ನವದೆಹಲಿ : 2020ರ ನವೆಂಬರ್ ತಿಂಗಳಂತಹ ಮಾಸ ಹಿಂದೆ ಎಂದೂ ಬಂದಿಲ್ಲ. ಅಂದರೆ ಬಾರಿ ನವೆಂಬರ್ ನಲ್ಲಿ (November) ಸಾಲು ಸಾಲು ರಜೆಗಳಿವೆ. ತಿಂಗಳ 30 ದಿನಗಳಲ್ಲಿ ಈ ಬಾರಿ 14 ದಿನ ರಜೆಯಲ್ಲೇ (Holiday) ಕಳೆಯಲಿದೆ. 


COMMERCIAL BREAK
SCROLL TO CONTINUE READING

ರಜೆಯ ಮೊದಲೇ ನಿಮ್ಮ ಕೆಲಸಗಳನ್ನು ಪೂರೈಸಿಕೊಳ್ಳುವುದು ಸೂಕ್ತ:
ನವೆಂಬರ್‌ನಲ್ಲಿ 14 ದಿನ ರಜೆ ಎಂದರೆ ಒಮ್ಮೆಗೆ ಸಂತೋಷದಿಂದ ಹಿಗ್ಗಿಕೊಳ್ಳಬಹುದು. ಆದರೆ ಇದರೊಂದಿಗೆ ಯೋಚಿಸಬೇಕಾದ ವಿಚಾರವೂ ಇದೆ. ನೀವೇನಾದರೂ ಈ ತಿಂಗಳಲ್ಲಿ ಬ್ಯಾಂಕ್ (Banks) ವ್ಯವಹಾರ ನಡೆಸಬೇಕಾಗಿದ್ದರೆ ಬೇಗನೇ ಪೂರೈಸಿಕೊಳ್ಳುವುದು ಸೂಕ್ತ. ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳಿಗೆ ಈ ತಿಂಗಳಲ್ಲಿ ಸಾಲು ಸಾಲು ಹಬ್ಬ, ಶನಿವಾರ , ಭಾನುವಾರ ಸೇರಿ 14 ದಿನ ರಜೆಯಿರಲಿದೆ.  


ಆರ್‌ಬಿಐ ಮಹತ್ವದ ಹೆಜ್ಜೆ: ಜನವರಿ 1ರಿಂದ Cheque ಮೂಲಕ ಪಾವತಿ ನಿಯಮಗಳಲ್ಲಿ ಬದಲಾವಣೆ


ಆರ್ ಬಿಐ (RBI) ಗೈಡ್ ಲೈನ್ ಪ್ರಕಾರ, ರಜೆ ದಿನ ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ. 14ನೇ ನವೆಂಬರ್ ಶನಿವಾರ ನರಕ ಚರ್ತುದಶಿ ಇರಲಿದೆ. 16ನೇ ನವೆಂಬರ್ ದೀಪಾವಳಿ ಮತ್ತು ನ.30 ಗುರುನಾನಕ್ ಜಯಂತಿ ಇರಲಿದೆ. ಹೀಗಾಗಿ ಈ ದಿನಗಳು ಕೂಡಾ ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ.


ಬ್ಯಾಂಕ್ ಗ್ರಾಹಕರು ತಿಳಿದಿರಲೇಬೇಕಾದ 5 ಪ್ರಮುಖ ವಿಷಯಗಳಿವು


ನವೆಂಬರ್‌ನಲ್ಲಿ ಬ್ಯಾಂಕ್ ರಜಾ ದಿನಗಳ ವಿವರ ಹೀಗಿದೆ:
ನವೆಂಬರ್ 1 _ ಭಾನುವಾರ
ನವೆಂಬರ್ 8 – ಭಾನುವಾರ
ನವೆಂಬರ್ 13 _ ವಂಗಲ್ ಹಬ್ಬ (ಅಸ್ಸಾಂ)
ನವೆಂಬರ್  14 _ ನರಕ ಚರ್ತುದಶಿ
ನವೆಂಬರ್ 15 – ಭಾನುವಾರ
ನವೆಂಬರ್ 16 - ದೀಪಾವಳಿ
ನವೆಂಬರ್ 17 – ಲಕ್ಷ್ಮೀ ಪೂಜೆ / ನಿಂಗೋಲ್ ಚಕ್ಕೊಬಾ (ಉತ್ತರಭಾರತ)
ನವೆಂಬರ್ 18 -  ಲಕ್ಷ್ಮೀ ಪೂಜೆ / ದೀಪಾವಳಿ (ಉತ್ತರಭಾರತ)
ನವೆಂಬರ್ 20 -  ಲಕ್ಷ್ಮೀ ಪೂಜೆ/ ಛಟ್ ಪೂಜೆ (ಉತ್ತರಭಾರತ)
ನವೆಂಬರ್ 21 -  ಛಟ್ ಪೂಜೆ (ಉತ್ತರಭಾರತ)
ನವೆಂಬರ್ 22 - ಭಾನುವಾರ
ನವೆಂಬರ್ 23 -  ಸೇಂಗ್ ಕುತ್ ಸ್ನೇಮ್ (ಮೇಘಾಲಯ)
ನವೆಂಬರ್ 28 – ನಾಲ್ಕನೇ ಶನಿವಾರ 
ನವೆಂಬರ್ 30 - ಗುರು ನಾನಕ್ ಜಯಂತಿ