ದೆಹಲಿ ವಿಧಾನಸಭಾ ಚುನಾವಣೆ: ಸಿಎಂ ಕೇಜ್ರಿವಾಲ್ ಬಳಿಯಿರುವ ಸಂಪತ್ತೆಷ್ಟು?
ಆಮ್ ಆದ್ಮಿ ಪಕ್ಷದ (AAP) ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಒಟ್ಟು ಆಸ್ತಿ 2015 ರಲ್ಲಿ 2.1 ಕೋಟಿ ರೂ. ಸಂಪತ್ತನ್ನು ಹೊಂದಿದ್ದರು. 2015 ರಿಂದ ಅವರ ಸಂಪತ್ತಿನಲ್ಲಿ 1.3 ಕೋಟಿ ರೂ. ಹೆಚ್ಚಳವಾಗಿದೆ.
ನವದೆಹಲಿ: ಕಳೆದ ಐದು ವರ್ಷಗಳಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ಅವರ ಆಸ್ತಿ ಸಂಪತ್ತು 1.3 ಕೋಟಿಗಳಷ್ಟು ಹೆಚ್ಚಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ (ಜನವರಿ 21) ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ನೀಡಿದ ಅಫಿಡವಿಟ್ ನಲ್ಲಿ ಅವರ ಆಸ್ತಿಗಳ ವಿವರಗಳನ್ನು ಬಹಿರಂಗಪಡಿಸಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆ (Delhi Assembly elections 2020) ಗೆ ಸಿಎಂ ಅರವಿಂದ್ ಕೇಜ್ರಿವಾಲ್ ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಲಾದ ಅಫಿಡವಿಟ್ ಪ್ರಕಾರ, ಆಮ್ ಆದ್ಮಿ ಪಕ್ಷದ (AAP) ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಸ್ತುತ ಒಟ್ಟು ಆಸ್ತಿ 2015 ರಲ್ಲಿ 2.1 ಕೋಟಿ ರೂ. ಸಂಪತ್ತನ್ನು ಹೊಂದಿದ್ದರು. 2015 ರಿಂದ ಅವರ ಸಂಪತ್ತಿನಲ್ಲಿ 1.3 ಕೋಟಿ ರೂ. ಹೆಚ್ಚಳವಾಗಿದೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು 2015 ರಲ್ಲಿ 15 ಲಕ್ಷ ರೂ.ಗಳ ನಗದು ಮತ್ತು ಸ್ಥಿರ ಠೇವಣಿ (ಎಫ್‌ಡಿ) ಹೊಂದಿದ್ದು, ಇದು 2020 ರಲ್ಲಿ 57 ಲಕ್ಷ ರೂ.ಗೆ ಏರಿಕೆ ಆಗಿದೆ. ಪಕ್ಷದ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ ಸುನೀತಾ ಕೇಜ್ರಿವಾಲ್ ಸ್ವಯಂಪ್ರೇರಿತ ನಿವೃತ್ತಿ (ವಿಆರ್‌ಎಸ್) ಪಡೆದ ಬಳಿಕ ಅವರಿಗೆ 32 ಲಕ್ಷ ರೂ. ಸೌಲಭ್ಯವಾಗಿ ಸ್ವೀಕರಿಸಿದ್ದಾರೆ. ಅಲ್ಲದೆ ಎಫ್‌ಡಿ ಸೇರಿದಂತೆ ಉಳಿದ ಮೊತ್ತವು ಅವರ ಉಳಿತಾಯವಾಗಿದೆ.
ಮುಖ್ಯಮಂತ್ರಿಯವರು 2015 ರಲ್ಲಿ 2.26 ಲಕ್ಷ ರೂ.ಗಳ ನಗದು ಮತ್ತು ಎಫ್‌ಡಿಗಳನ್ನು ಹೊಂದಿದ್ದರು, ಅದು 2020 ರಲ್ಲಿ 9.65 ಲಕ್ಷಕ್ಕೆ ಏರಿತು. ಪತ್ನಿಯ ಸ್ಥಿರ ಆಸ್ತಿಗಳ ಮೌಲ್ಯಮಾಪನದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ, ಕೇಜ್ರಿವಾಲ್ ಅವರ ಸ್ಥಿರ ಆಸ್ತಿ 92 ಲಕ್ಷ ರೂ.ಗಳಿಂದ 177 ಲಕ್ಷಕ್ಕೆ ಏರಿದೆ.
ದೆಹಲಿ ಸಿಎಂ ಅವರ ಸ್ಥಿರ ಆಸ್ತಿ ಕಳೆದ ಐದು ವರ್ಷಗಳಲ್ಲಿ 92 ಲಕ್ಷ ರೂ.ಗಳಿಂದ 1.7 ಕೋಟಿ ರೂ.ಗೆ ಏರಿದೆ. ಆದರೆ ಸ್ಥಿರ ಮೌಲ್ಯದಲ್ಲಿ ಯಾವುದೇ ಬದಲಾವಣೆಗಳಿಲ್ಲ. 2015 ರಂತೆ ಅದೇ ಆಸ್ತಿಯ ಮೌಲ್ಯಮಾಪನ ಹೆಚ್ಚಳದಿಂದಾಗಿ ಕೇಜ್ರಿವಾಲ್ ಅವರ ಸ್ಥಿರ ಆಸ್ತಿಗಳ ಮೌಲ್ಯ ಹೆಚ್ಚಾಗಿದೆ ಎಂದು ಎಎಪಿ ನಾಯಕರು ಹೇಳಿದ್ದಾರೆ.
ದೆಹಲಿಯ ಎಲ್ಲಾ 70 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 8 ರಂದು ಮತದಾನ ನಡೆಯಲಿದ್ದು, ಫೆಬ್ರವರಿ 11 ರಂದು ಮತ ಎಣಿಕೆ ನಡೆಯಲಿದೆ.