ಪಾಟ್ನಾ: ಭಾರೀ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭಾ ಚುನಾವಣೆಯ ಅಂತಿಮ ಫಲಿತಾಂಶಗಳು (Bihar election results 2020) ಹೊರಬಂದಿದೆ. ಎನ್‌ಡಿಎ 125 ಸ್ಥಾನಗಳೊಂದಿಗೆ ಸಂಪೂರ್ಣ ಬಹುಮತ ಗಳಿಸುವಲ್ಲಿ ಯಶಸ್ವಿಯಾದರೆ, ಗ್ರ್ಯಾಂಡ್ ಅಲೈಯನ್ಸ್ 110 ಸ್ಥಾನಗಳನ್ನು ಪಡೆಯುವ ಮೂಲಕ ಕಠಿಣ ಸ್ಪರ್ಧೆ ನೀಡಿದೆ. ಚುನಾವಣಾ ಆಯೋಗದಿಂದ ಪಡೆದ ಮಾಹಿತಿಯ ಪ್ರಕಾರ, ಬಿಹಾರದ ಆಡಳಿತಾರೂಢ ಎನ್‌ಡಿಎ (NDA) ಪಕ್ಷಗಳಾದ ಬಿಜೆಪಿ 74 ಸ್ಥಾನಗಳನ್ನು ಗೆದ್ದಿದೆ, ಜೆಡಿಯು 43 ಸ್ಥಾನಗಳನ್ನು ಗೆದ್ದಿದೆ, ವಿಕಾಸ್ ಇನ್ಸಾನ್ ಪಕ್ಷ 4 ಸ್ಥಾನಗಳನ್ನು ಗೆದ್ದಿದೆ ಮತ್ತು ಹಿಂದೂಸ್ತಾನಿ ಅವಂ ಮೋರ್ಚಾ 4 ಸ್ಥಾನಗಳನ್ನು ಗೆದ್ದಿದೆ. 


COMMERCIAL BREAK
SCROLL TO CONTINUE READING

ಆರ್‌ಜೆಡಿಗೆ 75 ಸ್ಥಾನಗಳು:-
ಪ್ರತಿಪಕ್ಷದ ಮಹಾ ಮೈತ್ರಿಕೂಟದ ಭಾಗವಾಗಿರುವ ಆರ್‌ಜೆಡಿ (RJD) 75 ಸ್ಥಾನಗಳು, ಕಾಂಗ್ರೆಸ್ (Congress) 19 ಸ್ಥಾನಗಳು, ಎಡಪಕ್ಷಗಳು 16 ಸ್ಥಾನಗಳನ್ನು ಗೆದ್ದಿವೆ.


5 ಸ್ಥಾನಗಳಲ್ಲಿ AIMIM ವಿಜಯ:-
ಈ ಚುನಾವಣೆಯಲ್ಲಿ ಎಐಎಂಐಎಂ ತಲಾ 5, ಎಲ್‌ಜೆಪಿ (LJP) ಮತ್ತು ಬಿಎಸ್‌ಪಿ (BSP) ತಲಾ ಒಂದು ಸ್ಥಾನಗಳನ್ನು ಗೆದ್ದಿದೆ. ಸ್ವತಂತ್ರ ಅಭ್ಯರ್ಥಿ ಒಂದು ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.


Bihar Election Results 2020: ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ, ಯಾರಾಗ್ತಾರೆ CM?


ಜನತೆಗೆ ಧನ್ಯವಾದ ಅರ್ಪಿಸಿದ ಪಿಎಂ ಮೋದಿ:-
ಈ ಗೆಲುವಿನ ನಂತರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಟ್ವೀಟ್ ಮಾಡಿ ಬಿಹಾರದ ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ. ಅದೇ ಸಮಯದಲ್ಲಿ ಅಮಿತ್ ಶಾ ಅವರು ಟ್ವೀಟ್ ಮೂಲಕ ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡಿದ್ದಾರೆ.


ಪಿಎಂ ಮೋದಿ ಏನು ಹೇಳಿದರು ?
ಪ್ರಧಾನಿ ಮೋದಿ ಟ್ವೀಟ್ ಮಾಡುವ ಮೂಲಕ 'ಜನರ ಆಶೀರ್ವಾದದಿಂದ ಬಿಹಾರದಲ್ಲಿ ಪ್ರಜಾಪ್ರಭುತ್ವ ಮತ್ತೊಮ್ಮೆ ಗೆದ್ದಿದೆ. ಎಲ್ಲಾ ಎನ್‌ಡಿಎ ಕಾರ್ಯಕರ್ತರು ಬಿಜೆಪಿಯೊಂದಿಗೆ ದೃಢನಿಶ್ಚಯದಿಂದ ಕೆಲಸ ಮಾಡಿದ ರೀತಿ ಮತ್ತು ಸಮರ್ಪಣೆ ವಿಸ್ಮಯಕಾರಿಯಾಗಿದೆ. ನಾನು ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ ಮತ್ತು ಬಿಹಾರದ ಜನರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದು ಬರೆದಿದ್ದಾರೆ.


ಮೀಸಲಾತಿ ವಿಚಾರ: ನಿತೀಶ್ ಕುಮಾರ್ ಮತ್ತು ಬಿಜೆಪಿ ಮಧ್ಯೆ ಭಿನ್ನರಾಗ ..!

ಅಮಿತ್ ಶಾ ಏನು ಹೇಳಿದರು ?
ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕೂಡ ಟ್ವೀಟ್ ಮಾಡುವ ಮೂಲಕ ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಚುನಾವಣೆಗಳಲ್ಲಿ ನರೇಂದ್ರಮೋದಿ ಜಿ ಮತ್ತು ಎನ್‌ಡಿಎ ನೀತಿಗಳಿಗೆ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದ ಉತ್ಸಾಹ ಅದ್ಭುತವಾಗಿದೆ ಎಂದು ಶಾ ಬರೆದಿದ್ದಾರೆ. ಈ ಫಲಿತಾಂಶವು ಕರೋನಾ ವಿರುದ್ಧ ಮೋದಿ ಸರಕಾರದ ಯಶಸ್ವಿ ಹೋರಾಟದಲ್ಲಿ ಬಡವರು, ಕಾರ್ಮಿಕರು, ರೈತರು ಮತ್ತು ಯುವಕರ ವಿಶ್ವಾಸವನ್ನು ತೋರಿಸುತ್ತದೆ ಮಾತ್ರವಲ್ಲ, ಈ ಫಲಿತಾಂಶವು ದೇಶವನ್ನು ದಾರಿ ತಪ್ಪಿಸುವವರಿಗೆ ಒಂದು ಪಾಠವಾಗಿದೆ ಎಂದಿದ್ದಾರೆ.