ಕೇಂದ್ರ ಸಚಿವ ನಿತ್ಯಾನಂದ ರೈ ನಂತರ ಬಿಹಾರದ ನಾಯಕ ಚಿರಾಗ್ ಪಾಸ್ವಾನ್ ಅವರಿಗೆ ಈ ಸೌಲಭ್ಯ ಒದಗಿಸಲು ಸಚಿವಾಲಯ ನಿರ್ಧರಿಸಿದೆ. ಗಮನಾರ್ಹವೆಂದರೆ, ಐಬಿಯ ಬೆದರಿಕೆ ಗ್ರಹಿಕೆ ವರದಿಯ ಆಧಾರದ ಮೇಲೆ, ಪಾಸ್ವಾನ್ಗೆ ಈ ಭದ್ರತೆಯನ್ನು ನೀಡಲಾಗಿದೆ.ಈ ಹಿಂದೆ ಅವರ ಭದ್ರತೆಯನ್ನು ಹೆಚ್ಚಿಸಬೇಕು ಎಂಬ ಬೇಡಿಕೆಯೂ ಬಂದಿದ್ದು, ಅದರ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ
ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಮತ್ತು ಲೋಕಸಭಾ ಸಂಸದ ಚಿರಾಗ್ ಪಾಸ್ವಾನ್ ಅವರನ್ನು ಅವರ ತಂದೆಗೆ ನೀಡಲಾದ ಬಂಗಲೆಯಿಂದ ಹೊರಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬಿಹಾರ ವಿಧಾನಸಭಾ ಚುನಾವಣೆಗೆ (Bihar Election) ವೇದಿಕೆ ಸಜ್ಜಾಗಿದೆ. ಬುಧವಾರ ಮೊದಲ ಹಂತದ ಚುನಾವಣೆಯ ಮತದಾನ (voting) ಆರಂಭವಾಗಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದ್ದು, ಜನರು ಸರತಿಯಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ.
2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಲೋಕ ಜನಶಕ್ತಿ ಪಕ್ಷ (ಎಲ್ಜೆಪಿ) ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ ಕೆಲ ದಿನಗಳ ನಂತರ, ಚಿರಾಗ್ ಪಾಸ್ವಾನ್ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಭಾವನಾತ್ಮಕ ಸಂದೇಶವನ್ನು ನೀಡಿದರು, ಅವರು ಚುನಾವಣಾ ಯುದ್ಧದಲ್ಲಿ ಏಕಾಂಗಿಯಾಗಿದ್ದರೂ ಕಾರ್ಯಕರ್ತರನ್ನು ನೋಡಿಕೊಳ್ಳುವುದಾಗಿ ಹೇಳಿದರು.
ಅಕ್ಟೋಬರ್ 28 ರಂದು ಬಿಹಾರ ವಿಧಾನಸಭೆಯ 71 ಸ್ಥಾನಗಳಿಗೆ ಮೊದಲ ಹಂತದ ಮತದಾನಕ್ಕೆ ಕೇವಲ 10 ದಿನಗಳು ಬಾಕಿ ಇರುವಾಗ, ಎಲ್ಜೆಪಿ ತಮ್ಮ ಮೈತ್ರಿಕೂಟದ ಭಾಗವಲ್ಲ ಎಂದು ಮತದಾರರಲ್ಲಿ ಅನುಮಾನಗಳನ್ನು ಹೋಗಲಾಡಿಸಲು ಬಿಜೆಪಿ ಮತ್ತೊಮ್ಮೆ ಸ್ಪಷ್ಟೀಕರಣವನ್ನು ನೀಡಿದೆ.
2020 ರ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ಅಧ್ಯಕ್ಷ ಚಿರಾಗ್ ಪಾಸ್ವಾನ್ ವಿರುದ್ಧ ವಾಗ್ದಾಳಿ ನಡೆಸಿದರು. ಹಿರಿಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರ ಹೆಸರನ್ನು ತೆಗೆದುಕೊಂಡು ಬಿಹಾರದ ಜನರನ್ನು ದಾರಿ ತಪ್ಪಿಸಲು ಚಿರಾಗ್ ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು.
ಬಿಹಾರದಲ್ಲಿ ಸ್ಥಾನ ಹಂಚಿಕೆ ಬಗ್ಗೆ ಎನ್ಡಿಎನಲ್ಲಿ ಒಮ್ಮತದ ಹಿಂದಿನ ಪ್ರಮುಖ ಕಾರಣ ಎಲ್ಜೆಪಿಯ ನಿರ್ಧಾರ. ರಾಜ್ಯ ಮಟ್ಟದಲ್ಲಿ ಜನತಾದಳ (ಯುನೈಟೆಡ್) ಜೊತೆಗಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಅವರು ಪ್ರತ್ಯೇಕವಾಗಿ ಸ್ಪರ್ಧಿಸಲು LJP ನಿರ್ಧರಿಸಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ರಾಜ್ಯ ಚುನಾವಣೆಗಾಗಿ ತಮ್ಮ ಅಭಿಯಾನವನ್ನು ಪ್ರಾರಂಭಿಸುತ್ತಿದ್ದಂತೆ, ಲೋಕ ಜನಶಕ್ತಿ ಪಕ್ಷ ಅಥವಾ ಚಿರಾಗ್ ಪಾಸ್ವಾನ್ ನೇತೃತ್ವದ ಎಲ್ಜೆಪಿ ಅವರೊಂದಿಗಿನ ಪ್ರಮುಖ ಮೈತ್ರಿಯ ಮೇಲೆ ಅನಿಶ್ಚಿತತೆಯ ಕರಿನೆರಳು ಆವರಿಸಿದೆ.
ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಕುರಿತಾಗಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿಕೆಗೆ ಪುತ್ರಿ ಆಶಾ ಕೆಂಡಾಮಂಡಲವಾಗಿದ್ದಾಳೆ ಅಲ್ಲದೆ ತಮ್ಮ ಹೇಳಿಕೆ ಪಾಸ್ವಾನ್ ಕ್ಷಮೆಯಾಚಿಸದಿದ್ದಲ್ಲಿ ಧರಣಿ ಕುಳಿತುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.