Big News: LPG ಸಿಲಿಂಡರಗೆ ಸಿಗುವ ಸಬ್ಸಿಡಿ ಸ್ಥಗಿತಗೊಳ್ಳಲಿದೇಯಾ? ಇಲ್ಲಿದೆ ಸರ್ಕಾರದ ಹೊಸ ಪ್ಲಾನ್
LPG Subsidy News - BPCL ನಲ್ಲಿ ಸರ್ಕಾರವು ತನ್ನ ಸಂಪೂರ್ಣ ಪಾಲನ್ನು (ಅಂದರೆ ಶೇ.52.97) ಮಾರಾಟ ಮಾಡುತ್ತಿದೆ. ಆದರೆ ಗ್ರಾಹಕರು ಮತ್ತು ಹೂಡಿಕೆದಾರರಲ್ಲಿ ಬಿಪಿಸಿಎಲ್ ಖಾಸಗೀಕರಣದ ನಂತರ ಸಬ್ಸಿಡಿ ಅಡುಗೆ ಅನಿಲ ಯೋಜನೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಕುರಿತು ಆತಂಕ ಏರ್ಪಟ್ಟಿದೆ.
ನವದೆಹಲಿ: LPG Subsidy News - ಅಡುಗೆ ಅನಿಲ ಸಿಲಿಂಡರ್ ಗ್ರಾಹಕರಿಗೆ ಒಳ್ಳೆಯ ಸುದ್ದಿಯೊಂದು ಪ್ರಕಟವಾಗಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL), ಮರುಹೂಡಿಕೆ ಪ್ರಕ್ರಿಯೆಯಲ್ಲಿ, ತನ್ನ ಎಲ್ಪಿಜಿ ಗ್ರಾಹಕರಿಗೆ ಸಬ್ಸಿಡಿ ನೀಡಲು ಪ್ರತ್ಯೇಕ ವೇದಿಕೆಯನ್ನು ಸೃಷ್ಟಿಸಿದೆ. ಈ ವೇದಿಕೆಯ ಮೂಲಕ, ಸಬ್ಸಿಡಿ ಮೊತ್ತವನ್ನು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು ಎನ್ನಲಾಗಿದೆ.
ಸರ್ಕಾರ ಹೇಳಿದ್ದೇನು? (LPG Latest News)
BPCLನ ಮಾರಾಟ ಪ್ರಕ್ರಿಯೆ ಪೂರ್ಣಗೊಂಡ ನಂತರವೂ ಕೂಡ ಗ್ರಾಹಕರಿಗೆ ಸಬ್ಸಿಡಿ ಪಡೆಯುವಲ್ಲಿ ಯಾವುದೇ ಸಮಸ್ಯೆ ಎದುರಿಸಬಾರದೆಂದು ಹೊಸ ಪ್ಲಾಟ್ಫಾರಂ ರಚಿಸಲಾಗಿದ್ದು, ಸ್ಕೀಮ್ ನಿರಂತರವಾಗಿ ಚಾಲನೆಯಲ್ಲಿರಬೇಕು. ಇದರ ಅಡಿಯಲ್ಲಿ, ಹೊಸ ವೇದಿಕೆಯ ಮೂಲಕ, BPCL ನ ಖಾಸಗೀಕರಣದ ನಂತರವೂ ಸರ್ಕಾರವು LPG ಗ್ರಾಹಕರಿಗೆ ಸಬ್ಸಿಡಿಯನ್ನು ವರ್ಗಾಯಿಸುವುದನ್ನು ಮುಂದುವರಿಸಲು ಸಾಧ್ಯವಾಗಲಿದೆ.
BPCL ಖಾಸಗೀಕರಣ (BPCL Privatisation)
BPCLನಲ್ಲಿ ಸರ್ಕಾರವು ತನ್ನ ಸಂಪೂರ್ಣ ಪಾಲನ್ನು (ಶೇ.52.97) ಮಾರಾಟ ಮಾಡುತ್ತಿದೆ. ಆದರೆ ಗ್ರಾಹಕರು ಮತ್ತು ಹೂಡಿಕೆದಾರರಲ್ಲಿ ಬಿಪಿಸಿಎಲ್ ಖಾಸಗೀಕರಣದ ನಂತರ ಸಬ್ಸಿಡಿ ಅಡುಗೆ ಅನಿಲ ಯೋಜನೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಆತಂಕವಿತ್ತು. ಒಂದು ವೇಳೆ ಕಂಪನಿಗಳು ಸಬ್ಸಿಡಿ ನೀಡಿದರೆ ಮತ್ತು ಖುದ್ದಾಗಿ ಭರಿಸಿದರೆ, BPCL ಅನಿಲ ಸಿಲಿಂಡ ದರವನ್ನು ಪರಿಷ್ಕರಿಸಬೇಕಾಗುತ್ತದೆ.
ಇದನ್ನೂ ಓದಿ-Ujjwala Yojana : ಈ ದಾಖಲೆಗಳು ನಿಮ್ಮ ಬಳಿ ಇದ್ದರೆ ನೀವು ಪಡೆಯಬಹುದು ಉಜ್ವಲ ಯೋಜನೆಯ 'ಉಚಿತ LPG ಸಿಲಿಂಡರ್'
ಹೊಸ ವೇದಿಕೆಯಲ್ಲೆನಿದೆ?
ಹೊಸ ವೇದಿಕೆಯ ಸಬ್ಸಿಡಿ ನೀಡುವ ಎಲ್ಪಿಜಿ ಕಾರ್ಯಾಚರಣೆಗಳನ್ನು ಪ್ರತ್ಯೇಕವಾಗಿ ನಡೆಸಲು ಸಹಾಯ ಮಾಡಲಿದೆ. ಈ ಹೊಸ ವೇದಿಕೆಯು ಫಲಾನುಭವಿಗಳನ್ನು ಗುರುತಿಸಲು ಮತ್ತು ಸಹಾಯಧನವನ್ನು ವರ್ಗಾಯಿಸಲು ಸಹಾಯ ಮಾಡುತ್ತದೆ. ಖಾಸಗಿ ತೈಲ ಕಂಪನಿಗಳಾದ ರಿಲಯನ್ಸ್, ನೈರಾ ಎನರ್ಜಿಗಳಿಗೆ ಎಲ್‌ಪಿಜಿಗೆ ಸರ್ಕಾರ ಯಾವುದೇ ಸಬ್ಸಿಡಿ ಬೆಂಬಲವನ್ನು ನೀಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಈ ಕಂಪನಿಗಳು ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಮಾರಾಟ ಮಾಡಿದರೆ, ಈ ಮಾರಾಟವು ಮಾರುಕಟ್ಟೆ ಬೆಲೆಯಲ್ಲಿ ಮಾತ್ರ ಲಭಿಸಲಿವೆ.
ಇದನ್ನೂ ಓದಿ-LPG Gas Cylinder : Address Proof ಇಲ್ಲದಿದ್ದರೂ ಸಿಗಲಿದೆ ಅಡುಗೆ ಅನಿಲ , ಈ ರೀತಿ ಅರ್ಜಿ ಸಲ್ಲಿಸಿ
BPCL ಮಾರಾಟ ಪ್ರಕ್ರಿಯೆ (BPCL Latest News)
ಪ್ರಸಕ್ತ ಹಣಕಾಸು ವರ್ಷ ಅಂದರೆ, 2021-22 ಕ್ಕೆ ಸರ್ಕಾರವು ಪೆಟ್ರೋಲಿಯಂ ಸಬ್ಸಿಡಿ ರೂಪದಲ್ಲಿ 12,995 ಕೋಟಿ ರೂ. ನೀಡಿದೆ. ಇದಕ್ಕೂ ಮೊದಲಿನ ಹಣಕಾಸು ವರ್ಷದಲ್ಲಿ ಈ ಹಂಚಿಕೆಯು 40,000 ಕೋಟಿ ರೂ.ರಷ್ಟಿತ್ತು. ಬಿಪಿಸಿಎಲ್‌ಗೆ ಸಂಬಂಧಿಸಿದಂತೆ, ಸಂಭಾವ್ಯ ಹೂಡಿಕೆದಾರರಿಂದ ಸರ್ಕಾರ ಶೀಘ್ರವೇ ಬಿಡ್‌ಗಳನ್ನು ಅಹ್ವಾನಿಸಲಿದೆ. ವೇದಾಂತ ಸಮೂಹದ ಹೊರತಾಗಿ, ಎರಡು ಅಮೆರಿಕನ್ ಫಂಡ್ ಕಂಪನಿಗಳು - ಅಪೊಲೊ ಗ್ಲೋಬಲ್ ಮತ್ತು I ಸ್ಕ್ವೇರ್ ಕ್ಯಾಪಿಟಲ್ BPCLಗಾಗಿ ತಮ್ಮ ಆಸಕ್ತಿ ಪತ್ರಗಳನ್ನು ಸಲ್ಲಿಸಲಿವೆ.
ಇದನ್ನೂ ಓದಿ-LPG Cylinderನಲ್ಲಿ ಎಷ್ಟು ಗ್ಯಾಸ್ ಬಾಕಿ ಉಳಿದಿದೆ ತಿಳಿದುಕೊಳ್ಳಲು ಇಲ್ಲಿದೆ ಸುಲಭ ಉಪಾಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.