ನವದೆಹಲಿ: Subsidy On Sugar Export - ಕಬ್ಬು ರೈತರಿಗೆ ಮೋದಿ ಸರ್ಕಾರ (Modi Government) ಇಂದು ದೊಡ್ಡ ಪರಿಹಾರ ನೀಡಿದೆ. ಸಂಪುಟ ಸಭೆಯ ನಂತರ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಈ ವರ್ಷ 6 ಮಿಲಿಯನ್ ಟನ್ ಸಕ್ಕರೆಯನ್ನು ರಫ್ತು ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ರಫ್ತು ಮೌಲ್ಯವು ನೇರವಾಗಿ ರೈತರ ಖಾತೆ ಸೇರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದರಿಂದ ಉದ್ಯಮದಲ್ಲಿ ಕೆಲಸ ಮಾಡುವ 5 ಕೋಟಿ ರೈತರು ಮತ್ತು ಕಾರ್ಮಿಕರಿಗೆ ಅನುಕೂಲವಾಗಲಿದೆ. ಈಗಾಗಲೇ ಘೋಷಿಸಿರುವ 5310 ಕೋಟಿ ಸಬ್ಸಿಡಿಯನ್ನು ಕೂಡ ಮುಂದಿನ ಒಂದು ವಾರದಲ್ಲಿ ರೈತರ ಖಾತೆಗೆ ಜಮೆ ಮಾಡಲಾಗುವುದು ಎಂದು ಜಾವಡೇಕರ್ ತಿಳಿಸಿದ್ದಾರೆ.
2020-21ರ ಮಾರುಕಟ್ಟೆ ವರ್ಷದಲ್ಲಿ (ಅಕ್ಟೋಬರ್-ಸೆಪ್ಟೆಂಬರ್) 6 ಮಿಲಿಯನ್ ಟನ್ ಸಕ್ಕರೆಯನ್ನು ರಫ್ತು ಮಾಡಲು ಆಹಾರ ಸಚಿವಾಲಯ 3,600 ಕೋಟಿ ರೂ.ಗಳ ಪ್ರಸ್ತಾಪ ಮಂಡಿಸಿತ್ತು. ಇದನ್ನು ಇಂದು ಸಚಿವ ಸಂಪುಟ ಅನುಮೋದಿಸಿದೆ.
ಹಿಂದಿನ 2019-20ರ ಮಾರುಕಟ್ಟೆ ವರ್ಷದಲ್ಲಿ ಸರ್ಕಾರವು ಪ್ರತಿ ಟನ್‌ಗೆ 10,448 ರೂ. ಒಟ್ಟು ಸಬ್ಸಿಡಿಯನ್ನು ನೀಡಿತ್ತು.. ಇದರಿಂದ ಸರ್ಕಾರದ ಬೊಕ್ಕಸಕ್ಕೆ 6,268 ಕೋಟಿ ರೂ. ಭಾರ ಬಿದ್ದಿತ್ತು.
ಇದನ್ನು ಓದಿ- PM Kisan: ಮುಂದಿನ ತಿಂಗಳು ಯಾವ ರೈತರಿಗೆ ಸಿಗಲಿದೆ 2000ರೂ., ನಿಮ್ಮ ಹೆಸರನ್ನು ಹೀಗೆ ಪರಿಶೀಲಿಸಿ
ಸಚಿವ ಸಂಪುಟ ಸಭೆಗಳ ನಿರ್ಣಯದ ಬಳಿಕ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, "ಕಬ್ಬು ಬೆಳೆಗಾರ ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮೋದಿ ಸರ್ಕಾರ ಕೈಗೊಂಡ ಈ ನಿರ್ಣಯ ತುಂಬಾ ಮಹತ್ವದ ನಿರ್ಣಯವಾಗಿದೆ. ಕಬ್ಬು ಬೆಳೆಗಾರ ರೈತರ ಲಾಭಕ್ಕಾಗಿ ಸಕ್ಕರೆ ರಫ್ತಿನ ಮೇಲೆ ನೀಡಲಾಗುವ ಸಬ್ಸಿಡಿಯನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಕಳುಹಿಸಲಾಗುವುದು. ಇದರ ಅಡಿ ದೇಶದ ಒಟ್ಟು 5 ಕೋಟಿ ರೈತರಿಗೆ ರೂ.3500 ಕೋಟಿ ರೂ. ಸಬ್ಸಿಡಿ ನೀಡಲಾಗುತ್ತಿದೆ.
ಇದನ್ನು ಓದಿ- ರೈತರಿಗೊಂದು ಮಾಹಿತಿ: ಸರ್ಕಾರದಿಂದ ಸಬ್ಸಿಡಿದರದಲ್ಲಿ ಕೃಷಿ ಉಪಕರಣ ಖರೀದಿಸಲು ಹೀಗೆ ಮಾಡಿ
ರಾಷ್ಟ್ರರಾಜಧಾನಿ ದೆಹಲಿಯ ಗಡಿಭಾಗದಲ್ಲಿ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಹಿನ್ನೆಲೆ ಮೋದಿ ಸರ್ಕಾರ ಕೈಗೊಂಡ ಈ ನಿರ್ಣಯ ಭಾರಿ ಮಹತ್ವ ಪಡೆದುಕೊಂಡಿದೆ.