ಮೋದಿ ಸರ್ಕಾರ ತನ್ನ ಕ್ರೌರ್ಯದ ಮಿತಿಗಳನ್ನು ಮೀರಿದೆ-ರಾಹುಲ್ ಗಾಂಧಿ

ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಸರ್ಕಾರವು ಸ್ಪಂಧಿಸದಿರುವ ಹಿನ್ನಲೆಯಲ್ಲಿ ಬೇಸತ್ತು ಸಿಖ್ ಧರ್ಮ ಗುರು ಆತ್ಮಹತ್ಯೆಗೆ ಶರಣಾಗಿರುವ ಬೆನ್ನಲ್ಲೇ ರಾಹುಲ್ ಗಾಂಧಿ ಮೋದಿ ಸರ್ಕಾರವು ತನ್ನ ಕ್ರೌರ್ಯದ ಎಲ್ಲ ಮೀತಿಗಳನ್ನು ಮೀರಿದೆ ಎಂದು ಟ್ವೀಟ್ ಮಾಡಿದ್ದಾರೆ.

Last Updated : Dec 16, 2020, 11:06 PM IST
ಮೋದಿ ಸರ್ಕಾರ ತನ್ನ ಕ್ರೌರ್ಯದ ಮಿತಿಗಳನ್ನು ಮೀರಿದೆ-ರಾಹುಲ್ ಗಾಂಧಿ title=
file photo

ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಸರ್ಕಾರವು ಸ್ಪಂಧಿಸದಿರುವ ಹಿನ್ನಲೆಯಲ್ಲಿ ಬೇಸತ್ತು ಸಿಖ್ ಧರ್ಮ ಗುರು ಆತ್ಮಹತ್ಯೆಗೆ ಶರಣಾಗಿರುವ ಬೆನ್ನಲ್ಲೇ ರಾಹುಲ್ ಗಾಂಧಿ ಮೋದಿ ಸರ್ಕಾರವು ತನ್ನ ಕ್ರೌರ್ಯದ ಎಲ್ಲ ಮೀತಿಗಳನ್ನು ಮೀರಿದೆ ಎಂದು ಟ್ವೀಟ್ ಮಾಡಿದ್ದಾರೆ.

ದೆಹಲಿ ಗಡಿಯಲ್ಲಿ ಸಿಖ್ ಧರ್ಮ ಗುರು ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಹಿರಿಯ ಸಂಸದ ರಾಹುಲ್ ಗಾಂಧಿ ಅವರು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಪ್ರತಿಭಟಿಸಿದ ರೈತರ ಬೇಡಿಕೆಯನ್ನು ಅಂಗೀಕರಿಸದ ಕಾರಣ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ನರೇಂದ್ರ ಮೋದಿ ಸರ್ಕಾರ ಕ್ರೌರ್ಯದ ಎಲ್ಲ ಮಿತಿಗಳನ್ನು ದಾಟಿದೆ ಮತ್ತು ಅದು ತಕ್ಷಣ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ರೈತರ ಸಮಸ್ಯೆಗೆ ಕೇಂದ್ರ ಸ್ಪಂದಿಸದಿರುವುದಕ್ಕೆ ಬೇಸತ್ತು ಸಿಖ್ ಧರ್ಮಗುರು ಆತ್ಮಹತ್ಯೆ

'ಕರ್ನಲ್ ಮೂಲದ ಸಂತ ಬಾಬಾ ರಾಮ್ ಸಿಂಗ್ ಅವರು ಕುಂಡ್ಲಿ ಗಡಿಯಲ್ಲಿ ರೈತರ ಸ್ಥಿತಿಯ ಮೇಲೆ ಆತ್ಮಹತ್ಯೆ ಮಾಡಿಕೊಂಡರು. ದುಃಖದ ಈ ಕ್ಷಣದಲ್ಲಿ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ...ಅನೇಕ ರೈತರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ.ಮೋದಿ ಸರ್ಕಾರ ಕ್ರೌರ್ಯದ ಎಲ್ಲ ಮಿತಿಗಳನ್ನು ದಾಟಿದೆ. ರೈತ ವಿರೋಧಿ ಕಾನೂನುಗಳನ್ನು ಹಿಂತೆಗೆದುಕೊಳ್ಳಿ ”ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

Trending News