Shikshak Parv 2021: ಶಿಕ್ಷಣ ಕ್ಷೇತ್ರದಲ್ಲಿ N-DEAR ಪ್ರಮುಖ ಪಾತ್ರ, PM Modi ಯಿಂದ ಹಲವು ಮಹತ್ವದ ಘೋಷಣೆಗಳು

PM Narendra Modi: ಇಂದು, ಪ್ರಧಾನಿ ನರೇಂದ್ರ ಮೋದಿ (PM Narendra Modi) 'ಶಿಕ್ಷಕ್ ಪರ್ವ 2021' ಅನ್ನು ಉದ್ಘಾಟಿಸಿದ್ದಾರೆ  ಮತ್ತು ದೇಶದ ಎಲ್ಲಾ ಶಿಕ್ಷಕರು ಮತ್ತು ಪೋಷಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

Written by - Nitin Tabib | Last Updated : Sep 7, 2021, 12:35 PM IST
  • ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶಿಕ್ಷಕ್ ಪರ್ವ 2021 ಅನ್ನು ಇಂದು ಅಂದರೆ ಸೆಪ್ಟೆಂಬರ್ 7 ರಂದು ಬೆಳಗ್ಗೆ 10.30 ಕ್ಕೆ ಉದ್ಘಾಟಿಸಿದ್ದಾರೆ.
  • ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ದೇಶದ ಎಲ್ಲಾ ಶಿಕ್ಷಕರು ಮತ್ತು ಪೋಷಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
  • ಕರೋನಾದ ಕಾರಣ, ಈ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾಗಿದೆ .
Shikshak Parv 2021: ಶಿಕ್ಷಣ ಕ್ಷೇತ್ರದಲ್ಲಿ N-DEAR ಪ್ರಮುಖ ಪಾತ್ರ, PM Modi ಯಿಂದ ಹಲವು ಮಹತ್ವದ ಘೋಷಣೆಗಳು title=
Shikshak Parv 2021 (Photo Courtesy - ANI)

Shikshak Parv 2021: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶಿಕ್ಷಕ್ ಪರ್ವ 2021 ಅನ್ನು ಇಂದು ಅಂದರೆ ಸೆಪ್ಟೆಂಬರ್ 7 ರಂದು ಬೆಳಗ್ಗೆ 10.30 ಕ್ಕೆ ಉದ್ಘಾಟಿಸಿದ್ದಾರೆ. ಈ ಸಂದರ್ಭದಲ್ಲಿ  ಪ್ರಧಾನಿ ಮೋದಿ ದೇಶದ ಎಲ್ಲಾ ಶಿಕ್ಷಕರು ಮತ್ತು ಪೋಷಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕರೋನಾದ ಕಾರಣ, ಈ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾಗಿದೆ. ಈ ಸಮಯದಲ್ಲಿ, ಪಿಎಂ ಮೋದಿ ಶಿಕ್ಷಣ ಕ್ಷೇತ್ರದಲ್ಲಿ ಕೆಲ  ಪ್ರಮುಖ ಬದಲಾವಣೆಗಳನ್ನು ಘೋಷಿಸಿದ್ದಾರೆ.

Shikshak Parv 2021ರ ಉದ್ಘಾಟನೆ
ಕಾರ್ಯಕ್ರಮದ ಆರಂಭದಲ್ಲಿ, ಪಿಎಂ ಮೋದಿ ಮೊದಲು ರಾಷ್ಟ್ರಪ್ರಶಸ್ತಿ ಪಡೆದ ಶಿಕ್ಷಕರನ್ನು ಗೌರವಿಸಿದರು ಮತ್ತು ಪ್ರಶಸ್ತಿ ಪಡೆದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕೊರೊನಾದ ಕಷ್ಟದ ಕಾಲದಲ್ಲಿ ಶಿಕ್ಷಕರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ, ದೇಶದ ಶಿಕ್ಷಣಕ್ಕಾಗಿ ಶಿಕ್ಷಕರು ನೀಡಿದ ಕೊಡುಗೆಯನ್ನು ಹೋಲಿಸಲಾಗದು, ಶ್ಲಾಘನೀಯ ಎಂದು ಪ್ರಧಾನಿ ಮೋದಿ (PM Narendra Modi) ಹೇಳಿದ್ದಾರೆ.

ಈ ವರ್ಷ ನಡೆಯಬೇಕಿರುವ 'ಶಿಕ್ಷಕರ ವರ್ಷ'ದ ಥೀಮ್ 'ಗುಣಮಟ್ಟ ಮತ್ತು ಸುಸ್ಥಿರ ಶಾಲೆಗಳು: ಭಾರತದ ಶಾಲೆಗಳಿಂದ ಕಲಿಕೆ'ಯಾಗಿದೆ. ಈ ಕಾರ್ಯಕ್ರಮವು ಎಲ್ಲಾ ಹಂತಗಳಲ್ಲಿ ಶಿಕ್ಷಣದ ನಿರಂತರತೆಯನ್ನು ಖಚಿತಪಡಿಸುವುದಲ್ಲದೆ, ದೇಶಾದ್ಯಂತದ ಶಾಲೆಗಳಲ್ಲಿ ಗುಣಮಟ್ಟ, ಅಂತರ್ಗತ ಅಭ್ಯಾಸಗಳು ಮತ್ತು ಸಮರ್ಥನೀಯತೆಯನ್ನು ಸುಧಾರಿಸಲು ನವೀನ ವಿಧಾನಗಳನ್ನು ಪ್ರೋತ್ಸಾಹಿಸುವುದಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಇಂದು, ಶಿಕ್ಷಕರ ಹಬ್ಬದ ಸಂದರ್ಭದಲ್ಲಿ, ಅನೇಕ ಯೋಜನೆಗಳನ್ನು ಪ್ರಾರಂಭಿಸಲಾಗುತ್ತಿದೆ. ಸಮಾಜವು ಒಟ್ಟಾಗಿ ಏನನ್ನಾದರೂ ಮಾಡಿದಾಗ, ಬಯಸಿದ ಫಲಿತಾಂಶಗಳನ್ನು ಖಂಡಿತವಾಗಿಯೂ ಪಡೆಯಲಾಗುತ್ತದೆ ಮತ್ತು ಕಳೆದ ಕೆಲವು ವರ್ಷಗಳಲ್ಲಿ ಸಾರ್ವಜನಿಕ ಭಾಗವಹಿಸುವಿಕೆ ಮತ್ತೆ ಭಾರತದ ರಾಷ್ಟ್ರೀಯ ಪಾತ್ರವಾಗುತ್ತಿರುವುದನ್ನು ನೀವು ನೋಡಿದ್ದೀರಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕಳೆದ 6-7 ವರ್ಷಗಳಲ್ಲಿ, ಸಾರ್ವಜನಿಕ ಭಾಗವಹಿಸುವಿಕೆಯ ಶಕ್ತಿಯಿಂದಾಗಿ, ಭಾರತದಲ್ಲಿ ಹಲವು ಮಹತ್ತರ ಕೆಲಸಗಳನ್ನು ಮಾಡಲಾಗಿದೆ, ಮತ್ತು ಅದನ್ನು ಯಾರೂ ಊಹಿಸಲು ಸಾಧ್ಯವಿಲ್ಲ  ಎಂದು ಪ್ರಧಾನಿ ಹೇಳಿದ್ದಾರೆ. 

ಇದನ್ನೂ ಓದಿ-RSS Chief: ಭಾರತದಲ್ಲಿ ವಾಸಿಸುವ ಹಿಂದೂ-ಮುಸ್ಲಿಮರ ಪೂರ್ವಜರು ಒಂದೇ

N-DEAR ಗೆ ಒತ್ತು ನೀಡಲಾಗುವುದು
ಈ ಸಂದರ್ಭದಲ್ಲಿ National Digital Educational Architecture ಅಂದರೆ ಎನ್-ಡಿಯರ್ (N-DEAR) ಕೂಡ ಶಿಕ್ಷಣದಲ್ಲಿನ ಅಸಮಾನತೆಯನ್ನು ಹೋಗಲಾಡಿಸುವಲ್ಲಿ ಮತ್ತು ಅದನ್ನು ಆಧುನಿಕವಾಗಿಸುವಲ್ಲಿ ದೊಡ್ಡ ಪಾತ್ರ ವಹಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಎನ್-ಡಿಯರ್ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳ ನಡುವೆ ಸೂಪರ್ ಕನೆಕ್ಟ್ ಆಗಿ ಕಾರ್ಯನಿರ್ವಹಿಸಲಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ-ಎಐಸಿಸಿ ಅಧ್ಯಕ್ಷರನ್ನಾಗಿ ರಾಹುಲ್ ಗಾಂಧಿ ನೇಮಿಸುವಂತೆ ಯೂತ್ ಕಾಂಗ್ರೆಸ್ ಅಂಗೀಕಾರ ನಿರ್ಣಯ

ಇದರ ಹೊರತಾಗಿ, Talking Books ಮತ್ತು Audio Books ಗಳಂತಹ ತಂತ್ರಜ್ಞಾನವನ್ನು ಶಿಕ್ಷಣದ ಒಂದು ಭಾಗವನ್ನಾಗಿ ಮಾಡಲಾಗಿದೆ. 'ನಿಷ್ಠಾ' (NISHTA) ತರಬೇತಿ ಕಾರ್ಯಕ್ರಮಗಳ ಮೂಲಕ ಶಿಕ್ಷಕರನ್ನು ಬದಲಾವಣೆಗೆ ಸಿದ್ಧಪಡಿಸಲು ಒತ್ತು ನೀಡಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ-NEET UG 2021 ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆ ದಿನಾಂಕ ಸೇರಿದಂತೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News