ನವದೆಹಲಿ: Big Announcement: ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಯ ನಡುವೆಹೆ ಮೋದಿ ಸರ್ಕಾರ ದೊಡ್ಡ ನಿರ್ಧಾರ ತೆಗೆದುಕೊಂಡಿದೆ. 9 ಕೋಟಿ ರೈತರ ಖಾತೆಯಲ್ಲಿ ಸರ್ಕಾರ 18 ಸಾವಿರ ಕೋಟಿ ರೂ. ಜಮೆ ಮಾಡಲಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಈ ಮಾಹಿತಿಯನ್ನು ನೀಡಿದ್ದಾರೆ. ಇದೇ ವೇಳೆ ರೈತರ ಜೊತೆಗೆ ಚರ್ಚೆ ನಡೆಯಲಿದೆ ಎಂಬ ಭರವಸೆ ವ್ಯಕ್ತಪಡಿಸಿರುವ ಅವರು, ಬಿಕ್ಕಟ್ಟು ಬಗೆಹರಿಯಲಿದೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ಶೀಘ್ರವೇ ಸರ್ಕಾರ ಜಾರಿಗೆ ತರಲಿದೆ ದೇಸಿ ಇ-ಕಾಮರ್ಸ್ ಪ್ಲಾಟ್ಫಾರ್ಮ್, Amazon ಹಾಗೂ Flipkartಗೆ ಭಾರಿ ಪೈಪೋಟಿ


ಮಾತುಕತೆಗೆ ಮುಂದಾಗಲಿದ್ದಾರೆ ಸ್ವತಃ PM Modi
ಬರುವ ಡಿಸೆಂಬರ್ 25 ರಂದು ಭಾರತ ಸರ್ಕಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸಲಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಈ ದಿನ ದೇಶದ ಸುಮಾರು 9 ಕೋಟಿ  ರೈತರ ಬ್ಯಾಂಕ್ ಖಾತೆಗೆ ಕೇವಲ ಎರಡು ಗಂಟೆಗಳಲ್ಲಿ ಸುಮಾರು 18 ಸಾವಿರ ಕೋಟಿ ವರ್ಗಾಯಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಈ ಯೋಜನೆಯ ಲಾಭಾರ್ಥಿಗಳಾಗಿರುವ 6 ರಾಜ್ಯಗಳ 6 ರೈತರ ಜೊತೆಗೆ ಪ್ರಧಾನಿ ನರೇಂದ್ರ ನರೇಂದ್ರ ಮೋದಿ ಸಂವಾದ ನಡೆಸಲಿದ್ದಾರೆ. ಇದಲ್ಲದೆ ಬ್ಲಾಕ್ ಮಟ್ಟದಲ್ಲಿಯೂ ಕೂಡ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಅವರು ಹೇಳಿದ್ದಾರೆ. ಈಗಾಗಲೇ ಸುಮಾರು 2 ಕೋಟಿ ರೈತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಮ್ಮ ಹೆಸರನ್ನು ನೊಂದಾಯಿಸಿದ್ದಾರೆ.


ಇದನ್ನು ಓದಿ- ಮೋದಿ ಸರ್ಕಾರ ತನ್ನ ಕ್ರೌರ್ಯದ ಮಿತಿಗಳನ್ನು ಮೀರಿದೆ-ರಾಹುಲ್ ಗಾಂಧಿ


ರೈತರ ಅನುಮಾನಗಳನ್ನು ನಿವಾರಿಸಲು ಸರ್ಕಾರ ಬದ್ಧವಾಗಿದೆ
ಈ ಸಂದರ್ಭದಲ್ಲಿ ಮಾತನಾಡಿರುವ ಕೃಷಿ ಸಚಿವರು ಕನಿಷ್ಠ ಬೆಂಬಲ ಬೆಲೆ (MSP)ಗೆ ಸಂಬಂಧಿಸಿದಂತೆ ರೈತರ ಮನಸ್ಸಿನಲ್ಲಿ ಹಲವಾರು ಆಮಾನಗಲಿದ್ದು, ಸರ್ಕಾರ ರೈತರ ಎಲ್ಲ ಅನುಮಾನಗಳನ್ನು ದೂರಗೊಳಿಸಲು ಸಿದ್ಧವಾಗಿದೆ ಎಂದಿದ್ದಾರೆ. ರೈತರ ಆಂದೋಲನದ ಕುರಿತು ಹೇಳಿಕೆ ನೀಡಿರುವ ಅವರು, ಕೇಂದ್ರದ ಮೋದಿ ನೇತೃತ್ವದ ಸರ್ಕಾರ ರೈತರ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಹೆಜ್ಜೆ ಇಡುತ್ತಿದ್ದು, ರೈತರು ಸರ್ಕಾರದ ಜೊತೆಗೆ ಚರ್ಚೆಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರ ತಂದಿರುವ ಪ್ರಸ್ತಾವನೆಗೆ ಸರ್ಕಾರ ಏನನ್ನು ಸೇರಿಸಬೇಕು ಹಾಗೂ ಏನನ್ನು ತೆಗೆದುಹಾಕಬೇಕು ಎಂಬುದನ್ನು ರೈತ ಸಂಘಟನೆಗಳು ತಿಳಿಸಬೇಕು ಎಂದಿದ್ದಾರೆ. ರೈತ ಸಂಘಟನೆಗಳು ನಿಗದಿಪಡಿಸುವ ದಿನಾಂಕ ಮತ್ತು ಸ್ಥಳದಲ್ಲಿ ತಾವು ಚರ್ಚೆಗೆ ಸಿದ್ಧರಾಗಿರುವುದಾಗಿ ಅವರು ಹೇಳಿದ್ದಾರೆ. ಸರ್ಕಾರ (Modi Government) ಜಾರಿಗೊಳಿಸಿರುವ ಕರಡನ್ನು ಅರ್ಥಮಾಡಿಕೊಂಡು ರೈತರು ಸರ್ಕಾರಕ್ಕೆ ಮಾಹಿತಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.


ಇದನ್ನು ಓದಿ- Subsidy On Sugar Export: ಕಬ್ಬು ಬೆಳೆಗಾರ ರೈತರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ Modi Government, ಇಲ್ಲಿದೆ ವಿವರ


ಚರ್ಚೆಯ ಮೂಲಕವೇ ಸಮಾಧಾನ ಸಿಗಲಿದೆ
ನಾವು ಪ್ರಾಮಾಣಿಕವಾಗಿಯೇ ಪರಿಹಾರದತ್ತ ಸಾಗಲಿದ್ದೇವೆ ಎಂದು ಕೃಷಿ ಸಚಿವರು ಹೇಳಿದ್ದಾರೆ. ಪ್ರತಿಭಟನೆ ಎಷ್ಟೇ ಹಳೆಯದಾದರೂ, ಚರ್ಚೆಯ ಮೂಲಕವೇ ಅದಕ್ಕೆ ಪರಿಹಾರ ಸಿಗಲಿದೆ. ಚರ್ಚೆಯಿಂದ ಸಕಾರಾತ್ಮಕ ಪರಿಹಾರಗಳು ಹೊರಬರುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರೈತರು ಪ್ರತಿಭಟನೆಗಿಳಿದಿರುವುದು ತಮಗೆ ಅಸಮಾಧಾನ ತಂದಿದೆ. ಆದರೆ, ಸುಧಾರಣೆಯ ಮಸೂದೆಗಳು ರೈತರ ಪರವಾಗಿವೆ ಎಂದು ಅವರು ಪುನರುಚ್ಛರಿಸಿದ್ದಾರೆ.


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.