ಸಂದರ್ಭದಲ್ಲಿ ಗಂಗೋತ್ರಿ ಮತ್ತು ಯಮುನೋತ್ರಿ ಧಾಮ್ ಬಾಗಿಲುಗಳನ್ನು ತೆರೆಯಲಾಗಿದೆ. ಆದರೆ ಚಾರ್‌ಧಾಮ ಯಾತ್ರೆಗೆ ತೆರಳಿದ ಯಾತ್ರಾರ್ಥಿಗಳ ಪೈಕಿ ಇಲ್ಲಿವರೆಗೆ ಸುಮಾರು 39 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ಮಲೇಶಿಯಾದಲ್ಲಿ ಕನ್ನಡದ ಕಂಪು ಹರಿಸಿದ ಕನ್ನಡತಿ ʼಸಾನ್ವಿ ದೇಸಾಯಿʼ
 
ಈ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರವು ಭಕ್ತಾದಿಗಳಿಗೆ ಮನವಿಯನ್ನು ಮಾಡಿದ್ದು, "ದೈಹಿಕವಾಗಿ ಸಮಸ್ಯೆಗಳನ್ನು ಎದುರಿಸುವವರು ಚಾರ್‌ಧಾಮ್‌ ಯಾತ್ರೆಗೆ ಬರಬೇಡಿ" ಎಂದು ತಿಳಿಸಿದೆ. ಅಲ್ಲಿನ ವಾತಾವರಣ ಕೊಂಚ ಭಿನ್ನವಾಗಿರುವ ಹಿನ್ನೆಲೆಯಲ್ಲಿ ಈ ಅವಘಡಗಳು ಸಂಭವಿಸಿವೆ. 
 
ಈ ಸಾವಿಗೆ ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿತ ಸಮಸ್ಯೆ ಹಾಗೂ ಮೌಂಟೇನ್ ಸಿಕ್‌ನೆಸ್ ಕಾರಣವಾಗಿರಬಹುದು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. 


ಇದನ್ನು ಓದಿ: SBI Update! ತನ್ನ ಕೋಟ್ಯಾಂತರ ಗ್ರಾಹಕರಿಗೆ ಶಾಕ್ ನೀಡಿದ ಎಸ್ಬಿಐ


ಚಾರ್ ಧಾಮ್ ಯಾತ್ರೆ ಆರಂಭವಾಗಿ ಎರಡು ವಾರ ಕಳೆಯುವಷ್ಟರಲ್ಲಿ 39 ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ ಎಂಬುದು ಆಶ್ಚರ್ಯಕರ ಸಂಗತಿ. ಇನ್ನು ಈ ವರ್ಷ ಚಾರ್ ಧಾಮ್ ಯಾತ್ರೆಗೆ ಅತೀ ಹೆಚ್ಚು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಅಷ್ಟೇ ಅಲ್ಲದೆ, 18 ಮಂದಿ ಚಾರಣದ ಸಮಯದಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.