PM Kisan: ಪಿಎಂ ಕಿಸಾನ್ ಯೋಜನೆಯ ಮರುಪಾವತಿ ಪಟ್ಟಿ ಬಿಡುಗಡೆ; ನಿಮ್ಮ ಹೆಸರನ್ನು ಪರಿಶೀಲಿಸಿ

PM Kisan Refund List: ಪಿಎಂ ಕಿಸಾನ್ ಯೋಜನೆಯ 10 ನೇ ಕಂತು ಬರುವ ಮೊದಲೇ, ಈ ಯೋಜನೆಗೆ ಅರ್ಹರಲ್ಲದ ರೈತರಿಂದ ಮೊತ್ತವನ್ನು ಮರುಪಾವತಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ

Written by - Yashaswini V | Last Updated : Nov 16, 2021, 10:42 AM IST
  • ಪಿಎಂ ಕಿಸಾನ್ ಯೋಜನೆಯ ಮರುಪಾವತಿ ಪಟ್ಟಿ ಬಿಡುಗಡೆಯಾಗಿದೆ
  • ನಕಲಿ ರೈತರ ವಿರುದ್ಧ ಕ್ರಮಕ್ಕೆ ಸಿದ್ಧತೆ
  • ಪಟ್ಟಿಯಲ್ಲಿ ಹೆಸರನ್ನು ಹೇಗೆ ಪರಿಶೀಲಿಸುವುದು ಎಂಬುದನ್ನು ಇಲ್ಲಿ ತಿಳಿಯಿರಿ
PM Kisan: ಪಿಎಂ ಕಿಸಾನ್ ಯೋಜನೆಯ ಮರುಪಾವತಿ ಪಟ್ಟಿ ಬಿಡುಗಡೆ; ನಿಮ್ಮ ಹೆಸರನ್ನು ಪರಿಶೀಲಿಸಿ title=
PM Kisan Samman Nidhi Yojana

PM Kisan Refund List: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 10ನೇ ಕಂತು (ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ 10ನೇ ಕಂತು) ಬಿಡುಗಡೆಯಾಗಲಿದ್ದು, ಮತ್ತೊಂದೆಡೆ ಈ ಯೋಜನೆಗೆ ಅರ್ಹರಲ್ಲದ ರೈತರಿಂದ ಹಣ ವಸೂಲಿ ಕೂಡ ಆರಂಭವಾಗಿದೆ. ಸರ್ಕಾರಕ್ಕೆ ಮೋಸ ಮಾಡಿ ಈ ಯೋಜನೆಯ ಲಾಭ ಪಡೆಯುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಅನರ್ಹ ರೈತರಿಂದ ಹಣ ವಸೂಲಿ ಮಾಡಲು ಪಿಎಂ ಕಿಸಾನ್ ಯೋಜನೆಯಡಿ ಮರುಪಾವತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.  ಈ ಪಟ್ಟಿಯಲ್ಲಿ ಹೆಸರು ಇರುವ ರೈತರು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಹಣವನ್ನು ಹಿಂದಿರುಗಿಸಬೇಕು.

ಪಿಎಂ ಕಿಸಾನ್ ಅಡಿಯಲ್ಲಿ ವಂಚನೆ: 
ಗಮನಾರ್ಹ ಅಂಶವೆಂದರೆ ರೈತರ ಆದಾಯ ಹೆಚ್ಚಿಸಲು ಕೇಂದ್ರ ಸರ್ಕಾರ ಸದಾ ಸಿದ್ಧ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ  (PM Kisan Samman Nidhi Yojana) ವಂಚನೆಯ ದೊಡ್ಡ ಪ್ರಕರಣ ಬೆಳಕಿಗೆ ಬಂದಾಗ, ಬಿಹಾರ ಸರ್ಕಾರವು ಈ ಗಂಭೀರ ಸಮಸ್ಯೆಗೆ ಪರಿಹಾರವನ್ನು ಘೋಷಿಸಲು ನಿರ್ಧರಿಸಿತು. ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ನೋಂದಾಯಿಸಿದ ರೈತರು ಈಗ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹಣವನ್ನು ಹಿಂದಿರುಗಿಸಬೇಕಾಗಿದೆ. ಜಾರ್ಖಂಡ್ ಸರ್ಕಾರ ಕೂಡ ಇದೇ ರೀತಿಯ ಉಪಕ್ರಮವನ್ನು ತೆಗೆದುಕೊಳ್ಳಲು ಸಿದ್ಧತೆ ನಡೆಸಿದೆ.

ಇದನ್ನೂ ಓದಿ- PM Kisan: ದ್ವಿಗುಣಗೊಳ್ಳಲಿದೆಯೇ ಪಿಎಂ ಕಿಸಾನ್ ಹಣ? ನಿಮ್ಮ ಕಂತಿನ ಸ್ಥಿತಿಯನ್ನು ಈ ರೀತಿ ಪರಿಶೀಲಿಸಿ

ಪಿಎಂ ಕಿಸಾನ್ ಮರುಪಾವತಿ ಪಟ್ಟಿ ಬಿಡುಗಡೆ
ಈ ಯೋಜನೆಯನ್ನು ರೈತರಿಗೆ (Farmers) ಪಾರದರ್ಶಕಗೊಳಿಸಲು, ಸರ್ಕಾರವು ಡಿಬಿಟಿ ವೆಬ್‌ಸೈಟ್ ಅನ್ನು ರಚಿಸಿದೆ.  ಇದು ಸರ್ಕಾರಕ್ಕೆ ಹಣವನ್ನು ಹಿಂದಿರುಗಿಸಬೇಕಾಗಿರುವ ರೈತರ ಹೆಸರನ್ನೂ ಒಳಗೊಂಡಿರುತ್ತದೆ. ಈ ಯೋಜನೆಯ ಲಾಭ ಪಡೆಯಲು ರೈತರಿಗೆ ಅರ್ಹತಾ ಮಾನದಂಡಗಳನ್ನು ಸರ್ಕಾರ ನಿಗದಿಪಡಿಸಿದೆ. ಈ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ, ಈ ಯೋಜನೆಗೆ ಅರ್ಹತೆ ಪಡೆಯದ ಅಂತಹ ರೈತರು ಪ್ರತಿ ಕಂತಿನ ಹಣವನ್ನು ರಾಜ್ಯ ಅಥವಾ ಕೇಂದ್ರ ಸರ್ಕಾರಕ್ಕೆ ಹಿಂದಿರುಗಿಸಬೇಕಾಗುತ್ತದೆ.

ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ರಾಜ್ಯ ಸರ್ಕಾರಗಳು:
ಇಷ್ಟೇ ಅಲ್ಲ ಹೆಸರು ಬಿಡುಗಡೆ ಮಾಡಿದ ನಂತರ ರೈತರು ಬಾರದೆ ಇದ್ದಲ್ಲಿ ಕೃಷಿ ಭವನದ ವತಿಯಿಂದ ಮರುಪಾವತಿ ಪ್ರಕ್ರಿಯೆ ಆರಂಭಿಸುವಂತೆ ರಾಜ್ಯ ನೋಡಲ್ ಅಧಿಕಾರಿಯಿಂದ ನೋಟಿಸ್ ಜಾರಿ ಮಾಡಲಾಗುವುದು. ಪದೇ ಪದೇ ತೆರಿಗೆ ಪಾವತಿಸುವ ರೈತರು ಕೂಡ ತಮ್ಮ ಹಣವನ್ನು ರಾಜ್ಯ ಸರ್ಕಾರಕ್ಕೆ ಹಿಂದಿರುಗಿಸಬೇಕು ಮತ್ತು ತೆರಿಗೆದಾರ ರೈತರ ಪ್ರತ್ಯೇಕ ಪಟ್ಟಿಯನ್ನು ಡಿಬಿಟಿ ಕೃಷಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಇದನ್ನೂ ಓದಿ- PM Kisan 10ನೇ ಕಂತಿನ ಕುರಿತು ಬಿಗ್ ಅಪ್‌ಡೇಟ್! ಆದಷ್ಟೂ ಬೇಗ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸಿ

ಪಾವತಿ ರಿಟರ್ನ್ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಈ ರೀತಿ ಪರಿಶೀಲಿಸಿ:

  • ಇದಕ್ಕಾಗಿ, ನೀವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್‌ಸೈಟ್ pmkisan.gov.in ಗೆ ಹೋಗಿ.
  • ಈಗ ಮುಖಪುಟದಲ್ಲಿ ಅನರ್ಹ ವರ್ಗ, ರೈತರ ಹೆಸರು, ನೋಂದಣಿ ಸಂಖ್ಯೆ, ಲಿಂಗ, ರಾಜ್ಯ, ಬ್ಲಾಕ್, ಜಿಲ್ಲೆ, ಕಂತು ಮೊತ್ತ, ಮರುಪಾವತಿ ಮೋಡ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಿ.
  • ವಿವರಗಳನ್ನು ನಮೂದಿಸಿದ ನಂತರ ಪಟ್ಟಿಯು ಪರದೆಯ ಮೇಲೆ ಕಾಣಿಸುತ್ತದೆ.
  • ಈ ಪಟ್ಟಿಯನ್ನು ಪರಿಶೀಲಿಸಿ ಮತ್ತು ನಿಮ್ಮ ಹೆಸರು ಲಭ್ಯವಿದೆಯೇ ಎಂದು ನೋಡಿ.
  • ಇಲ್ಲಿ ನಿಮ್ಮ ಹೆಸರನ್ನು ನೀವು ನೋಡಿದರೆ, ಯೋಜನೆಯ ಅಡಿಯಲ್ಲಿ ನಿಮಗೆ ನೀಡಲಾದ ಮೊತ್ತವನ್ನು ಹಿಂತಿರುಗಿಸಿ.
  • ಪ್ರತಿಯೊಂದು ರಾಜ್ಯವು ತನ್ನ ರೈತರಿಗಾಗಿ ತನ್ನದೇ ಆದ ಪ್ರತ್ಯೇಕ ವೆಬ್‌ಸೈಟ್ ಅನ್ನು ರಚಿಸಿದೆ, ಅಲ್ಲಿ ಅವರು ತಮ್ಮ ಹೆಸರನ್ನು ಪರಿಶೀಲಿಸಬಹುದು.
  • ಉದಾಹರಣೆಗೆ, ಬಿಹಾರ ರಾಜ್ಯದ ವೆಬ್‌ಸೈಟ್ dbtagriculture.bihar.gov.in ಆಗಿದೆ.
  • ಇದರಿಂದ ರೈತರು ತಮ್ಮ ಹೆಸರನ್ನು ಸುಲಭವಾಗಿ ಹುಡುಕಲು ಸಹಾಯ ಮಾಡುತ್ತದೆ ಮತ್ತು ಸಮಯದ ಉಳಿತಾಯವೂ ಆಗುತ್ತದೆ.

10ನೇ ಕಂತಿನ ನಿರೀಕ್ಷೆಯಲ್ಲಿ ರೈತರು :
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಇದೀಗ ರೈತರು 10ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ. ಇದುವರೆಗೆ ಈ ಯೋಜನೆಯ 9ನೇ ಕಂತು ರೈತರ ಖಾತೆಗೆ ಜಮೆಯಾಗಿದೆ. ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ತಲಾ 2,000 ರೂಪಾಯಿಗಳ ಮೂರು ಕಂತುಗಳನ್ನು ಅಂದರೆ 6000 ರೂಪಾಯಿಗಳನ್ನು ನೇರವಾಗಿ ರೈತರ ಖಾತೆಗೆ ಕಳುಹಿಸುತ್ತದೆ. ಈ ಯೋಜನೆಯ ಉದ್ದೇಶವು ದೇಶದ ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ಅವರಿಗೆ ನೇರವಾಗಿ ಆರ್ಥಿಕ ಸಹಾಯ ಮಾಡುವುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News