಇರುತ್ತದೆ.


3. ಆಲಿವ್ ಎಣ್ಣೆ : 
ಆಲಿವ್ ಎಣ್ಣೆ ಕೂದಲಿಗೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಮೊಡವೆಗಳ ಸಮಸ್ಯೆ ಇರುವವರಿಗೆ ಇದು ಸಮಸ್ಯೆಯನ್ನು ತಂದೊಡ್ಡುತ್ತದೆ. ಇದನ್ನು ನೇರವಾಗಿ ಕೂದಲಿಗೆ ಹಚ್ಚುವುದು ಹಾನಿಕಾರಕವಾಗಿ ಸಾಬೀತಾಗಬಹುದು.  ಈ ಎಣ್ಣೆಯಲ್ಲಿ ಒಲಿಯುರೋಪಿನ್ ಎಂಬ ಸಂಯುಕ್ತವು ಕಂಡುಬರುತ್ತದೆ. ಇದು ಕೂದಲಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಆಲಿವ್ ಆಯಿಲ್ ನ ಅತಿಯಾದ ಬಳಕೆಯಿಂದ ಅನೇಕ ಬಾರಿ ಕೂದಲಿನ ರಂಧ್ರಗಳು ಮುಚ್ಚಿಹೋಗಲು ಪ್ರಾರಂಭಿಸುತ್ತವೆ.


ಇದನ್ನೂ ಓದಿ : Disadvantages Of Triphala: ತೂಕ ಇಳಿಕೆ ಮಾಡುವ ಈ ಚೂರ್ಣವನ್ನು ನೀವು ಸರಿಯಾಗಿ ಸೇವಿಸದಿದ್ದರೆ ಆರೋಗ್ಯಕ್ಕೆ ಭಾರಿ ಹಾನಿ


4. ನಿಂಬೆ ಎಣ್ಣೆ
ಅನೇಕ ಜನರು ನಿಂಬೆ ರಸವನ್ನು ಕೂದಲಿನ ಬಳಸುವ ಎಣ್ಣೆಯೊಂದಿಗೆ ಬೆರೆಸುತ್ತಾರೆ. ತಲೆಗೆ ನೇರವಾಗಿ ನಿಂಬೆ ರಸವನ್ನು ಹಿಂಡುವವರು ಕೂಡಾ ಇದ್ದಾರೆ.  ಆದರೆ ಹಾಗೆ ಮಾಡುವುದರಿಂದ ಕೂದಲಿನ ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸಬಹುದು. ನಿಂಬೆಯಿಂದಾಗಿ,  ಕೂದಲು ತೆಳ್ಳಗೆ ಮತ್ತು ನಿರ್ಜೀವವಾಗಬಹುದು. ಒಣ ಕೂದಲಿನ ಸಮಸ್ಯೆ ಇರುವವರು ನಿಂಬೆ ಅಥವಾ ನಿಂಬೆ ಎಣ್ಣೆಯನ್ನು ಬಳಸಬಾರದು.



https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ