Yoga For PCOD, PCOS: ಭಾರತದಲ್ಲಿ ಮಹಿಳೆಯರಲ್ಲಿ ವೇಗವಾಗಿ ಹೆಚ್ಚುತ್ತಿರುವ ರೋಗಗಳಲ್ಲಿ ಪಿಸಿಒಡಿ (PCOD) ಮತ್ತು ಪಿಸಿಓಎಸ್ (PCOS) ಪ್ರಮುಖ ಸಮಸ್ಯೆಗಳಾಗಿವೆ.  ಈ ಎರಡೂ ಕಾಯಿಲೆಗಳಿಂದಾಗಿ, ಮಹಿಳೆಯರಲ್ಲಿ ಬಂಜೆತನದ ಅಪಾಯವೂ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಸಮಸ್ಯೆಯೊಂದಿಗೆ ಹೆಣಗಾಡುತ್ತಿರುವ ಮಹಿಳೆಯರು ಅದನ್ನು ತೊಡೆದುಹಾಕಲು ಔಷಧಿಗಳ ಮೊರೆ ಹೋಗುತ್ತಾರೆ. ಆದರೆ ಇಂದು ಕೆಲವು ಯೋಗಾಸನಗಳು ಪಿಸಿಒಡಿ ಮತ್ತು ಪಿಸಿಓಎಸ್ ಅನ್ನು ಮೂಲದಿಂದ ತೆಗೆದುಹಾಕುತ್ತವೆ ಎಂದು ಹೇಳಲಾಗುತ್ತದೆ.


COMMERCIAL BREAK
SCROLL TO CONTINUE READING

ಚಕ್ಕಿ ಚಲಾಸನ- ಇದನ್ನು ಮಾಡಲು, ನೀವು ಎರಡೂ ಕಾಲುಗಳನ್ನು ಸಂಪೂರ್ಣವಾಗಿ ವಿಸ್ತರಿಸಿಕೊಂಡು ಕುಳಿತುಕೊಳ್ಳಬೇಕು. ನಂತರ ಕೈಗಳನ್ನು ಹಿಡಿದು ತೋಳುಗಳನ್ನು ಭುಜಗಳಿಗೆ ನೇರವಾಗಿ ಮುಂದೆ ಇರಿಸಿ. ದೀರ್ಘವಾದ ಆಳವಾದ ಉಸಿರನ್ನು ತೆಗೆದುಕೊಂಡು, ನಿಮ್ಮ ದೇಹದ ಮೇಲಿನ ಭಾಗವನ್ನು ಮುಂದಕ್ಕೆ ತಂದು ಕಾಲ್ಪನಿಕ ವಲಯವನ್ನು ಮಾಡುವ ಬಲಭಾಗಕ್ಕೆ ಚಲಿಸಲು ಪ್ರಾರಂಭಿಸಿ. ಉಸಿರು ತೆಗೆದುಕೊಳ್ಳುತ್ತಾ ಬಲದಿಂದ ಮುಂದೆ ಮತ್ತು  ಉಸಿರನ್ನು ಬಿಡುತ್ತಾ ಎಡಭಾಗದಿಂದ ಹಿಂದಕ್ಕೆ ಅರ್ಥಾತ್ ಮೊದಲಿನ ಸ್ಥಿತಿಗೆ ಬನ್ನಿ. ಇದರೊಂದಿಗೆ, ತೋಳುಗಳು, ಹೊಟ್ಟೆ, ಸೊಂಟದ ಭಾಗ ಮತ್ತು ಕಾಲುಗಳಲ್ಲಿ ಹಿಗ್ಗಿಸುವಿಕೆಯನ್ನು ನೀವು ಅನುಭವಿಸುವಿರಿ. ಒಂದರ್ಥದಲ್ಲಿ ರಾಗಿ ಕಲ್ಲನ್ನು ಬೀಸುವ ರೀತಿ ಈ ಆಸನವನ್ನು (Yoagasan) ಮಾಡಿ.


ಇದನ್ನೂ ಓದಿ- Yoga For Weight Loss: ತೂಕ ಕಡಿಮೆ ಮಾಡಲು ಸಹಾಯಕವಾಗುವ 5 ಉತ್ತಮ ಯೋಗಾಸನಗಳಿವು


ಚಕ್ಕಿ ಚಲಾಸನದ ಪ್ರಯೋಜನ: ಇದು ಗರ್ಭಾಶಯ, ಅಂಡಾಶಯ, ಮೂತ್ರಪಿಂಡ ಮತ್ತು ಹೊಟ್ಟೆಯ ಕೆಳಭಾಗದ ಸ್ನಾಯುಗಳನ್ನು ಮಸಾಜ್ ಮಾಡುತ್ತದೆ, ಇದು ಪಿಸಿಒಡಿ ಸಮಸ್ಯೆಯನ್ನು (PCOD Problem) ಕೊನೆಗೊಳಿಸುತ್ತದೆ.


ಸೂರ್ಯ ನಮಸ್ಕಾರ್- ಸೂರ್ಯ ನಮಸ್ಕಾರ್ ಆಸನವನ್ನು ಯೋಗಾಸನಗಳಲ್ಲಿ ಬಹಳ ಉತ್ತಮ ಆಸನ ಎಂದು ಹೇಳಲಾಗುತ್ತದೆ. ಈ ಅಭ್ಯಾಸವು ಸಂಪೂರ್ಣ ಯೋಗ ವ್ಯಾಯಾಮದ ಪ್ರಯೋಜನವನ್ನು ಹುಡುಕುವವರಿಗೆ ಸಮರ್ಥವಾಗಿದೆ. ಸೂರ್ಯ ನಮಸ್ಕಾರದ ಅಭ್ಯಾಸದಿಂದ ದೇಹವು ಆರೋಗ್ಯಕರವಾಗಿರುತ್ತದೆ. 'ಸೂರ್ಯ ನಮಸ್ಕಾರ್' ಮಹಿಳೆಯರು, ಪುರುಷರು, ಮಕ್ಕಳು, ಯುವಕರು ಮತ್ತು ವೃದ್ಧರಿಗೆ ಉಪಯುಕ್ತವಾಗಿದೆ ಎಂದು ಹೇಳಲಾಗುತ್ತದೆ.


ಸೂರ್ಯ ನಮಸ್ಕಾರ್ ಪ್ರಯೋಜನಗಳು :
ಸೂರ್ಯ ನಮಸ್ಕಾರ್ (Surya Namaskar) ಮಾಡುವ ಮೂಲಕ, ಪ್ಯೂಬಿಕ್ ಪ್ರದೇಶದ ಸ್ನಾಯುಗಳು, ಮೂತ್ರದ ರಕ್ತನಾಳಗಳು ಮತ್ತು ಹೊಟ್ಟೆಯ ಕೆಳಭಾಗವನ್ನು ಮಸಾಜ್ ಮಾಡಿ ಬಲಪಡಿಸಲಾಗುತ್ತದೆ. ಪಿಸಿಒಡಿ ಸಮಸ್ಯೆ ಅನ್ನು ನಿವಾರಿಸುವುದರ ಜೊತೆಗೆ, ಋತುಚಕ್ರವನ್ನು ಕ್ರಮಬದ್ಧಗೊಳಿಸುವಲ್ಲಿಯೂ ಇದು ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ- Cow Milk Vs Buffalo Milk: ಹಸು/ಎಮ್ಮೆ ಹಾಲಿನಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ


ಚಿಟ್ಟೆ ಆಸನ- ಚಿಟ್ಟೆ ಭಂಗಿ ಮಾಡಲು, ನಿಮ್ಮ ಎರಡೂ ಕಾಲುಗಳನ್ನು ನೇರವಾಗಿ ನಿಮ್ಮ ಮುಂದೆ ಕುಳಿತುಕೊಳ್ಳಿ. ಬೆನ್ನುಮೂಳೆಯನ್ನು ನೇರವಾಗಿ ಇರಿಸಿ. ಈಗ ಪಾದಗಳನ್ನು ಜೋಡಿಸಿ  ಕೈಗಳಿಂದ ಕಾಲ್ಬೆರಳುಗಳನ್ನು ಒಟ್ಟಿಗೆ ಹಿಡಿದುಕೊಳ್ಳಿ. ಸಾಮಾನ್ಯವಾಗಿ ಉಸಿರಾಡುತ್ತಾ ಚಿಟ್ಟೆ ರೆಕ್ಕೆಯಂತೆ ನಿಮ್ಮ ತೊಡೆಯನ್ನು ಅರ್ಥಾತ್ ನಿಮ್ಮ ಎರಡೂ ಕಾಲುಗಳನ್ನು ಒಟ್ಟಿಗೆ ಮೇಲಕ್ಕೆ ಸರಿಸಿ ನಂತರ ಅವುಗಳನ್ನು ಕೆಳಕ್ಕೆ ಇಳಿಸಿ. ಒಂದು ದಿನಕ್ಕೆ ನೀವು ಇದನ್ನು 15 ರಿಂದ 20 ಬಾರಿ ಮಾಡಬೇಕು.


ಚಿಟ್ಟೆ ಆಸನದ ಪ್ರಯೋಜನಗಳು :
ಇದು ದೇಹದ ಕೆಳಗಿನ ಭಾಗದ ನರಗಳನ್ನು ಬಲಪಡಿಸುತ್ತದೆ ಮತ್ತು ಪ್ಯುಬಿಕ್ ಪ್ರದೇಶದಲ್ಲಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ, ಇದು ಹಾರ್ಮೋನುಗಳನ್ನು ನಿಯಂತ್ರಣದಲ್ಲಿಡುತ್ತದೆ.


(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ತಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.  ಈ ಮಾಹಿತಿಯನ್ನು ಅನುಸರಿಸುವ ಮುನ್ನ ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆ ಪಡೆಯುವುದು ಉತ್ತಮ)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.