365 ದಿನಗಳ ಲಾಕ್‌ಡೌನ್ ಅಡಿಯಲ್ಲಿ ಪಶ್ಚಿಮ ಬಂಗಾಳದ ಹಳ್ಳಿ
ಒಂದು ಕಡೆ ಬಾಂಗ್ಲಾದೇಶದ ಕ್ರಿಮಿನಲ್ಗಳ ಚಿತ್ರಹಿಂಸೆಯಾದರೆ ಮತ್ತೊಂದೆಡೆ ಬಿಎಸ್ಎಫ್ ಸೈನಿಕರು ಸಮೀಪಿಸುವ ಹೆಜ್ಜೆಗಳು ಅವರನ್ನು ತಮ್ಮ ಗುಡಿಸಲುಗಳಲ್ಲಿ ಹಿಮ್ಮೆಟ್ಟುವಂತೆ ಹೆದರಿಸುತ್ತವೆ. ಈ ಜನರಿಗೆ ಹೊರಬರಲು ಯಾವುದೇ ಮಾರ್ಗವಿಲ್ಲ.
ನಡಿಯಾ: ದೇಶಕ್ಕೆ ಸ್ವಾತಂತ್ರ್ಯ ದೊರೆತು ಏಳು ದಶಕಗಳು ಕಳೆದಿವೆ. ನಾವೆಲ್ಲರೂ ಸ್ವತಂತ್ರ ಭಾರತದಲ್ಲಿ ವಾಸಿಸುತ್ತಿದ್ದರೂ ಪಶ್ಚಿಮ ಬಂಗಾಳ (West Bengal)ದ ನಾಡಿಯಾ ಜಿಲ್ಲೆಯ ದತ್ತಪುಲಿಯ ಜೋರ್ಪಾಡಾ ಗ್ರಾಮದ 350 ಜನರು ಇಂದಿಗೂ ಅವಲಂಬನೆಯ ಜೀವನವನ್ನು ನಡೆಸುತ್ತಿದ್ದಾರೆ. ಒಂದು ಕಡೆ ಬಾಂಗ್ಲಾದೇಶದ ಕ್ರಿಮಿನಲ್ ಗಳ ಚಿತ್ರಹಿಂಸೆಯಾದರೆ ಮತ್ತೊಂದೆಡೆ ಬಿಎಸ್ಎಫ್ ಸೈನಿಕರು ಸಮೀಪಿಸುವ ಹೆಜ್ಜೆಗಳು ಅವರನ್ನು ತಮ್ಮ ಗುಡಿಸಲುಗಳಲ್ಲಿ ಹಿಮ್ಮೆಟ್ಟುವಂತೆ ಹೆದರಿಸುತ್ತವೆ. ಹೀಗಾಗಿ ಈ ಜನರಿಗೆ ಹೊರಬರಲು ಯಾವುದೇ ಮಾರ್ಗವಿಲ್ಲ.
ಈ ಗ್ರಾಮದಲ್ಲಿ ವಾಸಿಸುವ ಜನರಿಗೆ ಸ್ವಾತಂತ್ರ್ಯದ ಅರ್ಥವೇ ಗೊತ್ತಿಲ್ಲ. ಇನ್ನು ಹಬ್ಬ ಹರಿದಿನಗಳ ಸಂತೋಷ ದೂರದ ಮಾತು. ಸರಳವಾಗಿ ಹೇಳುವುದಾದರೆ ಅವರಿಗೆ ಒಂದರ್ಥದಲ್ಲಿ ವರ್ಷಪೂರ್ತಿ ಲಾಕ್‌ಡೌನ್ ವಿಧಿಸಲಾಗುತ್ತದೆ.
ಹೊರಗಿನ ಪ್ರಪಂಚದ ನಡೆಗಳ ಬಗ್ಗೆ ಅವರಿಗೆ ತಿಳಿದಿಲ್ಲ ಮತ್ತು ಅದರ ಅರ್ಥವೇ ಗೊತ್ತಿರದ ಕಾರಣ ಅವರಿಗೆ ಯಾವುದೇ ಆಸಕ್ತಿಯೂ ಇಲ್ಲ. ಅವರು ದೂರದರ್ಶನದಲ್ಲಿ ಸುದ್ದಿಗಳನ್ನು ನೋಡುತ್ತಾರೆ ಮತ್ತು ಅದು ಅವರ ಮಾಹಿತಿ ಸಂಗ್ರಹದ ಏಕೈಕ ಮೂಲವಾಗಿದೆ. ಈ ಜನರಿಗೆ ದಿನದ ನಿಗದಿತ ಸಮಯದಲ್ಲಿ ಮನೆಯಿಂದ ಹೊರಹೋಗಲು ಅವಕಾಶವಿದೆ ಮತ್ತು ಇತರ ಸಮಯಗಳಲ್ಲಿ ಕರ್ಫ್ಯೂ ಅಡಿಯಲ್ಲಿರುತ್ತಾರೆ.
ಈಗ ದೇಶಾದ್ಯಂತ ಲಾಕ್‌ಡೌನ್ (Lockdown) ಹೇರಲಾಗಿದೆ. ಕೆಲವು ವಾರಗಳ ಲಾಕ್‌ಡೌನ್ ನಿಂದಾಗಿ ಪ್ರತಿಯೊಬ್ಬರಿಗೂ ಸದ್ಯ ಇದರಿಂದ ಯಾವಾಗ ಮುಕ್ತಿ ಸಿಗುತ್ತದೋ ಎಂಬ ಚಿಂತೆ ಕಾಡುತ್ತಿದೆ. ಆದರೆ ದೀರ್ಘಕಾಲದಿಂದ ಅದೇ ಜೀವನವನ್ನು ನಡೆಸುತ್ತಿರುವುದರಿಂದ ಈ ಗ್ರಾಮಸ್ಥರಿಗೆ ಈ ಬಗ್ಗೆ ಚಿಂತೆಯೇ ಇಲ್ಲ. ಏಕೆಂದರೆ ಅವರ ಜೀವನ ನಮ್ಮ ಲಾಕ್‌ಡೌನ್ ನಿಯಮಗಲಿಗಿಂತಲೂ ಕಠಿಣ ಮತ್ತು ಅವರಿಗೆ ಮನೆಗಳನ್ನು ಬಿಡಲು ಅವಕಾಶವಿಲ್ಲ.
ಜೋರ್ಪಾಡ ಗ್ರಾಮದ ಮಧ್ಯದಲ್ಲಿಯೇ ಇಚಮತಿ ನದಿ ಹರಿಯುತ್ತದೆ. ಈ ನದಿಗೆ ಅಡ್ಡಲಾಗಿ ಬಾಂಗ್ಲಾದೇಶದ ಬದಿಯಲ್ಲಿ ಮತ್ತೊಂದು ಗ್ರಾಮವಿದೆ. ಇಲ್ಲಿಯೂ ಸಹ ಇದೇ ಈ ಹಳ್ಳಿಯ ರೀತಿಯಲ್ಲಿಯೇ ಲಾಕ್‌ಡೌನ್ ನಿಯಮಗಳನ್ನು ಅನ್ವಯಿಸಲಾಗಿದೆ.
ಜಾರ್ಪಡಾ ಪ್ರದೇಶದಲ್ಲಿ ವಾಸಿಸುವ ಜನರಿಗೆ ರಾಜ್ಯ ಸರ್ಕಾರದಿಂದ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗಿದ್ದರೂ, ಬಾಂಗ್ಲಾದೇಶದ ಜನರಿಗೆ ಇನ್ನೂ ಯಾವುದೇ ಪರಿಹಾರ ಸಾಮಗ್ರಿಗಳು ದೊರೆತಿಲ್ಲದ ಕಾರಣ ಅನಿಶ್ಚಿತತೆ ಇದೆ. ಪರಿಹಾರ ಸಾಮಗ್ರಿಗಳನ್ನು ಸ್ಥಳೀಯ ಮುಖಂಡರು ದೋಚಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಜೋರ್ಪಾಡಾದ ಶಾಸಕ ಸಮೀರ್ ಕುಮಾರ್ ಪೋದ್ದಾರ್ ಅವರೇ ಗ್ರಾಮಕ್ಕೆ ಪರಿಹಾರ ಸಾಮಗ್ರಿಗಳನ್ನು ತಂದಾಗ ಆ ಮುಗ್ಧ ಜನರ ಕಣ್ಣುಗಳಲ್ಲಿ ಕಂಡದ್ದು ಹಸಿವಿನ ಬೇಗೆ ತೀರುವ ಸಂತಸ.