Cow Milk Vs Buffalo Milk: ಹಸು/ಎಮ್ಮೆ ಹಾಲಿನಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ

Cow Milk Vs Buffalo Milk: ಪೋಷಕಾಂಶಗಳ ಆಧಾರದ ಮೇಲೆ ಹೇಳುವುದಾದರೆ, ಹಸುವಿನ ಹಾಲಿನಲ್ಲಿ ಕೊಬ್ಬು ಕಡಿಮೆ ಇರುತ್ತದೆ. ಹಸುವಿನ ಹಾಲು 3-4 ಪ್ರತಿಶತದಷ್ಟು ಕೊಬ್ಬಿನ ಅಂಶವನ್ನು ಹೊಂದಿದ್ದರೆ, ಎಮ್ಮೆ ಹಾಲಿನಲ್ಲಿ 7-8 ಪ್ರತಿಶತದಷ್ಟು ಕೊಬ್ಬು ಇರುತ್ತದೆ. ಇದಲ್ಲದೆ, ಎಮ್ಮೆಯ ಹಾಲಿನಲ್ಲಿರುವ ಪ್ರೋಟೀನ್ ಹಸುವಿನ ಹಾಲಿಗೆ ಹೋಲಿಸಿದರೆ 10-11 ಶೇಕಡಾ ಹೆಚ್ಚಾಗಿದೆ.

Written by - Yashaswini V | Last Updated : Jun 20, 2021, 11:25 AM IST
  • ಹಸುವಿನ ಹಾಲು ಸುಲಭವಾಗಿ ಜೀರ್ಣವಾಗುತ್ತದೆ
  • ಒಂದು ಕಪ್ ಎಮ್ಮೆ ಹಾಲಿನಲ್ಲಿ 237 ಕ್ಯಾಲೋರಿ ಇರುತ್ತದೆ
  • ಒಂದು ಕಪ್ ಹಸುವಿನ ಹಾಲಿನಲ್ಲಿ 148 ಕ್ಯಾಲೋರಿ ಇರುತ್ತದೆ
Cow Milk Vs Buffalo Milk: ಹಸು/ಎಮ್ಮೆ ಹಾಲಿನಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ  title=
ಹಸುವಿನ ಹಾಲು, ಎಮ್ಮೆ ಹಾಲಿನಲ್ಲಿ ಯಾವುದು ಉತ್ತಮ

ಬೆಂಗಳೂರು: ಹಾಲು ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ, ಇದರಲ್ಲಿ ಅನೇಕ ಪೋಷಕಾಂಶಗಳಿವೆ. ಈ ಕಾರಣಕ್ಕಾಗಿ ಪ್ರತಿಯೊಬ್ಬರಿಗೂ ಹಾಲು ಕುಡಿಯುವಂತೆ ಸಲಹೆ ನೀಡಲಾಗುತ್ತದೆ. ಆದರೆ ಹಸು ಅಥವಾ ಎಮ್ಮೆಯ ಹಾಲಿನಲ್ಲಿ (Cow Milk Vs Buffalo Milk) ಯಾವುದು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂಬ ಬಗ್ಗೆ ಅನೇಕ ಬಾರಿ ಚರ್ಚೆ ನಡೆಯುತ್ತಲೇ ಇರುತ್ತದೆ. 

ಹಸು ಮತ್ತು ಎಮ್ಮೆ ಹಾಲಿನ ನಡುವಿನ ವ್ಯತ್ಯಾಸ:
>> ಹಸುವಿನ ಹಾಲು (Cow Milk) ಎಮ್ಮೆ ಹಾಲಿಗಿಂತ ಹಗುರವಾಗಿದೆ. 
>> ಹಸುವಿನ ಹಾಲಿನಲ್ಲಿ ಕೊಬ್ಬು ಕಡಿಮೆ ಇರುತ್ತದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ. ಈ ಕಾರಣಕ್ಕಾಗಿ, ಹಸುವಿನ ಹಾಲನ್ನು ಮಕ್ಕಳಿಗೆ ಸಹ ನೀಡಲಾಗುತ್ತದೆ. 
>> ಹಸುವಿನ ಹಾಲನ್ನು ಕಾಯಿಸಿ ಒಂದೆರಡು ದಿನ ಇಡಬಹುದು. ಆದರೆ ಎಮ್ಮೆಯ ಹಾಲನ್ನು (Buffalo Milk) ಹಲವಾರು ದಿನಗಳವರೆಗೆ ಇಡಬಹುದು. 
>> ಹಸುವಿನ ಹಾಲಿನಲ್ಲಿ ಹೆಚ್ಚಿನ ನೀರಿನ ಅಂಶವಿದೆ. ಇದು ಘನವಸ್ತುಗಳಲ್ಲಿ ಕಡಿಮೆ ಮತ್ತು ಹಸುವಿನ 90% ಹಾಲು ನೀರಿನಿಂದ ಕೂಡಿದೆ. 
>> ಮತ್ತೊಂದೆಡೆ, ಎಮ್ಮೆ ಹಾಲಿನಲ್ಲಿ ರಂಜಕ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ನಂತಹ ಹೆಚ್ಚಿನ ಖನಿಜಗಳಿವೆ (Minerals). 

ಇದನ್ನೂ ಓದಿ- Health Tips: ನಿತ್ಯ ರಾತ್ರಿ ಹಾಲಿನೊಂದಿಗೆ ಈ ಹಣ್ಣನ್ನು ಸೇವಿಸಿ, ದೂರವಾಗುತ್ತೆ ಈ ಎಲ್ಲಾ ಸಮಸ್ಯೆ

ಪೋಷಕಾಂಶಗಳ ಆಧಾರದ ಮೇಲೆ ಯಾವ ಹಾಲು ಉತ್ತಮವಾಗಿದೆ?
ಪೋಷಕಾಂಶಗಳ ಆಧಾರದ ಮೇಲೆ ಹೇಳುವುದಾದರೆ, ಹಸುವಿನ ಹಾಲಿನಲ್ಲಿ (Cow Milk) ಕೊಬ್ಬು ಕಡಿಮೆ ಇರುತ್ತದೆ. ಹಸುವಿನ ಹಾಲು 3-4 ಪ್ರತಿಶತದಷ್ಟು ಕೊಬ್ಬಿನ ಅಂಶವನ್ನು ಹೊಂದಿದ್ದರೆ, ಎಮ್ಮೆ ಹಾಲಿನಲ್ಲಿ  (Buffalo Milk) 7-8 ಪ್ರತಿಶತದಷ್ಟು ಕೊಬ್ಬು ಇರುತ್ತದೆ. ಇದಲ್ಲದೆ, ಎಮ್ಮೆಯ ಹಾಲಿನಲ್ಲಿರುವ ಪ್ರೋಟೀನ್ ಹಸುವಿನ ಹಾಲಿಗೆ ಹೋಲಿಸಿದರೆ 10-11 ಶೇಕಡಾ ಹೆಚ್ಚಾಗಿದೆ. ಎಮ್ಮೆಯ ಹಾಲಿನಲ್ಲಿ ಕೊಲೆಸ್ಟ್ರಾಲ್ ಕಡಿಮೆ ಇರುವುದರಿಂದ ಅಧಿಕ ರಕ್ತದೊತ್ತಡ, ಮೂತ್ರಪಿಂಡ ಕಾಯಿಲೆ ಮತ್ತು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಎಮ್ಮೆ ಹಾಲು ಕುಡಿಯಲು ಸೂಚಿಸಲಾಗುತ್ತದೆ.

ಇದನ್ನೂ ಓದಿ- Foods Avoid With Milk: ಹಾಲು ಕುಡಿಯುವ ಮುನ್ನ ಐದು ಆಹಾರಗಳನ್ನು ಖಂಡಿತಾ ಸೇವಿಸಬೇಡಿ

ಹಸು ಮತ್ತು ಎಮ್ಮೆಯ ಹಾಲಿನಲ್ಲಿರುವ ಕ್ಯಾಲೊರಿಗಳ ಬಗ್ಗೆ ಹೇಳುವುದಾದರೆ, ಎಮ್ಮೆಯ ಹಾಲಿನಲ್ಲಿ ಹಸುವಿನ ಹಾಲಿಗಿಂತ ಹೆಚ್ಚಿನ ಕ್ಯಾಲೊರಿಗಳಿವೆ. ಒಂದು ಕಪ್ ಎಮ್ಮೆ ಹಾಲು 237 ಕ್ಯಾಲೊರಿಗಳನ್ನು ಹೊಂದಿದ್ದರೆ, ಹಸುವಿನ ಹಾಲಿನಲ್ಲಿ 148 ಕ್ಯಾಲೊರಿಗಳಿವೆ. ನಿಮ್ಮ ದೇಹದ ಅಗತ್ಯಕ್ಕೆ ಅನುಗುಣವಾಗಿ ನೀವು ಯಾವ ಹಾಲು ಕುಡಿಯುವುದು ಉತ್ತಮ ಎಂದು ನೀವು ನಿರ್ಧರಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News