ನವದೆಹಲಿ: ಸಾಮಾನ್ಯವಾಗಿ ಬ್ಯಾಂಕ್ ಗಳು ಎಟಿಎಂ ಡೆಬಿಟ್ ಕಾರ್ಡ್ ಗಳ ಮೇಲೆ ತಮ್ಮ ಭಾವಚಿತ್ರ ನೆಚ್ಚಿನ ಭಾವಚಿತ್ರ ಅಥವಾ ಸ್ವಂತ ಫೋಟೋ ಲಗತ್ತಿಸುವ ಸೌಕರ್ಯ ನೀಡುತ್ತವೆ. ಈ ರೀತಿಯ ಕಾರ್ಡ್ ಮಾಡಿಸಲು ಬ್ಯಾಂಕ್ ಗಳು ಗ್ರಾಹಕರಿಂದ ಚಾರ್ಜ್ ಕೂಡ ವಸೂಲಿ ಮಾಡುತ್ತವೆ. ಆದರೆ, ಇದೀಗ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಮಕ್ಕಳಿಗಾಗಿ ಅವರ ಭಾವಚಿತ್ರವಿರುವ ಎಟಿಎಂ ಕಾರ್ಡ್ ಜಾರಿಗೊಳಿಸುವ ಸೌಕರ್ಯವನ್ನು ಆರಂಭಿಸಿದೆ. ಮಕ್ಕಳ ಖಾತೆಗೆ ಮಿನಿಮಮ್ ಬ್ಯಾಲೆನ್ಸ್ ತಾಪತ್ರಯ ಕೂಡ ಇಲ್ಲ.
ಈ ಖಾತೆಗಳ ಮೇಲೆ ಸಿಗಲಿದೆ ಸೌಕರ್ಯ
'ಪೆಹಲಾ ಕದಂ' ಹಾಗೂ ಪೆಹಲಿ ಉಡಾನ್ ಸ್ಕೀಮ್ ಅಡಿ ಬ್ಯಾಂಕ್ ಮಕ್ಕಳ ಖಾತೆ ತೆರೆಯಲು ಅವಕಾಶ ಮಾಡಿಕೊಟ್ಟಿದೆ. ಈ ಖಾತೆಯ ಅಡಿ ಮಕ್ಕಳಿಗೆ ಎಟಿಎಂ ಕಾರ್ಡ್ ಜಾರಿಗೊಳಿಸಲಾಗುತ್ತದೆ. ಮಕ್ಕಳಿಗೆ ಜಾರಿಗೊಳಿಸುವ ಎಟಿಎಂ ಅಥವಾ ಡೆಬಿಟ್ ಕಾರ್ಡ್ ಮೇಲೆ ಅವರ ಭಾವಚಿತ್ರ ಕೂಡ ಲಗತ್ತಿಸಲಾಗುತ್ತದೆ. ಈ ಖಾತೆಗಳಿಂದ ರೂ.5000 ವರೆಗೆ ವಿಥ್ ಡ್ರಾ ಮಾಡುವ ಹಾಗೂ ಶಾಪಿಂಗ್ ಮಾಡುವ ಸೌಕರ್ಯ ಕೂಡ ಬ್ಯಾಂಕ್ ನೀಡುತ್ತದೆ.
ಇದನ್ನು ಓದಿ- ಈ 5 ತಪ್ಪುಗಳನ್ನು ಎಂದಿಗೂ ಮಾಡಬೇಡಿ ಎಂದು ತನ್ನ ಗ್ರಾಹಕರಿಗೆ SBI ಎಚ್ಚರಿಕೆ
ಸಿಗಲಿದೆ ಶೇ.4 ರಷ್ಟು ಬಡ್ಡಿ ದರ
ಈ ಖಾತೆಗಳ ಮೂಲಕ ಮಕ್ಕಳು ರೂ.2000 ವರೆಗೆ ಹಣ ಪಾವತಿಸಬಹುದು ಅಥವಾ ಟಾಪ್ ಅಪ್ ಪಡೆಯಬಹುದು. ಈ ಎರಡೂ ರೀತಿಯ ಖಾತೆಗಳಿಗೆ ಸೇವಿಂಗ್ ಬ್ಯಾಂಕ್ ಖಾತೆಗೆ ಸಿಗುವಷ್ಟು ಬಡ್ಡಿ ದರ ಸಿಗುತ್ತದೆ. ಅಂದರೆ ಶೇ.4 ರಷ್ಟು ಬಡ್ಡಿದರ. ಈ ಖಾತೆಗಳಿಗೆ ಮಕ್ಕಳಿಗೆ ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಎಟಿಎಂ ಕಾರ್ಡ್, ಚೆಕ್ ಬುಕ್ ಇತ್ಯಾದಿ ಸೌಲಭ್ಯಗಳನ್ನು ಸಹ ನೀಡಲಾಗುತ್ತದೆ. ಇವು ಒಟ್ಟು ಎರಡು ರೀತಿಯ ಅಕೌಂಟ್ ಗಳಿವೆ. ಮೊದಲ ಖಾತೆ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಇದ್ದರೆ , ಪೆಹಲಿ ಉಡಾನ್ 10 ವರ್ಷಕ್ಕಿಂತ ಮೇಲ್ಪಟ್ಟ ಯುನಿಫಾರ್ಮ್ ಸಹಿ ಮಾಡಲು ಸಮರ್ಥರಾಗಿರುವ ಮಕ್ಕಳಿಗಾಗಿ ಇದೆ.
ತಂದೆ-ತಾಯಿಯ ಜೊತೆಗೆ ಅವರು ಈ ಖಾತೆಯನ್ನು ತೆರೆಯಬಹುದು
'ಪೆಹಲಾ ಕದಂ' ಖಾತೆಯ ಅಡಿ ಯಾವುದೇ ಮಗು ಅಥವಾ ಅಪ್ರಾಪ್ತ ತನ್ನ ತಂದೆ-ತಾಯಿಯ ಜೊತೆ ಸೇರಿ ಜ್ವಾಯಿಂತ್ ಅಕ್ಕೌಂಟ್ ತೆರೆಯಬಹುದಾಗಿದೆ. ಜೊತೆಗೆ ಈ ಖಾತೆಯನ್ನು ತಂದೆ-ತಾಯಿಯರ ಜೊತೆಗೆ ಸೇರಿ ಮಕ್ಕಳೂ ಕೂಡ ನಿರ್ವಹಿಸಬಹುದು. ಇನ್ನೊಂದೆಡೆ 'ಪೆಹಲಿ ಉಡಾನ್' ಕೇವಲ 10 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತ್ ಮಕ್ಕಳ ಹೆಸರಿಗ ಮಾತ್ರ ಇರಲಿದೆ. ಈ ಖಾತೆಯ ನಿರ್ವಹಣೆ ಕೇವಲ ಆ ಮಗು ಮಾತ್ರ ಮಾಡಬಹುದು. ಖಾತೆ ತೆರೆಯಲು ಕೆವೈಸಿ ಮಾಡಿಸುವುದು ಅನಿವಾರ್ಯ.
ಇದನ್ನು ಓದಿ- ಗುಡ್ ನ್ಯೂಸ್! ಜನ ಧನ್ ಖಾತೆಗಳಲ್ಲಿ ಈ ವಹಿವಾಟುಗಳಿಗೆ ಇಲ್ಲ ಶುಲ್ಕ
ಅತ್ಯಧಿಕ ಅಂದರೆ 10 ಲಕ್ಷ ರೂ. ಜಮಾ ಮಾಡಬಹುದು
ಮಕ್ಕಳಿಗೋಸ್ಕರ ಎಂದೇ ವಿಶೇಷವಾಗಿರುವ ಈ ಖಾತೆಯಲ್ಲಿ ಹೆಚ್ಚುವರಿ ಅಂದರೆ 10 ಲಕ್ಷ ರೂ ಹಣ ಡಿಪಾಸಿಟ್ ಮಾಡಬಹುದು. ಇದಕ್ಕಿಂತ ಹೆಚ್ಚಿನ ಹಣ ಡಿಪಾಸಿಟ್ ಮಾಡಲು ಅವಕಾಶವಿಲ್ಲ. ಈ ಎರಡೂ ಖಾತೆಗಳಲ್ಲಿ ನಿತ್ಯ ಟ್ರಾನ್ಸಾಕ್ಷನ್ ಲಿಮಿಟ್ ಕೇವಲ ರೂ.5000 ಮಾತ್ರ ಇದೆ. ಇದರಿಂದ ವ್ಯಕ್ತಿ ಬಿಲ್ ಪಾವತಿ, ಇಂಟರ್ನೆಟ್ ಬ್ಯಾಂಕಿಂಗ್ ಫಂಡ್ ಟ್ರಾನ್ಸ್ಫರ್ ಹಾಗೂ ಡಿಮಾಂಡ್ ಡ್ರಾಫ್ಟ್ ಮಾಡಿಸಬಹುದು.
ಇದನ್ನು ಓದಿ- ಎಸ್ಬಿಐನ ಈ ಕಾರ್ಡ್ನೊಂದಿಗೆ ಮೆಟ್ರೋದಲ್ಲಿ ಸುಲಭವಾಗಲಿದೆ ನಿಮ್ಮ ಪ್ರಯಾಣ
ಚೆಕ್ ಬುಕ್ ಸೌಲಭ್ಯ ಸಿಗುತ್ತದೆ
ಪೆಹಲಾ ಕದಂ ಖಾತೆಯ ಅಡಿ 10 ಚೆಕ್ ಗಳ ಚೆಕ್ ಬುಕ್ ಜಾರಿ ಮಾಡಲಾಗುತ್ತದೆ. ಈ ಚೆಕ್ ಬುಕ್ ಅನ್ನು ಮಕ್ಕಳ ಹೆಸರಿನಲ್ಲಿ ಅವರ ಪೋಷಕರಿಗೆ ನೀಡಲಾಗುತ್ತದೆ. ಮಗು ತನ್ನ ಹಸ್ತಾಕ್ಷರ ನಮೂದಿಸಲು ಶಕ್ತವಾಗಿದ್ದರೆ ಮಾತ್ರ ಈ ಚೆಕ್ ಬುಕ್ ಪೋಷಕರಿಗೆ ನೀಡಲಾಗುತ್ತದೆ.