Atal Pension Yojana: ವಿವಾಹಿತರಿಗೆ ಭಾರೀ ಲಾಭವಾಗಲಿದೆ ಈ ಸರ್ಕಾರಿ ಯೋಜನೆ , ಪ್ರತಿ ತಿಂಗಳು ಸಿಗಲಿದೆ 10,000 ಪಿಂಚಣಿ

ಅಟಲ್ ಪಿಂಚಣಿ ಯೋಜನೆ  ಒಂದು ಸರ್ಕಾರಿ ಯೋಜನೆಯಾಗಿದ್ದು, ಇದರಲ್ಲಿಮಾಡುವ ಹೂಡಿಕೆಯು ನಿಮಗೆ ರಷ್ಟು ವಯಸ್ಸು ಎನ್ನುವುದನ್ನು  ಅವಲಂಬಿಸಿರುತ್ತದೆ. ಈ ಯೋಜನೆಯಡಿ, ಕನಿಷ್ಟ 1,000, 2000, 3000, 4000 ಮತ್ತು ಗರಿಷ್ಠ 5,000 ಮಾಸಿಕ ಪಿಂಚಣಿ ಪಡೆಯಬಹುದು. 

Written by - Ranjitha R K | Last Updated : Sep 13, 2021, 03:10 PM IST
  • 18 ರಿಂದ 40 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು
  • ಇದರಲ್ಲಿ ಮಾಡುವ ಹೂಡಿಕೆಯು ನಿಮಗೆ ಎಷ್ಟು ವಯಸ್ಸು ಎನ್ನುವುದನ್ನು ಅವಲಂಬಿಸಿರುತ್ತದೆ
  • 39 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸಂಗಾತಿಗಳು ಈ ಯೋಜನೆಯಲ್ಲಿ ಪ್ರತ್ಯೇಕವಾಗಿ ಹೂಡಿಕೆ ಮಾಡಬಹುದು.
Atal Pension Yojana: ವಿವಾಹಿತರಿಗೆ ಭಾರೀ ಲಾಭವಾಗಲಿದೆ ಈ ಸರ್ಕಾರಿ ಯೋಜನೆ , ಪ್ರತಿ ತಿಂಗಳು ಸಿಗಲಿದೆ 10,000 ಪಿಂಚಣಿ  title=
18 ರಿಂದ 40 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು (file photo)

ನವದೆಹಲಿ : ನಿಮ್ಮ ನಿವೃತ್ತಿ ಜೀವನ ಯಾವುದೇ ಚಿಂತೆ ಇಲ್ಲದೆ ಕಳೆಯಬೇಕಾದರೆ,  ಸೂಕ್ತ ಸಮಯದಲಿ ಹೂಡಿಕೆ ಮಾಡಿಕೊಳ್ಳುವುದು ಅಗತ್ಯ. ಸುರಕ್ಷಿತ ಸ್ಥಳದಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ಸರ್ಕಾರದ ಅಟಲ್ ಪಿಂಚಣಿ ಯೋಜನೆಯಲ್ಲಿ (APY) ಹಣವನ್ನು ಹೂಡಿಕೆ ಮಾಡಬಹುದು. ಈ ಯೋಜನೆಯಡಿ, ಪತಿ ಮತ್ತು ಪತ್ನಿ ಪ್ರತ್ಯೇಕ ಖಾತೆಗಳನ್ನು ತೆರೆಯುವ ಮೂಲಕ ಪ್ರತಿ ತಿಂಗಳು 10,000 ರೂ. ಪಿಂಚಣಿ ಪಡೆಯಬಹುದು. 

ಯಾರು ಹೂಡಿಕೆ ಮಾಡಬಹುದು?
ಅಟಲ್ ಪಿಂಚಣಿ ಯೋಜನೆಯನ್ನು (Atal pension yojana) 2015 ರಲ್ಲಿ ಆರಂಭಿಸಲಾಯಿತು. ಆ ಸಮಯದಲ್ಲಿ ಇದನ್ನು ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಜನರಿಗಾಗಿ ಆರಂಭಿಸಲಾಯಿತು.  ಆದರೆ ಈಗ 18 ರಿಂದ 40 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಪಿಂಚಣಿಯ (Pension) ಲಾಭವನ್ನು ಪಡೆಯಬಹುದು. ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನಲ್ಲಿ ಖಾತೆ ಹೊಂದಿರುವವರು ಇದರಲ್ಲಿ ಸುಲಭವಾಗಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ, ಠೇವಣಿದಾರರು 60 ವರ್ಷಗಳ ನಂತರ ಪಿಂಚಣಿ ಪಡೆಯಲು ಪ್ರಾರಂಭಿಸುತ್ತಾರೆ.

ಇದನ್ನೂ ಓದಿ : ಇನ್ನು ಆಧಾರ್ ಕಾರ್ಡ್ ನಂತೆಯೇ ಪ್ರತಿಯೊಬ್ಬರಿಗೂ ಸಿಗಲಿದೆ ಹೆಲ್ತ್ ಕಾರ್ಡ್, ಯಾಕೆಬೇಕು ಈ ಕಾರ್ಡ್

ಅಟಲ್ ಪಿಂಚಣಿ ಯೋಜನೆ ಎಂದರೇನು? :
ಅಟಲ್ ಪಿಂಚಣಿ ಯೋಜನೆ (APY) ಒಂದು ಸರ್ಕಾರಿ ಯೋಜನೆಯಾಗಿದ್ದು, ಇದರಲ್ಲಿ ಮಾಡುವ ಹೂಡಿಕೆಯು ನಿಮಗೆ ಎಷ್ಟು ವಯಸ್ಸು ಎನ್ನುವುದನ್ನು  ಅವಲಂಬಿಸಿರುತ್ತದೆ. ಈ ಯೋಜನೆಯಡಿ, ಕನಿಷ್ಟ 1,000, 2000, 3000, 4000 ಮತ್ತು ಗರಿಷ್ಠ 5,000 ಮಾಸಿಕ ಪಿಂಚಣಿ ಪಡೆಯಬಹುದು. ಇದು ಸುರಕ್ಷಿತ ಹೂಡಿಕೆಯಾಗಿದ್ದು ಇದರಲ್ಲಿ ನೋಂದಾಯಿಸಬೇಕಾದರೆ ಉಳಿತಾಯ ಖಾತೆ, ಆಧಾರ್ ಸಂಖ್ಯೆ (Aadhaar card)  ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು.

ಈ ಯೋಜನೆಯ ಲಾಭಗಳೇನು ? : 
18 ರಿಂದ 40 ವರ್ಷ ವಯಸ್ಸಿನ ಜನರು ಅಟಲ್ ಪಿಂಚಣಿ ಯೋಜನೆಯಲ್ಲಿ ತಮ್ಮ ನಾಮನಿರ್ದೇಶನವನ್ನು ಮಾಡಬಹುದು. ಇದಕ್ಕಾಗಿ, ಅರ್ಜಿದಾರರು ಬ್ಯಾಂಕ್ (Bank) ಅಥವಾ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು. ನೀವು ಕೇವಲ ಒಂದು ಅಟಲ್ ಪಿಂಚಣಿ ಖಾತೆಯನ್ನು ಮಾತ್ರ ಕೂಡಾ ಹೊಂದಬಹುದು. ಈ ಯೋಜನೆಯಲ್ಲಿ ನೀವು ಎಷ್ಟು ಬೇಗನೆ ಹೂಡಿಕೆ ಮಾಡುತ್ತೀರೋ ಅಷ್ಟು ಲಾಭವನ್ನು ಪಡೆಯುವುದು ಸಾಧ್ಯವಾಗುತ್ತದೆ. 

ಇದನ್ನೂ ಓದಿ : Today Arecanut Price: ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಿದೆ ಪರಿಶೀಲಿಸಿ

10,000 ಪಿಂಚಣಿ ಪಡೆಯುವುದು ಹೇಗೆ ? :
39 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸಂಗಾತಿಗಳು ಈ ಯೋಜನೆಯಲ್ಲಿ ಪ್ರತ್ಯೇಕವಾಗಿ ಹೂಡಿಕೆ ಮಾಡಬಹುದು. ಇದರಿಂದ ಅವರು 60 ವರ್ಷ ವಯಸ್ಸಿನ ನಂತರ ಪ್ರತಿ ತಿಂಗಳು 10,000 ರೂ. ಜಂಟಿ ಪಿಂಚಣಿ (joine pension) ಪಡೆಯುತ್ತಾರೆ. 30 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಗಂಡ ಮತ್ತು ಹೆಂಡತಿ, ಅವರು ತಮ್ಮ APY ಖಾತೆಗಳಿಗೆ ತಿಂಗಳಿಗೆ 577 ರೂ. ಹೂಡಿಕೆ ಮಾಡಬೇಕಾಗುತ್ತದೆ. ಇನ್ನು ಗಂಡ ಮತ್ತು ಹೆಂಡತಿಯ ವಯಸ್ಸು 35 ವರ್ಷವಾಗಿದ್ದರೆ, ಅವರು ಪ್ರತಿ ತಿಂಗಳು 902 ರೂಗಳನ್ನು ತಮ್ಮ APY ಖಾತೆಗೆ ಜಮಾ ಮಾಡಬೇಕು. ಮಾಸಿಕ ಪಿಂಚಣಿಯ ಜೊತೆಗೆ, ಸಂಗಾತಿಗಳಲ್ಲಿ ಯಾರಾದರೂ ಸತ್ತರೆ, ಉಳಿದಿರುವ ಪಾಲುದಾರನಿಗೆ ಪ್ರತಿ ತಿಂಗಳು ಪೂರ್ಣ ಜೀವನ ಪಿಂಚಣಿ ಜೊತೆಗೆ 8.5 ಲಕ್ಷ ರೂ. ಸಿಗುತ್ತದೆ. 

ತೆರಿಗೆ ಲಾಭ : 
ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ (Investment) ಮಾಡುವ ಜನರು ಆದಾಯ ತೆರಿಗೆ ಕಾಯ್ದೆ 80 ಸಿ ಅಡಿಯಲ್ಲಿ 1.5 ಲಕ್ಷದವರೆಗೆ ತೆರಿಗೆ ಪ್ರಯೋಜನವನ್ನು ಪಡೆಯುತ್ತಾರೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಟ್ರಸ್ಟ್‌ನ (NPS trust) ವಾರ್ಷಿಕ ವರದಿಯ ಪ್ರಕಾರ, NPS ನ 4.2 ಕೋಟಿ ಚಂದಾದಾರರಲ್ಲಿ, 2020-21ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ, 2.8 ಕೋಟಿಗಿಂತ ಹೆಚ್ಚು ಅಂದರೆ 66% ಕ್ಕಿಂತ ಹೆಚ್ಚು ಜನರು APY ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News