ಇನ್ನು ಆಧಾರ್ ಕಾರ್ಡ್ ನಂತೆಯೇ ಪ್ರತಿಯೊಬ್ಬರಿಗೂ ಸಿಗಲಿದೆ ಹೆಲ್ತ್ ಕಾರ್ಡ್, ಯಾಕೆಬೇಕು ಈ ಕಾರ್ಡ್

ಈ ವಿಶಿಷ್ಟ ಕಾರ್ಡ್‌ನಿಂದ  ಯಾರಿಗೆ ಎಲ್ಲಿ ಚಿಕಿತ್ಸೆ ನೀಡಲಾಗಿದೆ ಎಂಬ ಮಾಹಿತಿ ತಿಳಿಯುತ್ತದೆ. ಅಲ್ಲದೆ, ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಈ ವಿಶಿಷ್ಟ ಆರೋಗ್ಯ ಕಾರ್ಡ್‌ನಲ್ಲಿ  ದಾಖಲಿಸಲಾಗುತ್ತದೆ.

Written by - Ranjitha R K | Last Updated : Sep 13, 2021, 02:32 PM IST
  • ಇನ್ನು ಆಧಾರ್ ಕಾರ್ಡ್‌ನಂತಹ ಯುನಿಕ್ ಹೆಲ್ತ್ ಕಾರ್ಡ್ ಲಭ್ಯ
  • ರೋಗಿಯ ಎಲ್ಲಾ ವಿವರಗಳು ಆರೋಗ್ಯ ಕಾರ್ಡ್‌ನಲ್ಲಿರುತ್ತವೆ.
  • ಜನರು ಆರೋಗ್ಯ ಕಾರ್ಡ್ ಅಡಿಯಲ್ಲಿ ಸರ್ಕಾರದ ಸೌಲಭ್ಯಗಳನ್ನು ಸಹ ಪಡೆಯುತ್ತಾರೆ
ಇನ್ನು ಆಧಾರ್ ಕಾರ್ಡ್ ನಂತೆಯೇ ಪ್ರತಿಯೊಬ್ಬರಿಗೂ ಸಿಗಲಿದೆ ಹೆಲ್ತ್ ಕಾರ್ಡ್, ಯಾಕೆಬೇಕು ಈ ಕಾರ್ಡ್  title=
ಇನ್ನು ಆಧಾರ್ ಕಾರ್ಡ್‌ನಂತಹ ಯುನಿಕ್ ಹೆಲ್ತ್ ಕಾರ್ಡ್ ಲಭ್ಯ (file photo)

ನವದೆಹಲಿ :  ಈಗ ಆಧಾರ್ ನಂತೆ, ಆರೋಗ್ಯ ಕಾರ್ಡ್  (Unique Health Card) ಕೂಡ ನೀಡಲಾಗುವುದು. ಡಿಜಿಟಲ್ ಹೆಲ್ತ್ ಮಿಷನ್ ಅಡಿಯಲ್ಲಿ, ಸರ್ಕಾರ ಪ್ರತಿಯೊಬ್ಬ ವ್ಯಕ್ತಿಗೂ ವಿಶಿಷ್ಟವಾದ ಆರೋಗ್ಯ ಕಾರ್ಡ್ ಅನ್ನು ನೀಡಲಿದೆ. ಇದು ಸಂಪೂರ್ಣವಾಗಿ ಡಿಜಿಟಲ್ ಕಾರ್ಡ್ (DIgital card) ಆಗಿದ್ದು ಅದು ಆಧಾರ್ ಕಾರ್ಡ್‌ನಂತೆಯೇ ಇರುತ್ತದೆ. ಆಧಾರ್ ಕಾರ್ಡ್‌ನಂತೆ (Aadhaar card), ಅದರಲ್ಲಿ ಕೂಡಾ ನಂಬರ್ ಸಿಗಲಿದೆ. ಇದರ ಮೂಲಕ ವೈದ್ಯರು ನಿಮ್ಮ ಸಂಪೂರ್ಣ ಆರೋಗ್ಯ ದಾಖಲೆಯನ್ನು ತಿಳಿಯುವುದು ಸಾಧ್ಯವಾಗುತ್ತದೆ. 

ಬಹಳ ಉಪಯುಕ್ತವಾಗಿದೆ ಈ ಯುನಿಕ್  ಹೆಲ್ತ್ ಕಾರ್ಡ್ :
ಈ ವಿಶಿಷ್ಟ ಕಾರ್ಡ್‌ನಿಂದ (Unique Health Card), ಯಾರಿಗೆ ಎಲ್ಲಿ ಚಿಕಿತ್ಸೆ ನೀಡಲಾಗಿದೆ ಎಂಬ ಮಾಹಿತಿ ತಿಳಿಯುತ್ತದೆ. ಅಲ್ಲದೆ, ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಈ ವಿಶಿಷ್ಟ ಆರೋಗ್ಯ ಕಾರ್ಡ್‌ನಲ್ಲಿ (Health card) ದಾಖಲಿಸಲಾಗುತ್ತದೆ. ಈ ಕಾರಣದಿಂದಾಗಿ, ರೋಗಿಯು ತನ್ನೊಂದಿಗೆ ಎಲ್ಲೆಡೆ ಫೈಲ್ ಅನ್ನು ಒಯ್ಯಬೇಕಾಗಿಲ್ಲ. ವೈದ್ಯರು ಅಥವಾ ಆಸ್ಪತ್ರೆಯು ರೋಗಿಯ ಯುನಿಕ್ ಆರೋಗ್ಯ ID ಯನ್ನು ನೋಡುವ ಮೂಲಕ ಆತನ ಸ್ಥಿತಿಯನ್ನು ತಿಳಿಯಲು ಸಾಧ್ಯವಾಗುತ್ತದೆ ಮತ್ತು ನಂತರ ಇದರ ಆಧಾರದ ಮೇಲೆ ಹೆಚ್ಚಿನ ಚಿಕಿತ್ಸೆಯನ್ನು ಪ್ರಾರಂಭಿಸಬಹುದು. ಅಲ್ಲದೆ, ಈ ಕಾರ್ಡ್‌ನೊಂದಿಗೆ, ವ್ಯಕ್ತಿಯು ತನಗೆ ಲಭ್ಯವಿರುವ ಸರ್ಕಾರಿ ಯೋಜನೆಗಳ ಬಗ್ಗೆಯೂ ತಿಳಿದುಕೊಳ್ಳುತ್ತಾನೆ. 

ಇದನ್ನೂ ಓದಿ :  Petrol-Diesel Price : ಪ್ರಮುಖ ನಗರಗಳಲ್ಲಿಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ ನೋಡಿ…

ಆರೋಗ್ಯ ID ಯ ಅಡಿಯಲ್ಲಿ ದಾಖಲು :  
ಇದರಲ್ಲಿ, ವ್ಯಕ್ತಿಯ ಐಡಿಯನ್ನು ರಚಿಸಲಾಗುತ್ತದೆ. ವ್ಯಕ್ತಿಯ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು (Aadhaar) ತೆಗೆದುಕೊಳ್ಳಲಾಗುತ್ತದೆ. ಈ ಎರಡು ದಾಖಲೆಗಳ ಸಹಾಯದಿಂದ, ಒಂದು ಯುನಿಕ್ ಆರೋಗ್ಯ ಕಾರ್ಡ್ ಅನ್ನು ರಚಿಸಲಾಗುತ್ತದೆ. ಇದಕ್ಕಾಗಿ, ಸರ್ಕಾರವು ಆರೋಗ್ಯ ಪ್ರಾಧಿಕಾರವನ್ನು ರಚಿಸುತ್ತದೆ. ಅದು ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತದೆ. ಆರೋಗ್ಯ ಐಡಿ (health ID) ಮಾಡಬೇಕಾದ ವ್ಯಕ್ತಿಯ ಆರೋಗ್ಯ ದಾಖಲೆಗಳನ್ನು ಸಂಗ್ರಹಿಸಲು ಆರೋಗ್ಯ ಪ್ರಾಧಿಕಾರದಿಂದ ಅನುಮತಿ ನೀಡಲಾಗುವುದು. ಇದರ ಆಧಾರದ ಮೇಲೆ ಮುಂದಿನ ಕೆಲಸವನ್ನು ಕೈಗೊಳ್ಳಲಾಗುವುದು. ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ಅಥವಾ ರಾಷ್ಟ್ರೀಯ ಆರೋಗ್ಯ ಮೂಲಸೌಕರ್ಯ ನೋಂದಾವಣೆಯೊಂದಿಗೆ ಸಂಯೋಜಿತವಾಗಿರುವ ಹೆಲ್ತ್ ಕೇರ್ ಪ್ರೊವೈಡರ್ (Health care provider) ವ್ಯಕ್ತಿಯ ಆರೋಗ್ಯ ID ಯನ್ನು ರಚಿಸಬಹುದು. Https://healthid.ndhm.gov.in/register ನಲ್ಲಿ ಎಲ್ಲಾ ದಾಖಲೆಗಳನ್ನು ನೋಂದಾಯಿಸುವ ಮೂಲಕ ಆರೋಗ್ಯ ID ಯನ್ನು  ರಚಿಸಬಹುದು. 

ಇದನ್ನೂ ಓದಿ :  SBI Big Initiative: PensionSeva ವೆಬ್ ಸೈಟ್ ಆರಂಭ, ಒಂದೇ ಕ್ಲಿಕ್ಕ ನಲ್ಲಿ ಪಿಂಚಣಿದಾರರಿಗೆ ಸಿಗಲಿವೆ ಹಲವು ಸೇವೆಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News