ಮಕ್ಕಳಿಗೂ ಮಾಡಿಸಿ Aadhaar Card, ಮಕ್ಕಳ ಆಧಾರ್ ಕಾರ್ಡ್ ಗೆ ಏನೆಲ್ಲಾ ದಾಖಲೆ ಬೇಕು ಗೊತ್ತಿದೆಯಾ ?
ಮಕ್ಕಳಿಗೂ ಆಧಾರ್ ಕಾರ್ಡ್ ಬಹಳ ಮುಖ್ಯ ಎನ್ನುವುದು ನಿಮಗೆ ತಿಳಿದಿದೆಯೇ? ಒಂದು ವೇಳೆ ನೀವು ಇನ್ನೂ ನಿಮ್ಮ ಮಗುವಿನ ಆಧಾರ್ ಕಾರ್ಡ್ ಮಾಡಿಸದಿದ್ದಲ್ಲಿ, ಮಗುವಿನ ಆಧಾರ್ ಕಾರ್ಡ್ ಅನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆಮಾಹಿತಿ ಇಲ್ಲಿದೆ.
ದೆಹಲಿ: ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ (Aadhaar Card) ಎಷ್ಟು ಮುಖ್ಯವಾಗಿದೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಪ್ರತಿ ಕೆಲಸಗಳಿಗೂ ಅಗತ್ಯ ದಾಖಲೆಯಾಗಿ ಆಧಾರ್ ಅನ್ನು ಬಳಸಲಾಗುತ್ತಿದೆ. ಆದರೆ ಮಕ್ಕಳಿಗೂ ಆಧಾರ್ ಕಾರ್ಡ್ ಬಹಳ ಮುಖ್ಯ ಎನ್ನುವುದು ನಿಮಗೆ ತಿಳಿದಿದೆಯೇ? ಒಂದು ವೇಳೆ ನೀವು ಇನ್ನೂ ನಿಮ್ಮ ಮಗುವಿನ ಆಧಾರ್ ಕಾರ್ಡ್ ಮಾಡಿಸದಿದ್ದಲ್ಲಿ, ಮಗುವಿನ ಆಧಾರ್ ಕಾರ್ಡ್ ಅನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆಮಾಹಿತಿ ಇಲ್ಲಿದೆ.
ಮಕ್ಕಳ ಆಧಾರ್ ಕಾರ್ಡ್ ಪಡೆಯುವುದು ಹೇಗೆ ? :
ನಿಮ್ಮ ಮಗುವಿನ ಆಧಾರ್ ಕಾರ್ಡ್ (Aadhaar) ಮಾಡಲು ಬಯಸುವುದಾದರೆ, ಅದಕ್ಕಾಗಿ ನೀವು ಕೆಲ ದಾಖಲೆಗಳನ್ನು ಹೊಂದಿರಬೇಕು. ಮಕ್ಕಳ ಆಧಾರ್ ಕಾರ್ಡ್ ಮಾಡಿಸುವ ಪ್ರಕ್ರಿಯೆಯಲ್ಲಿ ಎರಡು ವಿಭಾಗಗಳನ್ನು ಮಾಡಲಾಗಿದೆ. ಮೊದಲ ವಿಭಾಗದಲ್ಲಿ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಇರಿಸಲಾಗಿದ್ದು, ಎರಡನೇ ವಿಭಾಗದಲ್ಲಿ 5 ರಿಂದ 15 ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್‌ಗಳನ್ನಾಗಿ ಮಾಡಲಾಗುತ್ತದೆ.
ಇದನ್ನೂ ಓದಿ: Aadhaar Card ನವೀಕರಣದಲ್ಲೂ ಮೋಸದ ಜಾಲ, ನಕಲಿ ವೆಬ್ ಸೈಟ್ ಗಳ ಬಗ್ಗೆ ಇರಲಿ ಎಚ್ಚರ..!
5 ವರ್ಷದ ಒಳಗಿನ ಮಕ್ಕಳ ಆಧಾರ್ ಕಾರ್ಡ್ ಮಾಡಿಸಲು ಬೇಕಾದ ದಾಖಲೆಗಳು :
1- ಮಗುವಿನ ಜನನ ಪ್ರಮಾಣಪತ್ರ (Birth Certificate), ಅಥವಾ ಜನನದ ವೇಳೆ ಆಸ್ಪತ್ರೆಯಿಂದ (Hospital) ನೀಡಿದ ಡಿಸ್ಚಾರ್ಜ್ ಕಾರ್ಡ್ ಅಥವಾ ಆಸ್ಪತ್ರೆಯಿಂದ ನೀಡಲ್ಪಟ್ಟ ಸ್ಲಿಪ್
2- ಪೋಷಕರಲ್ಲಿ ಒಬ್ಬರ ಆಧಾರ್ ಕಾರ್ಡ್
3-ಮಗುವಿನ ಆಧಾರ್ ಮಾಡಿಸುವ ವೇಳೆ ಎಲ್ಲಾ ದಾಖಲೆಗಳ ಮೂಲ ಪ್ರತಿಯನ್ನು ನಿಮ್ಮೊಂದಿಗೆ ತೆಗೆದುಕೊಳ್ಳಿ.
5 ರಿಂದ 15 ವರ್ಷದ ಮಕ್ಕಳ ಆಧಾರ್ ಗೆ ಬೇಕಾಗುವ ದಾಖಲೆಗಳು:
1- ಜನನ ಪ್ರಮಾಣಪತ್ರ
2- ಶಾಲೆಯ ಗುರುತಿನ ಚೀಟಿ(School ID Card)
3- ಶಾಲೆಯ ಗುರುತಿನ ಚೀಟಿ ಜೊತೆಗೆ ಶಾಶ್ವತ ವಿಳಾಸ ಪ್ರಮಾಣಪತ್ರ
ಇದನ್ನೂ ಓದಿ: Aadhaar card ಇಲ್ಲದೆ ಸಿಗಲ್ಲ Ration-Pension! ಇಲ್ಲಿದೆ ಸತ್ಯಾಸತ್ಯತೆ
ಈ ಕೆಳಗಿನ ವಿಚಾರಗಳು ಕೂಡಾ ನೆನಪಿರಲಿ :
1.5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಬಯೋಮೆಟ್ರಿಕ್ (Biometric) ವಿವರಗಳನ್ನು ತೆಗೆದುಕೊಳ್ಳುವುದಿಲ್ಲ. ಬರೀ ಫೋಟೋಗಳನ್ನು(Photo) ಮಾತ್ರ ತೆಗೆದುಕೊಳ್ಳಲಾಗುತ್ತದೆ.
2.ಮಗುವಿನ ಬಯೋಮೆಟ್ರಿಕ್ ವಿವರಗಳನ್ನು 5 ವರ್ಷಗಳ ನಂತರ ತೆಗೆದುಕೊಳ್ಳಲಾಗುತ್ತದೆ
3.ಮಗುವಿಗೆ 15 ವರ್ಷ ವಯಸ್ಸಾದಾಗ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸುವುದು ಅವಶ್ಯಕ.
4.ಮಕ್ಕಳ ಬಯೋಮೆಟ್ರಿಕ್ಸ್ ಅನ್ನು ನವೀಕರಿಸುವ ವೇಳೆ ಹಣ ಪಾವತಿಸಬೇಕಾಗಿಲ್ಲ, ಇದು ಸಂಪೂರ್ಣ ಉಚಿತ ಸೇವೆ
5.ಬಯೋಮೆಟ್ರಿಕ್ಸ್ ನವೀಕರಿಸಲು ಯಾವುದೇ ದಾಖಲಾತಿಗಳ ಅಗತ್ಯವಿಲ್ಲ
6.ಬಯೋಮೆಟ್ರಿಕ್ಸ್ ಅನ್ನು ನವೀಕರಿಸುವಾಗ, ಮಗುವಿನ ಆಧಾರ್ ಕಾರ್ಡ್ ನಿಮ್ಮೊಂದಿಗಿದ್ದರೆ ಸಾಕು
ಮಕ್ಕಳಿಗೆ ಆಧಾರ್ ಕಾರ್ಡ್‌ನ ಪ್ರಯೋಜನಗಳು :
ಪ್ರೌಢಾವಸ್ಥೆಗೆ ಬರುವ ತನಕ ಮಕ್ಕಳಿಗೆ ಡ್ರೈವಿಂಗ್ ಲೈಸೆನ್ಸ್,(Driving License) ವೋಟರ್ ಐಡಿ (Voter ID) ಮಾಡಿಸಲು ಸಾಧ್ಯವಿಲ್ಲ. ಹಾಗಾಗಿ ಮಕ್ಕಳನ್ನು ಗುರುತಿಸಲು ಇರುವ ಏಕೈಕ ದಾಖಲೆ ಅಂದರೆ ಅದು ಆಧಾರ್. ಸರ್ಕಾರಿ ಸಂಸ್ಥೆಗಳಲ್ಲಿ ಆಧಾರ್ ಅನ್ನು ಪ್ರಮುಖ ದಾಖಲೆಯಾಗಿ ಪರಿಗಣಿಸಲಾಗುತ್ತದೆ ಎನ್ನುವುದು ಗೊತ್ತಿದೆ. ಖಾಸಗಿ ಸಂಸ್ಥೆಗಳು ಕೂಡಾ ಆಧಾರನ್ನು ನಿರಾಕರಿಸುವುದಿಲ್ಲ..
ಇದನ್ನೂ ಓದಿ: ಈಗ ಚಿಟಿಕೆ ಹೊಡೆಯುವುದರಲ್ಲಿ Aadhaarನಲ್ಲಿ ಬದಲಾವಣೆ ಸಾಧ್ಯ !