ಮಲೇಶಿಯಾದ ಗಾನ ಕೋಗಿಲೆ ಎಂದೆನಿಸಿಕೊಂಡಿರುವ ಪ್ರತಿಭಾನ್ವಿತ ಕನ್ನಡತಿ, ಸಾನ್ವಿ ದೇಸಾಯಿ "ILU" ಎಂಬ ಚಲನಚಿತ್ರದ ಒಂದು ಯುಗಳ ಗೀತೆಗೆ ಕಂಠ ನೀಡಿ ಎಲ್ಲರನ್ನು ವಿಸ್ಮಯಗೊಳಿಸಿದ್ಧಾರೆ. ಆರ್‌ಎ ಫಿಲಂ ಫ್ಯಾಕ್ಟರಿಯಡಿಯಲ್ಲಿ ನಟ, ನಿರ್ದೇಶಕ, ನಿರ್ಮಾಪಕ, ಗೀತೆ ರಚನೆಕಾರ ರಾಜೇಶ ಗೌಡ ಅವರು ನೇತೃತ್ವದಲ್ಲಿ ಸಿನಿಮಾದ ಚಿತ್ರೀಕರಣ ಪ್ರಾರಂಭಗೊಂಡಿದೆ. ಈ ಚಲನಚಿತ್ರಕ್ಕೆ ಜೇಮ್ಸ್ ಆರ್ಕಿಟೆಕ್ಟ್ ಅವರು ಮಧುರವಾದ ಸಂಗೀತ ಸಂಯೋಜನೆ ಮಾಡಿದ್ದಾರೆ.
ಇದನ್ನು ಓದಿ: ಕರ್ನಾಟಕದ ಎನ್‌ಆರ್‌ಐ ಕಮಿಟಿ ಮರುಚಾಲನೆ ಮಾಡಿ: ಕತ್ತಾರ್‌ನಿಂದ ಒತ್ತಾಯ
ಐದು ಗೀತೆಗಳ ಧ್ವನಿ ಮುದ್ರಣವನ್ನು ಮೇ 6 ಮತ್ತು7ರಂದು ಎಸ್‌ಪಿ ಸ್ಟುಡಿಯೋ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ಈ ಗೀತೆಗಳನ್ನು ಉದಯೋನ್ಮುಖ ಗಾಯಕ, ಗಾಯಕಿಯರಾದ ಅಂಕಿತಾ ಕುಂಡು, ಸಮೀರ ಸುದರ್ಶನ್, ಅನಿರುದ್ಧ್ ಪ್ರಭು , ಸುಬ್ರಹ್ಮಣಿ , ನವ್ಯಾ ಪ್ರಶಾಂತ್ ಹಾಡಿದ್ದಾರೆ. ಈ ಚಿತ್ರ ಮುಂದಿನ ವರ್ಷ ತೆರೆ ಮೇಲೆ ಬರಲಿದೆ.
ಇನ್ನು ಸಾನ್ವಿ ದೇಸಾಯಿ 15 ವರ್ಷದವರಾಗಿದ್ದು, ಈ ಪುಟ್ಟ ವಯಸ್ಸಿನಲ್ಲಿಯೇ ಹಾಡಿನ ಮೂಲಕ ಸಾಧನೆ ಹಾದಿ ಹಿಡಿದಿದ್ದಾರೆ. ಸದ್ಯ ಮಲೇಶಿಯಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಾನ್ವಿ ದೇಸಾಯಿ, ಕ್ರಷ್ಣಾ ಶ್ರೀವಾತ್ಸವ ಅವರಿಂದ ಹಿಂದೂಸ್ತಾನಿ ಸಂಗೀತ ಕಲಿಯುತ್ತಿದ್ದಾರೆ. ಈ ಹಿಂದೆ 2021ರಲ್ಲಿ ರಾಜೇಶ್ ಗೌಡ ಅವರ ಮೂಗುರು ತಿಬ್ಬಾ ದೇವಿಯ ಭಕ್ತಿ ಗೀತೆಗಳು ಎಂಬ ಆಲ್ಬಂಗೆ ಧ್ವನಿ ನೀಡಿದ್ದರು.
ಇನ್ನು ಗೋಪಾಲ್ ಕುಲಕರ್ಣಿ ಅವರ ನೇತೃತ್ವದ ಸಾಗರೋತ್ತರ ಕನ್ನಡಿಗರ ಕಾರ್ಯಕ್ರಮದಲ್ಲಿ ಒರಿಜಿನಲ್ ಹಾಡನ್ನು ಹಾಡಿದ್ದಾರೆ. ಕನ್ನಡ, ಹಿಂದಿ, ಮರಾಠಿ, ಪಂಜಾಬಿ, ಇಂಗ್ಲೀಷ್ ಭಾಷೆಗಳಲ್ಲಿ ಹಾಡುಗಳನ್ನು ಹಾಡಿ ಜನಪ್ರಿಯತೆ ಗಳಿಸಿದ್ದಾರೆ. ಇನ್ನೊಂದೆಡೆ ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ.
ಭಾರತ, ಮಲೇಶಿಯಾ, ಸಿಂಗಾಪುರ ಸೇರಿ ಅನೇಕ ದೇಶಗಳಲ್ಲಿ ಹಾಡನ್ನು ಹಾಡಿ ಅನೇಕ ಬಹುಮಾನಗಳ ಜೊತೆ ಜನರ ಮನ ಗೆದ್ದಿದ್ದಾರೆ. ತಾಂತ್ರಿಕ ಜ್ಞಾನದಿಂದ ಮನೆಯಲ್ಲಿಯೇ ಸ್ಟುಡಿಯೋವನ್ನು ನಿರ್ಮಿಸಿ ಅಲ್ಲಿಯೇ ಹಾಡುಗಳ ಧ್ವನಿ ಮುದ್ರಣವನ್ನು ತಯಾರಿಸುತ್ತಾರೆ.
ಇದನ್ನು ಓದಿ: Akash Vukoti: ಪಟಪಟ ಇಂಗ್ಲೀಷ್ ಮಾತಾಡೋ ಈ ಪುಟ್ಟ ಬಾಲಕನ ಜ್ಞಾನ ನೋಡಿದ್ರೆ ಬೆರಗಾಗೋದು ಗ್ಯಾರಂಟಿ
ಸಾನ್ನಿಕ ಅವರ ತಂದೆ ರಾಘುರವರು ಮಲೇಶಿಯಾದಲ್ಲಿ ಸುಮಾರು 20 ವರ್ಷಗಳಿಂದ ತಾಂತ್ರಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿತ್ತಿದ್ದಾರೆ. ತಾಯಿ ಸ್ಮಿತಾ ಗೃಹಿಣಿಯಾಗಿ ಸಾನ್ವಿ ದೇಸಾಯಿಯ ವಿದ್ಯಾಭ್ಯಾಸ, ಸಂಗೀತ ಅಭ್ಯಾಸದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ಧಾರೆ. ಒಳ್ಳೆಯ ಹಿನ್ನೆಲೆ ಗಾಯಕಿ ಆಗುವ ಸುಂದರ ಕನಸು ಕಟ್ಟಿಕೊಂಡಿರುವ ಪ್ರತಿಭಾವಂತ ಕಲಾವಿದೆಯ ಜೀವನ ಮೇರು ಪರ್ವತದಂತೆ ಎತ್ತರವಾಗಿ ಬೆಳೆಯಲಿ ಎಂಬುದೇ ನಮ್ಮ ಆಶಯ.
-ಲೇಖಕರು
ಮೀನಾಕ್ಷಿ ದೇಸಾಯಿ, ಮಲೇಶಿಯಾ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.