Aadhaar card ಇಲ್ಲದೆ ಸಿಗಲ್ಲ Ration-Pension! ಇಲ್ಲಿದೆ ಸತ್ಯಾಸತ್ಯತೆ

Aadhaar Latest Update: ಆಧಾರ್ ಕಾರ್ಡ್ ಇಲ್ಲದೆ ಸರ್ಕಾರಿ ಯೋಜನೆಗಳ ಲಾಭ ಪಡೆಯುವುದು ತುಂಬಾ ಕಷ್ಟ, ಇದೀಗ  ಆಧಾರ್ ಕಾರ್ಡ್ ಇಲ್ಲದಿದ್ದರೆ ನಿಮಗೆ ಪಡಿತರ ಮತ್ತು ಪಿಂಚಣಿಯ ಲಾಭ ಸಿಗುವುದಿಲ್ಲ ಎಂಬ ಸುದ್ದಿ ವೈರಲ್ ಆಗುತ್ತಿದೆ.  

Written by - Yashaswini V | Last Updated : Jan 23, 2021, 01:45 PM IST
  • ಆಧಾರ್‌ನಲ್ಲಿನ ಮಾಹಿತಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ
  • ಆಧಾರ್ ಇಲ್ಲದೆ ರೇಷನ್ ಇಲ್ಲ ಎಂಬ ಸುದ್ದಿ ವೈರಲ್
  • ಆಧಾರ್ ಇಲ್ಲದೆ ಪಿಂಚಣಿ ಪಡೆಯಲಾಗುವುದಿಲ್ಲ ಎಂದು ಹೇಳಲಾಗುತ್ತಿದೆ
Aadhaar card ಇಲ್ಲದೆ ಸಿಗಲ್ಲ Ration-Pension! ಇಲ್ಲಿದೆ ಸತ್ಯಾಸತ್ಯತೆ title=
Ration-pension will not be available without Aadhaar card

ನವದೆಹಲಿ : Aadhaar Latest Update: ಇಂದಿನ ಕಾಲದಲ್ಲಿ ಆಧಾರ್ ಕಾರ್ಡ್ ಎಷ್ಟು ಮಹತ್ವದ್ದಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಸೋಶಿಯಲ್ ಮಿಡಿಯಾದಲ್ಲಿ ಕೆಲವು ಸುದ್ದಿಗಳು ವೈರಲ್ ಆಗುತ್ತಲೇ ಇರುತ್ತವೆ ಅವು ಸತ್ಯಕ್ಕೆ ದೂರವಾಗಿರುತ್ತದೆ. ಅಂತಹ ಸುದ್ದಿಗಳ ಸತ್ಯವನ್ನು ನಾವು ನಿಮಗೆ ತಿಳಿಸುತ್ತೇವೆ. ಇಂದು ನಾವು ನಿಮಗೆ ಆಧಾರ್ ಇಲ್ಲದೆ ಪಿಂಚಣಿ ಮತ್ತು ಪಡಿತರವನ್ನು ಪಡೆಯಲು ಸಾಧ್ಯವೇ? ಅಥವಾ ಇಲ್ಲವೇ? ಎಂಬುದರ ಸತ್ಯಾಸತ್ಯತೆಯನ್ನು ತಿಳಿಸುತ್ತಿದ್ದೇವೆ

ಪಡಿತರ, ಪಿಂಚಣಿ ನಿಯಮಗಳು ಯಾವುವು ?
ಸರ್ಕಾರಿ ಸೇವಾ ಅವಧಿ ಮುಗಿದ ನಂತರ ನೌಕರರಿಗೆ ಪಿಂಚಣಿ ಸೌಲಭ್ಯ ಸಿಗುತ್ತದೆ. ಈ ದಿನಗಳಲ್ಲಿ ಒಂದು ಸುದ್ದಿ ವೈರಲ್ ಆಗುತ್ತಿದೆ, ಇದರಲ್ಲಿ ಆಧಾರ್ (Aadhaar) ಇಲ್ಲದೆ ಪಿಂಚಣಿ ಪಡೆಯಲಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಪಡಿತರ ಬಗ್ಗೆ ಇದೇ ರೀತಿಯ ಸುದ್ದಿ ವೈರಲ್ ಆಗಿದೆ. ಆದರೆ ಆಧಾರ್ ಇಲ್ಲದಿದ್ದರೂ ಕೂಡ ಪಡಿತರ ಮತ್ತು ಪಿಂಚಣಿ ಪಡೆಯಲು ಸಾಧ್ಯ.

ಹೌದು, ಆಧಾರ್ ಇಲ್ಲದಿದ್ದರೆ, ಪ್ಯಾನ್ ಕಾರ್ಡ್  (PAN Card), ಡ್ರೈವಿಂಗ್ ಲೈಸೆನ್ಸ್ (Driving License), ಬ್ಯಾಂಕ್ ಪಾಸ್‌ಬುಕ್ ಮತ್ತು ಮತದಾರರ ಕಾರ್ಡ್‌ (Voter Card)ನಂತಹ ಇತರ ಸರ್ಕಾರಿ ದಾಖಲೆಗಳೊಂದಿಗೆ ಪರಿಶೀಲನೆ ಮಾಡಬಹುದು. ಈ ದಾಖಲೆಗಳ ಆಧಾರದ ಮೇಲೆ ಯಾವುದೇ ವ್ಯಕ್ತಿಯು ಪಿಂಚಣಿ ಮತ್ತು ಪಡಿತರ ಪ್ರಯೋಜನವನ್ನು ಪಡೆಯುವುದನ್ನು ಮುಂದುವರಿಸಬಹುದಾಗಿದೆ.

ಇದನ್ನೂ ಓದಿ - mAadhaar Appನಲ್ಲಿ ಹೆಚ್ಚಿನ ಸೇವೆ ಪಡೆಯುವುದು ಹೇಗೆ ಎಂದು ತಿಳಿಯಿರಿ

ನಿಮಗೆ ಸಮಸ್ಯೆಗಳಿದ್ದರೆ ಇಲ್ಲಿ ದೂರು ನೀಡಿ :
ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ಲದಿದ್ದರೆ ಮತ್ತು ಪಿಂಚಣಿ (Pension) ಅಥವಾ ಪಡಿತರವನ್ನು ಪಡೆಯುವಲ್ಲಿ ನೀವು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅದಕ್ಕೆ ಸಂಬಂಧಿಸಿದಂತೆ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರಕ್ಕೆ (UIDAI) ದೂರು ನೀಡಬಹುದು. ದೂರಿನ ನಂತರ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು ಸಂತ್ರಸ್ತರ ಪ್ರಕರಣವನ್ನು ಅರಿತುಕೊಳ್ಳುತ್ತದೆ ಮತ್ತು ನಿಯಮಗಳ ಪ್ರಕಾರ ದೂರುದಾರರಿಗೆ ಸಾಧ್ಯವಾದಷ್ಟು ಬೇಗ ಪ್ರಯೋಜನವನ್ನು ನೀಡಲು ಪ್ರಯತ್ನಿಸುತ್ತದೆ.

ಆಧಾರ್‌ನಲ್ಲಿ ಮಾಹಿತಿ ಸುರಕ್ಷಿತವಾಗಿದೆ :
ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು (Unique Identification Authority of India) ಆಧಾರ್ ಕಾರ್ಡ್ ತಯಾರಿಸಲು ಹೆಸರು, ಹುಟ್ಟಿದ ದಿನಾಂಕ, ಹುಟ್ಟಿದ ಸ್ಥಳ, ವಿಳಾಸ ಮತ್ತು ಬೆರಳು ಮುದ್ರಣ, ಐರಿಸ್ ಸ್ಕ್ಯಾನ್, ಮೊಬೈಲ್ ಸಂಖ್ಯೆ ಮತ್ತು ಮೇಲ್ ಐಡಿ ಮುಂತಾದ ಕೆಲವು ಪ್ರಮುಖ ಮಾಹಿತಿಯನ್ನು ತೆಗೆದುಕೊಳ್ಳುತ್ತದೆ. 
ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು ಆಧಾರ್ ಕಾರ್ಡ್‌ಗಾಗಿ ಧರ್ಮ, ಜಾತಿ, ಶಿಕ್ಷಣ, ಕುಟುಂಬ ಮತ್ತು ಬ್ಯಾಂಕ್ ಖಾತೆಯ ಬಗ್ಗೆ ಮಾಹಿತಿಯನ್ನು ತೆಗೆದುಕೊಳ್ಳುವುದಿಲ್ಲ.
ಅಂತಹ ಮಾಹಿತಿಯನ್ನು ಯಾರಾದರೂ ನಿಮ್ಮಿಂದ ತೆಗೆದುಕೊಳ್ಳಲು ಪ್ರಯತ್ನಿಸಿದರೆ, ಈ ಮಾಹಿತಿಯನ್ನು ಎಲ್ಲೂ ಹಂಚಿಕೊಳ್ಳಬೇಡಿ.

ಇದನ್ನೂ ಓದಿ - ಈಗ ಚಿಟಿಕೆ ಹೊಡೆಯುವುದರಲ್ಲಿ Aadhaarನಲ್ಲಿ ಬದಲಾವಣೆ ಸಾಧ್ಯ !

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News