ನವದೆಹಲಿ: How To Check Remaining Gas In LPG Cylinder - ಒಂದು ವೇಳೆ ನಿಮ್ಮ ಮನೆಗೂ ಕೂಡ ಅತಿಥಿಗಳು ಬಂದಿದ್ದು, ನಿಮ್ಮ ಮನೆಯಲ್ಲಿರುವ ಅಡುಗೆ ಅನಿಲದ ಸಿಲಿಂಡರ್ (LPG Cylinder) ಖಾಲಿಯಾದರೆ ನೀವೇನು ಮಾಡುವಿರಿ? ಇಂತಹ ಒಂದು ಪ್ರಶ್ನೆ ಮನಸ್ಸಿ ನಲ್ಲಿ ಬಂದರೆ, ತರೆಹೆವಾರಿ ಉತ್ತರಗಳು ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ಹೀಗಾಗಿ ಇಂದು ನಾವು ನಿಮಗೆ ಉಪಾಯವೊಂದನ್ನು ಹೇಳುತ್ತಿದ್ದು, ಈ ಉಪಾಯವನ್ನು ಬಳಸಿ ನೀವು ಸಮಯ ಇರುವಾಗಲೇ ನಿಮ್ಮ ಅಡುಗೆ ಅನಿಲ ಸಿಲಿಂಡರ್ ನಲ್ಲಿ ಬಾಕಿ ಉಳಿದಿರುವ ಅನಿಲದ ಕುರಿತು ಮುಂಚಿತವಾಗಿಯೇ ತಿಳಿದುಕೊಳ್ಳಬಹುದು.
ಇದನ್ನೂ ಓದಿ-Diesel Doorstep Delivery : ವಾಹನ ಸವಾರರಿಗೆ ಸಿಹಿ ಸುದ್ದಿ : ಡೀಸೆಲ್ 'ಹೋಂ ಡೆಲಿವರಿ' ಆರಂಭಿಸಿದ BPCL
ಆದರೆ, ಇದರಿಂದ ಕೇವಲ ನೀವು ಅಂದಾಜಿಸಬಹುದು
ಕೆಲವರು ತಮ್ಮ ಮನೆಯಲ್ಲಿರುವ ಸಿಲಿಂಡರ್ ಅನ್ನು ಎತ್ತುವ ಮೂಲಕ ಮತ್ತು ಅದರ ಭಾರದ ಆಧಾರದ ಮೇಲೆ ಸಿಲಿಂಡರ್ ನಲ್ಲಿರುವ ಗ್ಯಾಸ್ (Gas In Cylinder) ಕುರಿತು ಅಂದಾಜಿಸುತ್ತಾರೆ. ಕೆಲವರು ಒಲೆಯ ಮೂಲಕ ಬರುವ ಜ್ವಾಲೆಯ ನೀಲಿ ಅಥವಾ ಹಳದಿ ಬಣ್ಣವನ್ನು ನೋಡಿ ಸಿಲಿಂಡರ್ ನಲ್ಲಿರುವ ಗ್ಯಾಸ್ ಬಗ್ಗೆ ಅಂದಾಜಿಸುತ್ತಾರೆ. ಆದರೆ, ಇದು ಕೇವಲ ಅಂದಾಜು ಇರುತ್ತದೆ ಮತ್ತು ನಿಖರವಾದ ಮಾಹಿತಿಯಾಗಿರುವುದಿಲ್ಲ. ಏಕೆಂದರೆ, ಸ್ಟೋವ್ ಬರ್ನರ್ನಲ್ಲಿ ತಾಂತ್ರಿಕ ತೊಂದರೆ ಇದ್ದರೂ ಕೂಡ ಬೆಂಕಿಯ ಬಣ್ಣ ಬದಲಾಗುತ್ತದೆ. ಆದರೆ, ಇಂದು ನಾವು ನಿಮಗೆ ಹೇಳಲು ಹೊರಟಿರುವ ವಿಧಾನದಿಂದ ನೀವು ನಿಖರ ಮಾಹಿತಿಯನ್ನು ಪಡೆಯಬಹುದು.
ಇದನ್ನೂ ಓದಿ-EPFO: ಈ ಮಹತ್ವದ ಕೆಲಸವನ್ನು ಇಂದೇ ಮಾಡಿ, ಇಲ್ಲವೇ ಮುಂದಿನ ತಿಂಗಳಿನಿಂದ PF ಹಣ ಖಾತೆಗೆ ಬರುವುದಿಲ್ಲ!
ಏನಿದು ನಿಖರ ಮತ್ತು ಸುಲಭ ವಿಧಾನ
ಒದ್ದೆಯಾಗಿರುವ ಒಂದು ಬಟ್ಟೆಯ (Wet Cloth) ಸಹಾಯದಿಂದ ನೀವು ನಿಮ್ಮ ಸಿಲಿಂಡರ್ ನಲ್ಲಿ ಗ್ಯಾಸ್ ಎಷ್ಟು ಬಾಕಿ ಉಳಿದಿದೆ ಎಂಬುದನ್ನು ತಿಳಿಯಬಹುದು. ಇದಕ್ಕಾಗಿ ಮೊದಲು ನೀವು ಒದ್ದೆಯಾಗಿರುವ ಬಟ್ಟೆಯನ್ನು ಗ್ಯಾಸ್ ಸಿಲಿಂಡರ್ ಗೆ ಸುತ್ತಿ, ಒಂದು ನಿಮಿಷದವರೆಗೆ ಕಾಯಬೇಕು. ಸಮಯ ಪೂರ್ಣಗೊಂಡ ಬಳಿಕ ಬಟ್ಟೆಯನ್ನು ತೆಗೆಯಿರಿ ಹಾಗೂ ಸ್ವಲ್ಪ ಸಮಯ ಸಿಲಿಂಡರ್ ನಲ್ಲಾಗುವ ಬದಲಾವಣೆಗಳನ್ನು ಗಮನಿಸಿ. ಈಗ ಸಿಲಿಂಡರ್ ನ ಸ್ವಲ್ಪ ಭಾಗ ಒಣಗಿದ್ದು, ಸ್ವಲ್ಪ ಭಾಗ ಇನ್ನೂ ಒಣಗದೇ ಇರುವುದು ನಿಮ್ಮ ಗಮನಕ್ಕೆ ಬರಲಿದೆ. ಏಕೆಂದರೆ ಖಾಲಿಯಾಗಿರುವ ಸಿಲಿಂಡರ್ ಭಾಗ ಬಿಸಿಯಾಗಿರುವ ಕಾರಣ ಇದು ಸಂಭವಿಸುತ್ತದೆ. ಈ ಭಾಗ ನೀರನ್ನು ಬೇಗ ಹೀರಿಕೊಳ್ಳುತ್ತದೆ. ಸಿಲಿಂಡರ್ ನಲ್ಲಿ ಗ್ಯಾಸ್ ಇರುವ ಭಾಗ ತಂಪಾಗಿರುವ ಕಾರಣ ಅಲ್ಲಿ ನೀರು ಹಾಗೆಯೇ ಇರುತ್ತದೆ ಅಥವಾ ಅಲ್ಲಿ ನೀರು ಆರಲು ಸ್ವಲ್ಪ ಸಮಯ ಬೇಕಾಗುತ್ತದೆ.
ಇದನ್ನೂ ಓದಿ-Retirement Age: ಸರ್ಕಾರವು ನಿವೃತ್ತಿ ವಯಸ್ಸನ್ನು ಹೆಚ್ಚಿಸಲಿದೆಯೇ, ಪ್ರಧಾನಿಗೆ ಸಲ್ಲಿಸಿದ ವರದಿಯಲ್ಲಿ ಏನಿದೆ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ