ಗಾಂಧಿನಗರ: ಗುಜರಾತ್ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್  (Bhupendra Patel)  ಪ್ರಮಾಣ ವಚನ ಸ್ವೀಕರಿಸಿದ್ದಾರೆ.  ಗಾಂಧಿನಗರದಲ್ಲಿರುವ ರಾಜಭವನದಲ್ಲಿ ಪ್ರಮಾಣವಚನ ಸಮಾರಂಭ ನೆರೆವೇರಿತು. ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಭೂಪೇಂದ್ರ ಪಟೇಲ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಎರಡು ದಿನಗಳ ನಂತರ, ಹೊಸ ಸರ್ಕಾರದ ಕ್ಯಾಬಿನೆಟ್ ರಚನೆಯಾಗಲಿದೆ. 


COMMERCIAL BREAK
SCROLL TO CONTINUE READING

ಗಾಂಧಿನಗರದಲ್ಲಿ ನಡೆದ ಸಿಎಂ ಪ್ರಮಾಣವಚನ ಸಮಾರಂಭ :
 ಭೂಪೇಂದ್ರ ಪಟೇಲ್  (Bhupendra Patel)  ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಭಾಗಿಯಾಗಿದ್ದರು.   ಶಿವರಾಜ್ ಸಿಂಗ್ ಚೌಹಾಣ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದಲ್ಲದೇ, ಇತರ ಹಲವು ಹಿರಿಯ ಬಿಜೆಪಿ (BJP) ನಾಯಕರು ಕೂಡ ಪ್ರಮಾಣವಚನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. 


ಇದನ್ನೂ ಓದಿ : Atal Pension Yojana: ವಿವಾಹಿತರಿಗೆ ಭಾರೀ ಲಾಭವಾಗಲಿದೆ ಈ ಸರ್ಕಾರಿ ಯೋಜನೆ , ಪ್ರತಿ ತಿಂಗಳು ಸಿಗಲಿದೆ 10,000 ಪಿಂಚಣಿ


ಸಿಎಂ ಭೂಪೇಂದ್ರ ಪಟೇಲ್ ಹೇಳಿಕೆ : 
ಭಾನುವಾರ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ, ಸಿಎಂ ಭೂಪೇಂದ್ರ ಪಟೇಲ್,  ಪ್ರಧಾನಿ ನರೇಂದ್ರ ಮೋದಿ (PM Narendra Modi) , ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಗುಜರಾತ್‌ನ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸುವುದಾಗಿ , ಹೇಳಿದ್ದಾರೆ. ನಾವು ಎಲ್ಲರೊಂದಿಗೆ ಒಟ್ಟಾಗಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುವುದಾಗಿ ಗುಜರಾತ್ ನೂತನ ಮುಖ್ಯಮಂತ್ರಿಗಳು (Gujrat new CM) ಹೇಳಿದ್ದಾರೆ. 


5 ವರ್ಷಗಳ ನಂತರ, ಮುಖ್ಯಮಂತ್ರಿಯಾದ ಪಾಟಿದಾರ್ ಸಮುದಾಯದ ವ್ಯಕ್ತಿ : 
5 ವರ್ಷಗಳ ನಂತರ, ಬಿಜೆಪಿ ಮತ್ತೊಮ್ಮೆ ರಾಜ್ಯದ ಆಡಳಿತವನ್ನು, ಪಾಟೀದಾರ್‌ ಸಮುದಾಯದ ವ್ಯಕ್ತಿಗೆ ವಹಿಸಿದೆ. ಗುಜರಾತಿನ ಪಾಟಿದಾರ್ ಸಮುದಾಯವು ಹಣ ಮತ್ತು ಅಧಿಕಾರದ ದೃಷ್ಟಿಯಿಂದ ಬಹಳ ಶಕ್ತಿಯುತವಾಗಿದೆ. ಎರಡು ದಶಕಗಳ ಬಿಜೆಪಿಯ (BJP) ವಿಜಯ ಅಭಿಯಾನದಲ್ಲಿ ಈ ಸಮುದಾಯದ ಪಾತ್ರ ಬಹಳ ದೊಡ್ಡದು. ಈ ಸಮುದಾಯದ ಆನಂದಿಬೆನ್ ಪಟೇಲ್ 2016 ರಲ್ಲಿ ರಾಜೀನಾಮೆ ನೀಡಿದ್ದರು. ಇದೀಗ ಭೂಪೇಂದ್ರ ಪಟೇಲ್ ಕೈಗೆ ರಾಜ್ಯದ ಆಡಳಿತ ನೀಡಿ, ಬಿಜೆಪಿ ಹೈಕಮಾಂಡ್ (BJP High Command) ಪಾಟಿದಾರ್ ಕಾರ್ಡ್ ಪ್ಲೇ ಮಾಡಿದೆ. 


ಇದನ್ನೂ ಓದಿ : ಇನ್ನು ಆಧಾರ್ ಕಾರ್ಡ್ ನಂತೆಯೇ ಪ್ರತಿಯೊಬ್ಬರಿಗೂ ಸಿಗಲಿದೆ ಹೆಲ್ತ್ ಕಾರ್ಡ್, ಯಾಕೆಬೇಕು ಈ ಕಾರ್ಡ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.