ನವದೆಹಲಿ : ಹಾವು ಕಂಡರೆ ಎಂಥವರ ಕೈ ಕಾಲು ಕೂಡಾ ನಡುಗಿ ಬಿಡುತ್ತದೆ. ಹಾವೆಂದರೆ ಸಾಕು ಮನಸ್ಸಿನಲ್ಲಿ ವಿಚಿತ್ರ ಭಯ ಕಾಡುತ್ತದೆ. ಹಾವನ್ನು ಮುಟ್ಟುವುದಿರಲಿ, ಅದರತ್ತ ನೋಡುವ ಧೈರ್ಯ ಕೂಡಾ ಮಾಡಲು ಹೋಗುವುದಿಲ್ಲ.  ಆದರೆ, ಈ ವೈರಲ್ ವಿಡಿಯೋದಲ್ಲಿ 2 ವರ್ಷದ ಮಗು ವಿಷಪೂರಿತ ಹಾವಿನೊಂದಿಗೆ ಸರಾಗವಾಗಿ ಆಟವಾಡುತ್ತಿದೆ. 


COMMERCIAL BREAK
SCROLL TO CONTINUE READING

ಈ ಮಗುವಿನ ತಂದೆ, ಮಗು ಹಾವಿನೊಂದಿಗೆ ಆಟವಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದವರಿಗೆ ಆಶ್ಚರ್ಯ, ಆಘಾತ ಒಟ್ಟಿಗೆ ಆಗುವುದು ಸಹಜ. ಹಾವು ಕಂಡಾಗ ಮೈಲಿ ದೂರ ಓಡುವ ನಮಗೆ  2 ವರ್ಷದ ಕಂದಮ್ಮನ ಈ ವಿಡಿಯೋ (Video) ನೋಡಿದರೆ ಮೈ ಜುಮ್ಮೆನಿಸುತ್ತದೆ.


Viral Video: ವರ ತಾಳಿ ಕಟ್ಟುತ್ತಿದ್ದ ವೇಳೆ ವಧು ಏಕೆ ಹೀಗೆ ಮಾಡಿದಳು..?


ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿರುವ ವಿಡಿಯೋವನ್ನು ಆಸ್ಟ್ರೇಲಿಯಾದಲ್ಲಿ ಚಿತ್ರೀಕರಿಸಲಾಗಿದೆ.  ಈ ಮಗುವಿನ ತಂದೆ, ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ (instagram) ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.  ತನ್ನ ಎರಡು ವರ್ಷದ ಮಗು ಹಾವಿನೊಂದಿಗೆ (snake) ಆಟವಾಡುತ್ತಿರುವ ಬಗ್ಗೆ ಅವರಿಗೂ ಹೆಮ್ಮೆ. 


ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ (Viral video) ,  ಮಗು ಹಾವಿನ ಬಾಲವನ್ನು ಹಿಡಿದು ಎಳೆಯುವುದನ್ನು ಕಾಣಬಹುದು. ಹಾವಿನೊಂದಿಗೆ ಆಟವಾಡುತ್ತಿರುವ ವೇಳೆ, ಮಗುವಿನ ಮುಖದಲ್ಲಿ ಕಿಂಚಿತ್ತೂ ಭಯ ಎನ್ನುವುದು ಕಾಣುವುದೇ ಇಲ್ಲ.  ಸುಮಾರು ಎರಡು ಮೀಟರ್ ಉದ್ದದ ಹಾವನ್ನು ಈ ಪುಟ್ಟ ಪೋರ ನಿಯಂತ್ರಿಸುತ್ತಿರುವುದು ನೋಡಿದರೆ, ಮಗುವಿಗೆ  ಈ ಕಲೆ ಕರಗತವಾಗಿದೆ ಅನ್ನಿಸುತ್ತದೆ. 


ಇದನ್ನೂ ಓದಿ : Viral Video : ಮದುವೆ ಮಂಟಪದಲ್ಲೇ ವರನೆದುರೇ ಬೇರೊಬ್ಬನಿಗೆ ಹಾರ ಹಾಕಿದ ವಧು..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.