ನವದೆಹಲಿ: ತುಪ್ಪ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ದೇಸಿ ತುಪ್ಪ ಪ್ರಾಚೀನ ಕಾಲದಿಂದಲೂ ಭಾರತೀಯ ಪಾಕಪದ್ಧತಿ ಮತ್ತು ಆಯುರ್ವೇದ ಔಷಧದ ಪ್ರಮುಖ ಮೂಲವಾಗಿದೆ. ಅನೇಕ ಕಾಯಿಲೆಗಳನ್ನು ನಿವಾರಿಸಲು ದೇಸಿ ತುಪ್ಪವನ್ನು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಆದರೆ ತುಪ್ಪ ಶುದ್ಧವಾಗಿದ್ದಾಗ ಮಾತ್ರ ಅದರ ಪ್ರಯೋಜನ ಲಭ್ಯವಾಗಲಿದೆ. ಇಂದು ನಾವು ಅಂತಹ ಕೆಲವು ದೇಶೀಯ ಸುಳಿವುಗಳನ್ನು ನಿಮಗೆ ತಿಳಿಸುತ್ತೇವೆ, ಇದರಿಂದಾಗಿ ಮಾರುಕಟ್ಟೆಯಿಂದ ಖರೀದಿಸಿದ ತುಪ್ಪ ಶುದ್ಧವಾಗಿದೆಯೋ ಅಥವಾ ನಕಲಿಯೇ ಎಂಬುದನ್ನು ಕೆಲವೇ ನಿಮಿಷಗಳಲ್ಲಿ ತಿಳಿಯಬಹುದು.
ಕುದಿಯುವಿಕೆಯು ಸತ್ಯವನ್ನು ಬಹಿರಂಗಪಡಿಸುತ್ತದೆ:
ಮೊದಲು ಒಂದು ಪಾತ್ರೆಯಲ್ಲಿ 4 ರಿಂದ 5 ಟೀ ಚಮಚ ತುಪ್ಪ ಹಾಕಿ ಚೆನ್ನಾಗಿ ಕುದಿಸಿ, ತದನಂತರ ಅದೇ ಪಾತ್ರೆಯಲ್ಲಿ ಅದನ್ನು ಸುಮಾರು 24 ಗಂಟೆಗಳ ಕಾಲ ಬಿಡಿ. 24 ಗಂಟೆಗಳ ನಂತರವೂ ತುಪ್ಪವು (Ghee) ಮರಳು ಮರಳಾಗಿದ್ದು ಸುಮಧುರ ವಾಸನೆಯಿಂದ ಕೂಡಿದ್ದರೆ, ತುಪ್ಪ ಶುದ್ಧವಾಗಿದೆ ಎಂದು ಅರ್ಥಮಾಡಿಕೊಳ್ಳಿ. ಆದರೆ ಈ ಎರಡೂ ವಿಷಯಗಳು ತುಪ್ಪದಿಂದ ಕಾಣೆಯಾಗಿದ್ದರೆ, ಆ ತುಪ್ಪವನ್ನು ಆಹಾರ ಅಥವಾ ಔಷಧಿಗಾಗಿ ಬಳಸದೇ ಇದ್ದರೆ ಒಳ್ಳೆಯದು.
ಉಪ್ಪು ಸೇರಿಸುವ ಮೂಲಕ ತುಪ್ಪದ ಬಣ್ಣವನ್ನು ಪರಿಶೀಲಿಸಿ:
ದೇಸಿ ತುಪ್ಪದ (Desi Ghee) ಶುದ್ಧತೆಯನ್ನು ಪರೀಕ್ಷಿಸಲು ನೀವು ಉಪ್ಪನ್ನು ಸಹ ಬಳಸಬಹುದು. ಇದಕ್ಕಾಗಿ ಮೊದಲು ಎರಡು ಚಮಚ ತುಪ್ಪ, ಅರ್ಧ ಟೀಸ್ಪೂನ್ ಉಪ್ಪು ಮತ್ತು ಒಂದು ಪಿಂಚ್ ಹೈಡ್ರೋಕ್ಲೋರಿಕ್ ಆಮ್ಲವನ್ನು ಒಂದು ಪಾತ್ರೆಯಲ್ಲಿ ಬೆರೆಸಿ 20 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ. 20 ನಿಮಿಷಗಳ ನಂತರ ನೀವು ತುಪ್ಪದ ಬಣ್ಣವನ್ನು ಪರಿಶೀಲಿಸಿ. ತುಪ್ಪ ಯಾವುದೇ ಬಣ್ಣವನ್ನು ಬಿಡದಿದ್ದರೆ ತುಪ್ಪ ಶುದ್ಧವಾಗಿದೆ ಎಂದರ್ಥ. ಆದರೆ ತುಪ್ಪವು ಕೆಂಪು ಅಥವಾ ಇನ್ನಾವುದೇ ಬಣ್ಣದಲ್ಲಿ ಗೋಚರಿಸಿದರೆ, ತುಪ್ಪ ನಕಲಿಯಾಗಿರಬಹುದು. ಅಂದರೆ ತುಪ್ಪದಲ್ಲಿ ಬೇರೆ ಏನನ್ನಾದರೂ ಮಿಕ್ಸ್ ಮಾಡಿರಬಹುದು ಎಂದು ಅರ್ಥ ಮಾಡಿಕೊಳ್ಳಿ.
ಇದನ್ನೂ ಓದಿ - ಕರೋನಾ ಕಾಲದಲ್ಲಿ ತರಕಾರಿ ಖರೀದಿಸುವಾಗ ಈ ತಪ್ಪುಗಳನ್ನು ಮಾಡಲೇಬೇಡಿ.!
ನೀರು ತುಪ್ಪದ ಶುದ್ಧತೆಯನ್ನು ಗುರುತಿಸುತ್ತದೆ :
ಮೊದಲನೆಯದಾಗಿ, ನೀವು ಒಂದು ಲೋಟದ ತುಂಬಾ ನೀರನ್ನು ತೆಗೆದುಕೊಳ್ಳಿ. ಅದರಲ್ಲಿ ಒಂದು ಟೀಚಮಚ ದೇಸಿ ತುಪ್ಪವನ್ನು ಹಾಕಬೇಕು. ಬಳಿಕ ತುಪ್ಪ ನೀರಿನ ಮೇಲೆ ತೇಲುತ್ತಿದ್ದರೆ ಅದು ಶುದ್ಧ ತುಪ್ಪ. ನೀವು ನೀರಿನಲ್ಲಿ ತುಪ್ಪ ಹಾಕಿದೊಡನೆ ಅದು ತಳದಲ್ಲಿ ಕುಳಿತರೆ ಅಂತಹ ತುಪ್ಪ ನಕಲಿಯಾಗಿರಬಹುದು.
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ತಾನ್ ಕನ್ನಡ ಪುಷ್ಟೀಕರಿಸುವುದಿಲ್ಲ. ಈ ಮಾಹಿತಿಯನ್ನು ಅನುಸರಿಸುವ ಮುನ್ನ ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆ ಪಡೆಯುವುದು ಉತ್ತಮ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.