Viral Video: ಬೆಕ್ಕಿನೊಂದಿಗೆ ಈ ಪುಟ್ಟ ಬಾಲಕ ಏನು ಮಾಡಿದ್ದಾನೆ ನೋಡಿ...

ಅನೇಕರು ಸಣ್ಣ ವಯಸ್ಸಿನಲ್ಲಿಯೇ ಹಂಚಿ ತಿನ್ನುವ ಗುಣ ಹೊಂದಿರುವ ಪುಟ್ಟ ಬಾಲಕನ ಹೃದಯ ವೈಶಾಲ್ಯತೆಗೆ ಮತ್ತು ಪ್ರಾಣಿಪ್ರೀತಿಗೆ ಮನಸೋತಿದ್ದಾರೆ.

Last Updated : Sep 19, 2021, 01:17 PM IST
  • ಬೆಕ್ಕಿಗೆ ತನ್ನ ಕೈಯಲ್ಲಿದ್ದ ಆಹಾರ ಕೊಡಲು ಪ್ರಯತ್ನಿಸಿದ ಪುಟ್ಟ ಬಾಲಕ
  • ಬಾಲಕನ ಹೃದಯ ವೈಶಾಲ್ಯತೆ ಕಂಡು ಮೆಚ್ಚುಗೆ ಸೂಚಿಸಿದ ನೆಟಿಜನ್ ಗಳು
  • ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಬೆಕ್ಕಿಗೆ ಬಾಲಕ ತೋರಿದ ಪ್ರೀತಿಯ ವಿಡಿಯೋ
Viral Video: ಬೆಕ್ಕಿನೊಂದಿಗೆ ಈ ಪುಟ್ಟ ಬಾಲಕ ಏನು ಮಾಡಿದ್ದಾನೆ ನೋಡಿ... title=
ಬಾಲಕನ ಪ್ರಾಣಿಪ್ರೀತಿಗೆ ನೆಟಿಜನ್ ಗಳು ಫಿದಾ (Photo Courtesy: Twitter/@buitengebieden_)

ನವದೆಹಲಿ: ಪುಟ್ಟ ಬಾಲಕನೊಬ್ಬ ಬೆಕ್ಕಿನೊಂದಿಗೆ ಆಹಾರ ಹಂಚಿಕೊಳ್ಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣ(Social Media)ದಲ್ಲಿ ಸಖತ್ ವೈರಲ್ ಆಗಿದೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ಪುಟ್ಟ ಹುಡುಗ ಪ್ರಾಣಿಪ್ರೀತಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಈ ವಿಡಿಯೋ(Viral Video)ದಲ್ಲಿ ಮುದ್ದಾದ ಪುಟ್ಟ ಬಾಲಕನೊಬ್ಬ ಬೆಕ್ಕಿನ ಹತ್ತಿರ ಬರುತ್ತಾನೆ. ಆ ಕಡೆ ಈ ಕಡೆ ನೋಡುವ ಮಗು ತನ್ನ ಕೈಯಲ್ಲಿದ್ದ ಬ್ರೆಡ್ ನ ತುಂಡನ್ನು ಬೆಕ್ಕಿಗೆ ನೀಡಲು ಪ್ರಯತ್ನಿಸಿದ್ದಾನೆ. ಈಗೋ ಈ ಕಡೆ ನೋಡು... ಎಂದು ಬೆಕ್ಕಿಗೆ ಬ್ರೆಡ್ ನ ತುಂಡು ಹಿಡಿದುಕೊಂಡು ಬಾಲಕ ಕೈಚಾಚಿರುವ ವಿಡಿಯೋವನ್ನು ನೋಡಿದ ನೆಟಿಜನ್‌ಗಳು ಮೆಚ್ಚಿಕೊಂಡಿದ್ದಾರೆ. ಮುಗ್ಧ ಬಾಲಕನ ಪ್ರಾಣಿಪ್ರೀತಿಗೆ ಮನಸೋತು ಅನೇಕರು ವಿಡಿಯೋ ಶೇರ್ ಮಾಡಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಯಾರಾಗ್ತಾರೆ ಪಂಜಾಬ್ ನೂತನ ಮುಖ್ಯಮಂತ್ರಿ? ರೇಸ್​ನಲ್ಲಿ ಇರುವ ಹೆಸರುಗಳಿವು..  

18 ಸೆಕೆಂಡುಗಳ ಈ ವಿಡಿಯೋದಲ್ಲಿ ಪುಟ್ಟ ಬಾಲಕ ಬೆಕ್ಕಿ(Cat)ಗೆ ತನ್ನಲ್ಲಿರುವ ಬ್ರೆಡ್ ನೀಡುತ್ತಿರುವ ದೃಶ್ಯವನ್ನು ಅದ್ಭುತವಾಗಿ ಸೆರೆಹಿಡಿಯಲಾಗಿದೆ. @buitengebieden_ ಟ್ವಿಟರ್ ಖಾತೆಯಲ್ಲಿ ‘Sharing is caring’ ಎಂಬ ಕ್ಯಾಪ್ಶನ್ ಜೊತೆಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಪುಟ್ಟ ಬಾಲಕನ ಮುಗ್ಧತೆ, ಆತನು ಬೆಕ್ಕಿಗೆ ತೋರಿದ ಪ್ರೀತಿ-ಕಾಳಜಿ ನೋಡುವ ಪ್ರತಿಯೊಬ್ಬರ ಮೊಗದಲ್ಲಿಯೂ ಮಂದಹಾಸ ಮೂಡಿಸಿದೆ.

ಇದನ್ನೂ ಓದಿ: ಇಡಿ ದೇಶದಲ್ಲೇ ಕರ್ನಾಟಕದಲ್ಲಿ ಅಧಿಕ ಬಾಲ್ಯವಿವಾಹ ಪ್ರಕರಣಗಳು ದಾಖಲು ..!  

ಅನೇಕರು ಸಣ್ಣ ವಯಸ್ಸಿನಲ್ಲಿಯೇ ಹಂಚಿ ತಿನ್ನುವ ಗುಣ ಹೊಂದಿರುವ ಪುಟ್ಟ ಬಾಲಕನ ಹೃದಯ ವೈಶಾಲ್ಯತೆಗೆ ಮತ್ತು ಪ್ರಾಣಿಪ್ರೀತಿಗೆ ಮನಸೋತಿದ್ದಾರೆ. ನೂರಾರು ಕಾಲ ಚೆನ್ನಾಗಿರುವಂತೆ ಪುಟ್ಟ ಬಾಲಕನಿಗೆ ಅನೇಕರು ಆಶೀರ್ವದಿಸಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು, ನೋಡುವ ಪ್ರತಿಯೊಬ್ಬರಿಗೂ ಇಷ್ಟವಾಗುತ್ತಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News