7th Pay Commission: ಹೊಸ ವರ್ಷದಲ್ಲಿ ನೌಕರರಿಗೆ ಸಿಗಲಿದೆ ಸಂತಸದ ಸುದ್ದಿ! ವೇತನ ಹೆಚ್ಚಳದ ಜೊತೆಗೆ ಹಲವು ದೊಡ್ಡ ಘೋಷಣೆಗಳು ಹೊರಬೀಳುವ ಸಾಧ್ಯತೆ
7th Pay Commission: ಕೇಂದ್ರ ಸರ್ಕಾರ ಮತ್ತೊಮ್ಮೆ ತನ್ನ ನೌಕರರಿಗೆ ಸಂತಸದ ಸುದ್ದಿ ನೀಡುವ ಸಾಧ್ಯತೆ ಇದೆ. ಜನವರಿ 2022 ರ ಆರಂಭದಲ್ಲಿ ಮನೆ ಬಾಡಿಗೆ ಭತ್ಯೆಯನ್ನು (HRA) ಹೆಚ್ಚಿಸುವ ಘೋಷಣೆಯನ್ನು ಸರ್ಕಾರ ಮಾಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ನವದೆಹಲಿ: 7th Pay Commission - ಉದ್ಯೋಗಿಗಳಿಗೆ (Central Government Employees) ಶೀಘ್ರದಲ್ಲಿಯೇ ಮತ್ತೊಮ್ಮೆ ಸಂತಸದ ಸುದ್ದಿ ಸುದ್ದಿ ಸಿಗಲಿದೆ. ಹಬ್ಬದ ರೀತಿಯಲ್ಲಿಯೇ ಮೋದಿ ಸರ್ಕಾರವು ತನ್ನ ಉದ್ಯೋಗಿಗಳಿಗೆ ಹೊಸ ವರ್ಷದಂದು ಉಡುಗೊರೆಗಳನ್ನು ನೀಡುವ ಸಾಧ್ಯತೆ ಇದೆ. ಮೊನ್ನೆ ದೀಪಾವಳಿಯಂದು ಮೋದಿ ಸರ್ಕಾರವು ಉದ್ಯೋಗಿಗಳ ತುಟ್ಟಿಭತ್ಯೆಯನ್ನು (DA Hike And DR Hike) ಶೇ. 3 ಹೆಚ್ಚಿಸಿತ್ತು. ಇದೀಗ ಕೇಂದ್ರ ಸರ್ಕಾರ ಮತ್ತೊಮ್ಮೆ ನೌಕರರನ್ನು ಖುಷಿಪಡಿಸಬಹುದು ಸಾಧ್ಯತೆ ಇದೆ ಎಂಬ ಚರ್ಚೆ ನಡೆಯುತ್ತಿದೆ. ಜನವರಿ 2022 ರ ಆರಂಭದಲ್ಲಿ ಮನೆ ಬಾಡಿಗೆ ಭತ್ಯೆಯನ್ನು (House Rent Allowance) ಹೆಚ್ಚಿಸುವ ಕುರಿತು ಸರ್ಕಾರ ಘೋಷಣೆ ಮಾಡುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರ ಪ್ರಸ್ತಾವನೆ ಕಳುಹಿಸಿದೆ
11.56 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳ ಮನೆ ಬಾಡಿಗೆ ಭತ್ಯೆ (HRA) ಜಾರಿಗೆ ತರಲು ಹಣಕಾಸು ಸಚಿವಾಲಯ ಚಿಂತನೆ ನಡೆಸುತ್ತಿದೆ. ಈ ಪ್ರಸ್ತಾವನೆಯ ಅನುಮೋದನೆಗಾಗಿ ರೈಲ್ವೆ ಮಂಡಳಿಗೂ ಸಹ ಪ್ರಸ್ತಾವನೆಯನ್ನು ಸಹ ಕಳುಹಿಸಲಾಗಿದೆ. ಈ ಪ್ರಸ್ತಾವನೆಗೆ ಒಂದು ವೇಳೆ ಅನುಮೋದನೆ ದೊರೆತರೆ, ಉದ್ಯೋಗಿಗಳು ಜನವರಿ 2021 ರಿಂದ HRA ಪಡೆಯಲಿದ್ದಾರೆ. ಭಾರತೀಯ ರೈಲ್ವೇ ತಾಂತ್ರಿಕ ಮೇಲ್ವಿಚಾರಕರ ಸಂಘ ಮತ್ತು ರಾಷ್ಟ್ರೀಯ ರೈಲ್ವೇಮೆನ್ ಫೆಡರೇಶನ್ ಜನವರಿ 1, 2021 ರಿಂದ HRA ಅನ್ನು ಜಾರಿಗೆ ತರಲು ಒತ್ತಾಯಿಸುತ್ತಿವೆ. ಮನೆ ಬಾಡಿಗೆ ಭತ್ಯೆ ಹೆಚ್ಚಿಸಿದ ನಂತರ ಸಂಬಳದಲ್ಲಿ ಬಂಪರ್ ಹೆಚ್ಚಳವಾಗಲಿದೆ.
ಇದನ್ನೂ ಓದಿ-PM Kisan: ಪಿಎಂ ಕಿಸಾನ್ ಯೋಜನೆಯ ಮರುಪಾವತಿ ಪಟ್ಟಿ ಬಿಡುಗಡೆ; ನಿಮ್ಮ ಹೆಸರನ್ನು ಪರಿಶೀಲಿಸಿ
'ಮನೆ ಬಾಡಿಗೆ ಭತ್ಯೆ' ಎಷ್ಟು
50 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳು 'X' ವರ್ಗದ ಅಡಿಯಲ್ಲಿ ಬರುತ್ತವೆ. 5 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳು 'Y' ವರ್ಗಕ್ಕೆ ಸೇರುತ್ತವೆ ಮತ್ತು 5 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳು 'Z' ವರ್ಗದ ಅಡಿಯಲ್ಲಿ ಬರುತ್ತವೆ. ಎಲ್ಲಾ ಮೂರು ವರ್ಗಗಳಿಗೆ ಕನಿಷ್ಠ HRA 5400, 3600 ಮತ್ತು 1800 ರೂ ಆಗಿರುತ್ತದೆ. ವೆಚ್ಚದ ಇಲಾಖೆಯ (Department Of Expinditure) ಪ್ರಕಾರ, ತುಟ್ಟಿಭತ್ಯೆ ಶೇ. 50 ಕ್ಕೆ ತಲುಪಿದಾಗ, ಗರಿಷ್ಠ ಮನೆ ಬಾಡಿಗೆ ಭತ್ಯೆಯು ಶೇಕಡಾ 30 ಕ್ಕೆ ಹೆಚ್ಚಾಗುತ್ತದೆ.
ಇದನ್ನೂ ಓದಿ-Best Wife: ಈ ಹುಡುಗಿಯರು ತಮ್ಮ ಗಂಡನನ್ನು ತುಂಬಾ ಪ್ರೀತಿಸುತ್ತಾರೆ, ಅದೃಷ್ಟಶಾಲಿಯಾಗಿರುತ್ತಾರೆ…
ರಾಜ್ಯ ಸರ್ಕಾರ ಡಿಎ ಹೆಚ್ಚಿಸಿದೆ
ಇದಕ್ಕೂ ಮೊದಲು, ಜಾರ್ಖಂಡ್ ಸರ್ಕಾರವು ತನ್ನ ಎಲ್ಲಾ ಉದ್ಯೋಗಿಗಳು ಮತ್ತು ಪಿಂಚಣಿದಾರರ (Pensioners Salary Hike) ತುಟ್ಟಿಭತ್ಯೆಯನ್ನು ಶೇ.3ರಷ್ಟು ಹೆಚ್ಚಿಸಿದೆ ಮತ್ತು ಈ ಹೆಚ್ಚಳವು ಈ ವರ್ಷ ಜುಲೈ 1 ರಿಂದ ಅನ್ವಯಿಸಲಿದೆ. ಮುಖ್ಯಮಂತ್ರಿ ಹೇಮಂತ್ ಸೊರೇನ್ ಅಧ್ಯಕ್ಷತೆಯಲ್ಲಿ ನಡೆದ ಜಾರ್ಖಂಡ್ ಸರ್ಕಾರದ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದರ ಪ್ರಕಾರ, ರಾಜ್ಯ ಸರ್ಕಾರದ ಐದನೇ, ಆರನೇ ಮತ್ತು ಏಳನೇ ವೇತನ ಆಯೋಗದ ಅಡಿಯಲ್ಲಿ ಸಂಬಳ ಪಡೆಯುವ ಎಲ್ಲಾ ನೌಕರರು ಮತ್ತು ಪಿಂಚಣಿದಾರರು ಜುಲೈ 1, 2021 ರಿಂದ ಮೂರು ಪ್ರತಿಶತದಷ್ಟು ತುಟ್ಟಿಭತ್ಯೆಯನ್ನು ಪಡೆಯಲಿದ್ದಾರೆ.
ಇದನ್ನೂ ಓದಿ-Laptop: ಕೆಲಸ ಮಾಡುವಾಗ ನಿಮ್ಮ ಲ್ಯಾಪ್ಟಾಪ್ ಸ್ಲೋ ಆಗುತ್ತಿದೆಯೇ? ಈ 5 ಟಿಪ್ಸ್ ಅನುಸರಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.