ಸ್ಯಾಮ್‌ಸಂಗ್ ಬಿಡುಗಡೆ ಮಾಡಲಿದೆ ಭರ್ಜರಿ 5 ಜಿ ಸ್ಮಾರ್ಟ್‌ಫೋನ್‌, ವೈಶಿಷ್ಟ್ಯಗಳು ಏನಿರಲಿದೆ ಗೊತ್ತಾ ?

Galaxy F42 5G ಗ್ಯಾಲಕ್ಸಿ 5G 12-ಬ್ಯಾಂಡ್ ಬೆಂಬಲದೊಂದಿಗೆ ಬರುತ್ತದೆ. ಅಂದರೆ, ಫೋನಿನ ಸ್ಪೀಡ್ ಬಹಳ ಚೆನ್ನಾಗಿರುತ್ತದೆ. Galaxy 42 5 ಜಿ 64 ಎಮ್‌ಪಿ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ನೊಂದಿಗೆ ಬರುತ್ತದೆ ಎನ್ನಲಾಗಿದೆ.

Written by - Ranjitha R K | Last Updated : Sep 21, 2021, 04:01 PM IST
  • ಸ್ಯಾಮ್‌ಸಂಗ್ ಶೀಘ್ರದಲ್ಲೇ ಗ್ಯಾಲಕ್ಸಿ ಎಫ್ 42 5 ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ.
  • Galaxy F42 5G ಗ್ಯಾಲಕ್ಸಿ 5G 12-ಬ್ಯಾಂಡ್ ಬೆಂಬಲದೊಂದಿಗೆ ಬರುತ್ತದೆ.
  • ಗ್ಯಾಲಕ್ಸಿ F42 5G 64MP ಕ್ಯಾಮೆರಾವನ್ನು ಹೊಂದಿದೆ ಎನ್ನಲಾಗಿದೆ
ಸ್ಯಾಮ್‌ಸಂಗ್ ಬಿಡುಗಡೆ ಮಾಡಲಿದೆ ಭರ್ಜರಿ 5 ಜಿ ಸ್ಮಾರ್ಟ್‌ಫೋನ್‌,  ವೈಶಿಷ್ಟ್ಯಗಳು ಏನಿರಲಿದೆ ಗೊತ್ತಾ ? title=
ಸ್ಯಾಮ್‌ಸಂಗ್ ಶೀಘ್ರದಲ್ಲೇ ಗ್ಯಾಲಕ್ಸಿ ಎಫ್ 42 5 ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ. (phto zee news)

ನವದೆಹಲಿ : ಸ್ಯಾಮ್‌ಸಂಗ್ Galaxy F42 5G ಸ್ಮಾರ್ಟ್‌ಫೋನ್ ಅನ್ನು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಬಿಡುಗಡೆ ಮಾಡಬಹುದು. ಈ ಫೋನಿನ ಮಾರಾಟವು ಅಕ್ಟೋಬರ್‌ನಲ್ಲಿ ಪ್ರಾರಂಭವಾಗಲಿದೆ ಎನ್ನಲಾಗಿದೆ. ಇದು ಗ್ಯಾಲಕ್ಸಿ F ಸರಣಿಯಲ್ಲಿ ಸ್ಯಾಮ್‌ಸಂಗ್‌ನ ಮೊದಲ 5G ಸ್ಮಾರ್ಟ್‌ಫೋನ್ ಆಗಿದೆ. ಫೋನಿನ ವೈಶಿಷ್ಟ್ಯಗಳು ಅತ್ಯುತ್ತಮವಾಗಿದೆ.  

Galaxy F42 5Gವಿಶೇಷತೆಗಳು :
Galaxy F42 5G ಗ್ಯಾಲಕ್ಸಿ 5G 12-ಬ್ಯಾಂಡ್ ಬೆಂಬಲದೊಂದಿಗೆ ಬರುತ್ತದೆ. ಅಂದರೆ, ಫೋನಿನ ಸ್ಪೀಡ್ ಬಹಳ ಚೆನ್ನಾಗಿರುತ್ತದೆ. Galaxy 42 5 ಜಿ 64 ಎಮ್‌ಪಿ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ನೊಂದಿಗೆ ಬರುತ್ತದೆ ಎನ್ನಲಾಗಿದೆ. ಗ್ಯಾಲಕ್ಸಿ ಎಫ್ 42 5 ಜಿ ಸುಗಮ ಸ್ಕ್ರೋಲಿಂಗ್ ಮತ್ತು ಉತ್ತಮ  ವೀಕ್ಷಣೆ ಅನುಭವಕ್ಕಾಗಿ ಎಫ್‌ಎಚ್‌ಡಿ+ ಡಿಸ್‌ಪ್ಲೇ ಹೊಂದಿರಲಿದೆ. ಅಲ್ಲದೆ,  90Hz ರಿಫ್ರೆಶ್ ರೇಟ್‌ನೊಂದಿಗೆ ಬರುತ್ತದೆ.

ಇದನ್ನೂ ಓದಿ : Telegram New Feature: ಟೆಲಿಗ್ರಾಂನಲ್ಲಿ ಇನ್ಮುಂದೆ ನೀವು ಲೈವ್ ಸ್ಟ್ರೀಮ್ ರಿಕಾರ್ಡ್ ಹಾಗೂ ವಿಡಿಯೋ ಚಾಟ್ ಕೂಡ ಮಾಡಬಹುದು

ಎಫ್ ಸರಣಿಯು ಮೊದಲ 5 ಜಿ ಸ್ಮಾರ್ಟ್ ಫೋನ್ : 
Samsung ಈ ವರ್ಷ ಗ್ಯಾಲಕ್ಸಿ ಎಫ್ ಪೋರ್ಟ್‌ಫೋಲಿಯೊದಲ್ಲಿ ಸರಣಿ ಸ್ಮಾರ್ಟ್‌ಫೋನ್‌ಗಳನ್ನು (Smartphone) ಬಿಡುಗಡೆ ಮಾಡಿದೆ. ಗ್ಯಾಲಕ್ಸಿ ಎಫ್ 42 5 ಜಿ ಭಾರತದಲ್ಲಿ ಬಿಡುಗಡೆಯಾಗುವ ಎಫ್ ಸರಣಿಯ ಮೊದಲ 5 ಜಿ ಸ್ಮಾರ್ಟ್‌ಫೋನ್ ಆಗಿರಲಿದೆ. ಇದಲ್ಲದೆ, amazon.in ನಲ್ಲಿ ಲೈವ್ ಬಂದ ಪ್ರಿ ಲಾಂಚ್ ವೆಬ್‌ಸೈಟ್ ಪ್ರಕಾರ, ಸ್ಯಾಮ್‌ಸಂಗ್ ತನ್ನ ಮುಂದಿನ 5G ಸ್ಮಾರ್ಟ್‌ಫೋನ್ 'ಗ್ಯಾಲಕ್ಸಿ M52 5G' ಅನ್ನು ಸೆಪ್ಟೆಂಬರ್ 28 ರಂದು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ ಎನ್ನಲಾಗಿದೆ.

Galaxy M52 5G ಸ್ಮಾರ್ಟ್‌ಫೋನ್‌ನಲ್ಲಿ ವಿಶೇಷತೆ ಏನು?
ಬಿಡುಗಡೆಯಾದ  ನಂತರ, ಗ್ಯಾಲಕ್ಸಿ M52 5G samsung.com, amazon.in ಮತ್ತು ಆಯ್ದ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಲಭ್ಯವಿರುತ್ತದೆ.  ಗ್ಯಾಲಕ್ಸಿ M52 5G M51 ಗಿಂತ 21 % ಹೆಚ್ಚು ಆಕರ್ಷಕವಾಗಿದೆ.

ಇದನ್ನೂ ಓದಿ : iPhone 12, iPhone 12 mini ಭಾರೀ ರಿಯಾಯಿತಿಗಳಲ್ಲಿ ಲಭ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News