ಗುಜರಾತ್: ಕಂದಾಯ ಗುಪ್ತಚರ ನಿರ್ದೇಶನಾಲಯ (DRI)ದ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದು, ಬರೋಬ್ಬರಿ 21 ಸಾವಿರ ಕೋಟಿ ರೂ. ಮೌಲ್ಯದ 3 ಸಾವಿರ ಕೆಜಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಇದು ಭಾರತದಲ್ಲಿಯೇ ವಶಕ್ಕೆ ಪಡೆದ ಅತಿಹೆಚ್ಚು ಮೌಲ್ಯದ ಮಾದಕವಸ್ತು ಪ್ರಕರಣವಾಗಿದೆ. ಕಳೆದ ವಾರ ಗುಜರಾತ್‌ನ ಮುಂದ್ರಾ ಬಂದರಿನಲ್ಲಿ 2 ಕಂಟೇನರ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಅದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 21 ಸಾವಿರ ಕೋಟಿ ರೂ. ಮೌಲ್ಯದ ಡ್ರಗ್ಸ್(Drugs) ಪತ್ತೆಯಾಗಿತ್ತು ಎಂದು ವರದಿಯಾಗಿದೆ. ​


COMMERCIAL BREAK
SCROLL TO CONTINUE READING

ಡಿಆರ್‌ಐ  ಜಪ್ತಿ(Drugs Seized) ಮಾಡಿರುವ  ಈ ಮಾದಕ ವಸ್ತುಗಳನ್ನು ಭಾರತದಲ್ಲಿ ಹಂಚಿಕೆ ಮಾಡಲು ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಪ್ರಾರಂಭದಲ್ಲಿ ಈ ಡ್ರಗ್ಸ್​ ಮೌಲ್ಯ 3,500  ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಆದರೆ 6 ದಿನಗಳ ತೀವ್ರ ತನಿಖೆಯ ಬಳಿಕ ದೊಡ್ಡ ಪ್ರಮಾಣದ ಹೆರಾಯಿನ್ ಪತ್ತೆಯಾಗಿದ್ದರಿಂದ ಇದರ ಮೌಲ್ಯವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 21 ಸಾವಿರ ಕೋಟಿ ರೂ. ಇದೆ ಎಂದು ಅಂದಾಜಿಸಲಾಗಿದೆ.


ಸದ್ಯ ತಾಲಿಬಾನ್ ಆಳ್ವಿಕೆಯಲ್ಲಿರುವ ಅಫ್ಘಾನಿಸ್ತಾನ(Afghanistan)ದಲ್ಲಿ ತಯಾರಿಸಲಾಗಿರುವ ಹೆರಾಯಿನ್ ಮಾದಕವಸ್ತು ಸರಕನ್ನು ಸೆಪ್ಟೆಂಬರ್ 13-14ರಂದು ಇರಾನ್‌ನ ಅಬ್ಬಾಸ್ ಬಂದರಿನ ಮೂಲಕ ಗುಜರಾತ್‌ಗೆ ರವಾನಿಸಲಾಯಿತು. ಇಷ್ಟು ಪ್ರಮಾಣದ ಡ್ರಗ್ಸ್ ಅನ್ನು ಆಂಧ್ರಪ್ರದೇಶ ಮೂಲದ ಸಂಸ್ಥೆಯಿಂದ ಆಮದು ಮಾಡಿಕೊಂಡ ಅರೆ-ಸಂಸ್ಕರಿಸಿದ ಅಫ್ಘಾನ್ ಟಾಲ್ಕ್ ಪೌಡರ್ ಕಂಟೇನರ್‌ಗಳಲ್ಲಿ ಅಡಗಿಸಲಾಗಿತ್ತು ಎಂದು ತಿಳಿದುಬಂದಿದೆ.


ಇದನ್ನೂ ಓದಿ: ಉಧಂಪುರದಲ್ಲಿ ಸೇನಾ ಹೆಲಿಕಾಪ್ಟರ್ ಪತನ: ಇಬ್ಬರು ಪೈಲಟ್‌ಗಳು ಹುತಾತ್ಮ


ಜಾಗತಿಕ ಉಗ್ರ ಸಂಘಟನೆಗಳಾದ ಐಎಸ್‌ಐ(ISI) ಮತ್ತು ತಾಲಿಬಾನ್(Taliban) ಭಯೋತ್ಪಾದನಾ ಚಟುವಟಿಕೆಗಳಿಗೆ ಹಣ ನೀಡುವ ಏಕೈಕ ಮಾರ್ಗವಾಗಿ ಈ ಡ್ರಗ್ಸ್ ವ್ಯವಹಾರ ನಡೆಯುತ್ತದೆ ಎಂದು ಹೇಳಲಾಗಿದೆ. ಸದ್ಯ ವಶಕ್ಕೆ ಪಡೆಯಲಾಗಿರುವ ಹೆರಾಯಿನ್ ಅತ್ಯುತ್ತಮ ಗುಣಮಟ್ಟದ್ದು ಎಂದು ಮೂಲಗಳಿಂದ ತಿಳಿದುಬಂದಿದೆ.


ಪ್ರಕರಣ ಸಂಬಂಧ ಚೆನ್ನೈ ಮೂಲದ ದಂಪತಿಯನ್ನು ಬಂಧಿಸಲಾಗಿದೆ ಮತ್ತು ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶದ ಹಲವಾರು ಅಫ್ಘಾನ್ ಪ್ರಜೆಗಳನ್ನು ಏಜೆನ್ಸಿ ಬಂಧಿಸಿದೆ. ಇವರೆಲ್ಲರಿಗೂ ತಾಲಿಬಾನ್-ಐಎಸ್‌ಐ ಸಂಪರ್ಕ ಇರುವ ಶಂಕೆ ಹಿನ್ನೆಲೆ ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.   


ಇದನ್ನೂ ಓದಿ: ಸ್ಯಾಮ್‌ಸಂಗ್ ಬಿಡುಗಡೆ ಮಾಡಲಿದೆ ಭರ್ಜರಿ 5 ಜಿ ಸ್ಮಾರ್ಟ್‌ಫೋನ್‌, ವೈಶಿಷ್ಟ್ಯಗಳು ಏನಿರಲಿದೆ ಗೊತ್ತಾ ?


ಗುಪ್ತಚರ ಮಾಹಿತಿ ಮೇರೆಗೆ ಡಿಆರ್‌ಐ(DRI) ಅಧಿಕಾರಿಗಳು ಸೆಪ್ಟೆಂಬರ್ 16 ಮತ್ತು 17 ರಂದು ಕಂದಹಾರ್ ಮೂಲದ ಕಂಪನಿಯು ರಫ್ತು ಮಾಡಿದ 2 ಕಂಟೇನರ್‌ಗಳನ್ನು ಶೋಧಿಸಿದಾಗ ಗೊಡ್ಡ ಪ್ರಮಾಣದ ಮಾದಕವಸ್ತು ಪತ್ತೆಯಾಗಿತ್ತು. ಒಂದು ಕಂಟೇನರ್‌ನಲ್ಲಿ 1,999.58 ಕೆಜಿ ಹೆರಾಯಿನ್ ಅನ್ನು ಪ್ಯಾಕ್ ಮಾಡಲಾಗಿದ್ದು, 988.64 ಕೆಜಿ ಹೆರಾಯಿನ್ ಅನ್ನು 1 ದೊಡ್ಡ ಚೀಲದಲ್ಲಿ ಪತ್ತೆ ಮಾಡಲಾಗಿದೆ. ಭದ್ರತಾ ಮತ್ತು ಕಸ್ಟಮ್ಸ್ ಅಧಿಕಾರಿಗಳ ಗಮನಕ್ಕೆ ಬಾರದಿರಲೆಂದು ಅವುಗಳನ್ನು ಅಡಗಿಸಿಡಲಾಗಿತ್ತು. ಸದ್ಯ ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಇನ್ನಷ್ಟು ಜನರನ್ನು ಬಂಧಿಸುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.