ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಮಹತ್ತರ ದಾಖಲೆಗಳು ಲಭಿಸಿದೆ. ಅಷ್ಟೇ ಅಲ್ಲದೆ, ಕಿಂಗ್‌ಪಿನ್‌ಗಳ ಮನೆಯಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ: ರಾಜ್ಯಕ್ಕೆ ವಕ್ಕರಿಸಿತು ಮತ್ತೊಂದು ಮಹಾಮಾರಿ.! ಮಕ್ಕಳನ್ನು ಬಾಧಿಸುವ ಟೊಮೊಟೊ ಜ್ವರ ವೈರಸ್ ಪತ್ತೆ
ಅಕ್ರಮದ ಕಿಂಗ್‌ಪಿನ್‌ಗಳಾದ ಆರ್.ಡಿ ಪಾಟೀಲ್, ದಿವ್ಯಾ ಹಾಗರಗಿ, ಮಂಜುನಾಥ್ ಮೇಳಕುಂದಿ, ಕಾಶಿನಾಥ್ ಚಿಲ್, ಮಹಾಂತೇಶ್ ಪಾಟೀಲ್ ಮನೆಯಲ್ಲಿ ಲಕ್ಷಾಂತರ ರೂ ಪತ್ತೆಯಾಗಿದೆ. ಸದ್ಯ ಈ ಹಣಗಳನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಬ್ಯಾಂಕ್ ಲಾಕರ್‌ನಲ್ಲಿ ಲಕ್ಷಾಂತರ ರೂ, ನಗದಿನ ಜೊತೆಗೆ ಚಿನ್ನಾಭರಣ, ಆಸ್ತಿ ದಾಖಲಾತಿಗಳು ಪತ್ತೆಯಾಗಿವೆ. ಕಳೆದ ದಿನ ಜ್ಞಾನಜ್ಯೋತಿ ಶಾಲೆಯ ಹೆಡ್ ಮಾಸ್ಟರ್ ಕಾಶಿನಾಥ್ ಮನೆಯಲ್ಲಿ ಶೋಧ ನಡೆಸಿದಾಗ ಲಕ್ಷಾಂತರ ರೂಪಾಯಿ ಪತ್ತೆಯಾಗಿತ್ತು. ಸದ್ಯ ಸಿಐಡಿ ಅಧಿಕಾರಿಗಳು ಈ ದಾಖಲೆಗಳನ್ನು ಜಪ್ತಿ ಮಾಡಿದ್ದು, ಹಣದ ಮೂಲ ಯಾವುದು ಎಂದು ತನಿಖೆ ನಡೆಸುತ್ತಿದ್ದಾರೆ.
ಇತ್ತೀಚೆಗೆಯಷ್ಟೇ ಸಿಐಡಿ ಅಧಿಕಾರಿಗಳು ಪ್ರಮುಖ ಆರೋಪಿ, ಹಗರಣದ ರೂವಾರಿ ದಿವ್ಯಾ ಹಾಗರಗಿಯನ್ನು ಬಂಧಿಸಿದ್ದರು. ಈ ಸಂದರ್ಭದಲ್ಲಿ ಆಕೆಯ ಫೋನ್‌ಗಾಗಿ ಸಾಕಷ್ಟು ತನಿಖೆ ನಡೆಸಿದರೂ ಪತ್ತೆಯಾಗಿರಲಿಲ್ಲ. ಅಂತಿಮವಾಗಿ ಆಕೆಯ ಫೋನ್ ಸಿಕ್ಕಿದ್ದು, ಪ್ರಕರಣದ ತನಿಖೆಗೆ ತಿರುವು ಸಿಕ್ಕಂತಾಗಿತ್ತು. ಇದೀಗ ಹಣ ಪತ್ತೆಯಾಗಿದ್ದು, ವಿಚಾರಣೆ ಇನ್ನಷ್ಟು ಗಟ್ಟಿಗೊಳ್ಳಲಿದೆ.
ಇದನ್ನು ಓದಿ: ಕಿರುತೆರೆ ನಟಿ ನಿಧನ: ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಫ್ಯಾಟ್‌ನಲ್ಲಿ ಪತ್ತೆ
ರಕ್ತದಲ್ಲಿ ಪತ್ರ ಬರೆದ ನೊಂದ ಅಭ್ಯರ್ಥಿ:
ಇನ್ನೊಂದೆಡೆ ಮನನೊಂದಿರುವ ಪಿಎಸ್‌ಐ ಅಭ್ಯರ್ಥಿಗಳು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ, ನೊಂದ ಅಭ್ಯರ್ಥಿಯೋರ್ವ "ಅನ್ಯಾಯ ಮಾಡಿದವರನ್ನ ಜೈಲಿಗೆ ಹಾಕಿ ಆದ್ರೆ ನಿಯತ್ತಿಂದ ಬರೆದವರಿಗೆ ಮೋಸವಾಗಬಾರದು. 2021ರಲ್ಲಿ ನಡೆದ ಎಫ್‌ಡಿಎ ಪರೀಕ್ಷೆಯಲ್ಲಿ ಅಕ್ರಮವಾಗಿದೆ. ಅದನ್ನು ಕೂಡ ತನಿಖೆ ಮಾಡಿ ನ್ಯಾಯ ಕೊಡಿಸಬೇಕು" ಎಂದು ರಕ್ತದಲ್ಲಿ ಪತ್ರಬರೆದು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳುಹಿಸಿಕೊಟ್ಟಿದ್ದಾನೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.