ನವದೆಹಲಿ: ಒಂದು ವೇಳೆ ನೀವೂ ಕೂಡ ನಿಮ್ಮ ಬ್ಯಾಂಕ್‌ಗೆ (Bank) ಸಂಬಂಧಿಸಿದ ಕೆಲಸ ಬಾಕಿ ಉಳಿಸಿಕೊಂಡಿದ್ದು ಮತ್ತು ಅದನ್ನು ಶೀಘ್ರದಲ್ಲೇ ಇತ್ಯರ್ಥಗೊಳಿಸಲು ನೀವು ಬಯಸುತ್ತಿದ್ದರೆ, ಈ ಹಬ್ಬದ ಋತುವಿನಲ್ಲಿ  ಬ್ಯಾಂಕ್‌ಗೆ ಹೋಗುವ ಮೊದಲು ರಜಾ ಪಟ್ಟಿಯನ್ನು (Bank Holiday November 2020) ಅನ್ನು ಪರಿಶೀಲಿಸಲು ಮರೆಯದಿರಿ. ವಾಸ್ತವದಲ್ಲಿ ದೀಪಾವಳಿಯ ನಂತರ ಮುಂಬರುವ ವಾರದಲ್ಲಿ ಬ್ಯಾಂಕುಗಳು ಮೂರು ದಿನಗಳವರೆಗೆ ಬಂದ್ ಇರಲಿವೆ.


COMMERCIAL BREAK
SCROLL TO CONTINUE READING

ಇದನ್ನು ಓದಿ-ದಿನಸಿ ಅಂಗಡಿಯನ್ನು Online Store ಆಗಿ ಪರಿವರ್ತಿಸಲು ಆಫರ್ ನೀಡಿದ ICICI Bank


ಗೋವರ್ಧನ್ ಪೂಜೆಯಿಂದಾಗಿ ನವೆಂಬರ್ 15 ರ ಭಾನುವಾರ ದೇಶಾದ್ಯಂತ ಬ್ಯಾಂಕುಗಳು ಬಂದ್ ಇರಲಿವೆ ನವೆಂಬರ್ 16 ರಂದು ಭೈದುಜ್ ಅಥವಾ ಭಾವುಬೀಜ್  ಹಬ್ಬ ಇದ್ದರೆ, ಈ ದಿನ ಬ್ಯಾಂಕಿನಲ್ಲಿ ಯಾವುದೇ ಕೆಲಸ ಇರುವುದಿಲ್ಲ. ಇದರ ನಂತರ, ನವೆಂಬರ್ 20 ಮತ್ತು 21 ರಂದು ಛಟ್  ಪೂಜೆಯ ನಿಮಿತ್ತ ಬಿಹಾರ ಮತ್ತು ಜಾರ್ಖಂಡ್‌ನ ಬ್ಯಾಂಕಿನಲ್ಲಿ ರಜೆ ಇರುತ್ತದೆ. ನಂತರ ನವೆಂಬರ್ 22 ಭಾನುವಾರ, ಆಗಲೂ ನಿಮಗೆ ಬ್ಯಾಂಕಿನಲ್ಲಿ ಯಾವುದೇ ಕೆಲಸ ನಡೆಯುವುದಿಲ್ಲ.


ಇದನ್ನು ಓದಿ-PO 2020 ಪರೀಕ್ಷೆಯ ದಿನಾಂಕ ಬಿಡುಗಡೆಗೊಳಿಸಿದ ಎಸ್‌ಬಿಐ, ಇಲ್ಲಿದೆ ವಿವರ


28, 29 ಮತ್ತು 30 ನವೆಂಬರ್ ಗೆ ಬ್ಯಾಂಕ್ ಗಳು ಬಂದ್ ಇರಲಿವೆ
ನವೆಂಬರ್ 28 ರಂದು ತಿಂಗಳ ನಾಲ್ಕನೇ ಶನಿವಾರ ಹಾಗೂ 29 ರಂದು ಭಾನುವಾರ ರಜೆ ಇರುವ ಕಾರಣ ಬ್ಯಾಂಕ್ ಗಳು ಬಂದ್ ಇರಲಿವೆ. 30 ರಂದು ಗುರುನಾನಕ್ ಜಯಂತಿ ಹಾಗೂ ಕಾರ್ತಿಕ್ ಪೌರ್ಣಿಮೆಯ ನಿಮಿತ್ತ ಸಾರ್ವತ್ರಿಕ ರಜೆ ಇರಲಿದೆ. 


ಇದನ್ನು ಓದಿ- ATM ಕಾರ್ಡ್ ಮೇಲೆ ನಿಮ್ಮ ಮಗುವಿನ ಫೋಟೋ ಮುದ್ರಿಸಿ, ಈ ಬ್ಯಾಂಕ್ ಆರಂಭಿಸಿದೆ ಸೇವೆ


ಇವುಗಳಲ್ಲದೆ ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯ ಹಬ್ಬಗಳು ಆಚರಿಸುವ ಕಾರಣ ನವೆಂಬರ್ ತಿಂಗಳಿನಲ್ಲಿ ರಜಾ ದಿನಗಳು ಇರಲಿವೆ. ಈ ಕುರಿತಾದ ಮಾಹಿತಿಯನ್ನು ನೀವು ರಿಸರ್ವ್ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಪಡೆಯಬಹುದು.