ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ NDA-2.O ಸರ್ಕಾರಕ್ಕೆ ಇಂದಿಗೆ (ಮೇ 30) ಅಧಿಕಾರ ಚುಕ್ಕಾಣಿ ಹಿಡಿದು ಎರಡು ವರ್ಷಗಳನ್ನು ಪೂರ್ಣಗೊಳಿಸುತ್ತಿದೆ.


COMMERCIAL BREAK
SCROLL TO CONTINUE READING

ಈ ಬಾರಿ ಕೊರೋನಾ(Corona) ಕಾರಣದಿಂದ ಮೋದಿ ಸರ್ಕಾರದ ಸಂಪುಟ ಸಚಿವರು ಸಂಭ್ರಮಾಚರಣೆ ಮಾಡುತ್ತಿಲ್ಲ. ದೇಶಾದ್ಯಂತ ಕಳೆದ ಎರಡು ತಿಂಗಳಿನಿಂದ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಬಿಜೆಪಿ ಪಾಳಯದಲ್ಲಿ ಸಂಭ್ರಮದ ಕಳೆಯಿಲ್ಲ.


ಇದನ್ನೂ ಓದಿ : SBI Alert! ಬದಲಾಗಿದೆ ನಿಯಮ : ಈಗ ದಿನಕ್ಕೆ ಇಷ್ಟು ಹಣ ಮಾತ್ರ withdraw ಮಾಡಬಹುದು


ದೇಶದ ಜನತೆ ಇನ್ನಿಲ್ಲದ ಕಷ್ಟದ ಪರಿಸ್ಥಿತಿಯನ್ನ ಎದುರಿಸುತ್ತಿದ್ದಾರೆ. ಹೀಗಾಗಿ ಬಿಜೆಪಿ(BJP) ಈ ಬಾರಿ ಸರ್ಕಾರದ ವರ್ಷಾಚರಣೆಯನ್ನು ಇಂದು ಅಭಿವೃದ್ಧಿ ಕೆಲಸಕ್ಕೆ ಮೀಸಲಿಡಲು ತೀರ್ಮಾನಿಸಿದ್ದು, ದೇಶಾದ್ಯಂತ ಕನಿಷ್ಟ ಒಂದು ಲಕ್ಷ ಗ್ರಾಮಗಳಿಗೆ ಹೋಗಿ ಜನರನ್ನು ಸಂಪರ್ಕಿಸಿ ಅವರ ಕಷ್ಟಗಳಿಗೆ ಸ್ಪಂದಿಸುವಂತೆ ಬಿಜೆಪಿ ನಾಯಕರು ಸೂಚಿಸಿದ್ದಾರೆ.


ಇದನ್ನೂ ಓದಿ : ಪಿಎನ್ ಬಿ ಹಗರಣದ ಆರೋಪಿ Mehul Choksi ಫೋಟೋ ಬಹಿರಂಗ, ಕೈಗಳಲ್ಲಿ ಗಾಯದ ಗುರುತು ಪತ್ತೆ


ಕಳೆದ ವರ್ಷ ಕೇಂದ್ರದ ನಾಯಕರು ಸೇರಿದಂತೆ ಬಿಜೆಪಿಯ ನಾಯಕರು(BJP Leaders) NDA-2 ಸರ್ಕಾರದ ಮೊದಲ ವರ್ಷದ ಸಂದರ್ಭದಲ್ಲಿ ವರ್ಚುವಲ್ ರ‍್ಯಾಲಿಗಳನ್ನು ನಡೆಸಿ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದ್ದರು.


ಇದನ್ನೂ ಓದಿ : ದೆಹಲಿಯಲ್ಲಿ ಜೂನ್ 7 ರವರೆಗೆ ಲಾಕ್ ಡೌನ್ ವಿಸ್ತರಣೆ


ವಿರೋಧ ಪಕ್ಷಗಳ ಟೀಕೆ ಮೋದಿ ಸರ್ಕಾರ(Modi Govt)ದ ವಿರುದ್ಧ ಮುಂದುವರಿದೇ ಇದೆ. ಹೀಗಾಗಿ 2ನೇ ವರ್ಷದ ಆಚರಣೆ ಸಂದರ್ಭದಲ್ಲಿ ನಿನ್ನೆ ಮೋದಿ ಸರ್ಕಾರ ಕೋವಿಡ್ ನಿಂದ ಮೃತಪಟ್ಟ ಪೋಷಕರ ಅನಾಥ ಮಕ್ಕಳು 18 ವರ್ಷ ತುಂಬುವವರೆಗೆ ಅವರ ಸಂಪೂರ್ಣ ಶಿಕ್ಷಣ, ಆರೋಗ್ಯ ಸೌಲಭ್ಯವನ್ನು ನೋಡಿಕೊಳ್ಳುವುದಾಗಿ ಘೋಷಿಸಿದೆ. ಅಲ್ಲದೆ ಕೊರೋನಾ ರೋಗದ ಸಂದರ್ಭದಲ್ಲಿ ದೇಶದ ವೈದ್ಯಕೀಯ ಮತ್ತು ಆರ್ಥಿಕ ಸವಾಲುಗಳನ್ನು ಹೇಗೆ ಎದುರಿಸಲಿದೆ ಎಂಬುದನ್ನು ಕೂಡ ಮೋದಿ ಸರ್ಕಾರ ವಿವರಿಸಿದೆ.


ಇದನ್ನೂ ಓದಿ : PM Modi Big Announcement: ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ, 10 ಲಕ್ಷ ಪರಿಹಾರ ಧನ


ಜಮ್ಮು ಮತ್ತು ಕಾಶ್ಮೀರದ 370 ನೇ ವಿಧಿಯನ್ನು ರದ್ದುಗೊಳಿಸುವುದರಿಂದ ಹಿಡಿದು ಅಯೋಧ್ಯೆ(Ayodhya)ಯಲ್ಲಿ ರಾಮ ದೇವಾಲಯದ ನಿರ್ಮಾಣದವರೆಗಿನ ಬಿಜೆಪಿಯ ಸೈದ್ಧಾಂತಿಕ ಭರವಸೆಗಳ ಜೊತೆಗೆ, ಕೊರೋನಾದಿಂದ ಉಂಟಾದ ಸಂಕಷ್ಟಗಳ ಜೊತೆಗೆ, ಕಳೆದ ವರ್ಷ ತನ್ನ ವಾರ್ಷಿಕೋತ್ಸವದ ವಿಜಯೋತ್ಸವದ ಪ್ರಜ್ಞೆಯನ್ನು ತುಂಬಿದ್ದರೆ, ಈ ವರ್ಷ ಪರಿಸ್ಥಿತಿ ಭಿನ್ನವಾಗಿದೆ.


ಇದನ್ನೂ ಓದಿ : "ಜುಲೈ ಅಂತ್ಯದ ವೇಳೆ ಪ್ರತಿ ದಿನಕ್ಕೆ 1 ಕೋಟಿ ಭಾರತೀಯರಿಗೆ ಕೊರೊನಾ ಲಸಿಕೆ"


ಇನ್ನು 7-8 ತಿಂಗಳುಗಳಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ(Vidhan Sabha Election)ಗೆ ದಿನಾಂಕ ಘೋಷಣೆಯಾಗಲಿದೆ. ಮುಂದಿನ ವರ್ಷ ಜನವರಿಯಿಂದ ಮಾರ್ಚ್ ನಡುವೆ ಪಂಜಾಬ್, ಉತ್ತರಾಖಂಡ್, ಮಣಿಪುರ ಮತ್ತು ಗೋವಾ ರಾಜ್ಯಗಳಿಗೆ ಚುನಾವಣೆ ನಡೆಯಲಿವೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಕಾರ್ಯವೈಖರಿ ಪ್ರಮುಖವಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ