ಲಕ್ನೋ: ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯಿಂದ ವೈದ್ಯಕೀಯ ಸಿಬ್ಬಂದಿಯ ದೊಡ್ಡ ಬೇಜವಾಬ್ದಾರಿ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಒಬ್ಬ ವ್ಯಕ್ತಿಗೆ 5 ನಿಮಿಷಗಳಲ್ಲಿ ಕರೋನಾ ಲಸಿಕೆಯ ಎರಡೂ ಡೋಸ್ ಅನ್ನು ಒಟ್ಟಿಗೆ ನೀಡಲಾಗಿದೆ. ರಾವರ್ಪುರ ಪ್ರದೇಶದ ಲಸಿಕೆ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ನಂತರ ಕೋಲಾಹಲ ಉಂಟಾಗಿದೆ.


COMMERCIAL BREAK
SCROLL TO CONTINUE READING

5 ನಿಮಿಷಗಳಲ್ಲಿ ಕರೋನಾ ಲಸಿಕೆಯ ಎರಡೂ ಡೋಸ್ ನೀಡಿದಾಗ...
ವರದಿಗಳ ಪ್ರಕಾರ, ಲಸಿಕೆ (Vaccine) ಪಡೆಯಲು ಬುಧವಾರ ಅಲ್ಲಿಗೆ ಹೋದ ವ್ಯಕ್ತಿಯು ನರ್ಸಿಂಗ್ ಸಿಬ್ಬಂದಿ ಪರಸ್ಪರ ಮಾತನಾಡುವಲ್ಲಿ  ತಲ್ಲೀನರಾಗಿದ್ದರು ಮತ್ತು ಅವರು ಐದು ನಿಮಿಷಗಳಲ್ಲಿ ಲಸಿಕೆಯ ಎರಡನೇ ಪ್ರಮಾಣವನ್ನು ನೀಡಿದರು ಎಂದು ಆರೋಪಿಸಿದ್ದಾರೆ. ಲಸಿಕೆಯ ಎರಡನೇ ಡೋಸ್ ಅನ್ನು ನನಗೆ ನೀಡುತ್ತಿರುವುದು ತಿಳಿದಿರಲಿಲ್ಲ ಎಂದು ಆ ವ್ಯಕ್ತಿ ಘಟನೆ ಬಗ್ಗೆ ವಿವರಿಸಿದ್ದಾರೆ.


ಇದನ್ನೂ ಓದಿ - Covaxin, Covishield ಇವೆರಡರಲ್ಲಿ ಯಾವ ಲಸಿಕೆ ಹೆಚ್ಚು ಪರಿಣಾಮಕಾರಿ? ಸಂಶೋಧನೆ ಹೇಳಿದ್ದೇನು?


ಈ ರೀತಿಯಾಗಿ ಕರೋನಾ ಲಸಿಕೆಯ (Corona Vaccine) ಎರಡೂ ಡೋಸ್ ಅನ್ನು ಒಟ್ಟಿಗೆ ಪಡೆದಿದ್ದರಿಂದ ಮನೆಗೆ ತೆರಳಿದ ನಂತರ ಆತಂಕ ಉಂಟಾಯಿತು. ಆದ್ದರಿಂದ ಈ ಘಟನೆಯ ಬಗ್ಗೆ ನನ್ನ ಕುಟುಂಬ ಸದಸ್ಯರಿಗೆ ವಿವರಿಸಿದೆ ಎಂದು ಲಸಿಕೆ ಪಡೆದ ವ್ಯಕ್ತಿ ಮಾಹಿತಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ - ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆಯ ಗರಿಷ್ಠ ಬೆಲೆ ನಿಗದಿಪಡಿಸಿದ ಕೇಂದ್ರ ಸರ್ಕಾರ


ಡಬಲ್ ವ್ಯಾಕ್ಸಿನೇಷನ್‌ನಲ್ಲಿ ಯಾವುದೇ ಹಾನಿ ಇಲ್ಲ:
ನಂತರ ಅವರು ಮುಖ್ಯ ವೈದ್ಯಕೀಯ ಅಧಿಕಾರಿಯನ್ನು (ಸಿಎಮ್‌ಒ) ಸಂಪರ್ಕಿಸಿ ಈ ಬಗ್ಗೆ ದೂರು ನೀಡಿದ್ದಾರೆ. ಬಳಿಕ ಅವರನ್ನು ತುರ್ತು ವಾರ್ಡ್‌ಗೆ (Emergency Ward)  ದಾಖಲಿಸಲಾಗಿದ್ದು, ಈ ವಿಷಯವನ್ನು ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ. ಏತನ್ಮಧ್ಯೆ, ಈ ಬಗ್ಗೆ ತನಿಖೆಗೆ ಸಿಎಂಒ ಆದೇಶಿಸಿದೆ. ಡಬಲ್ ವ್ಯಾಕ್ಸಿನೇಷನ್ ನಿಂದ ವ್ಯಕ್ತಿಗೆ ಯಾವುದೇ ಹಾನಿ ಆಗುವುದಿಲ್ಲ ಎಂದು ಹೇಳಲಾಗಿದೆ. ಅದಾಗ್ಯೂ ಲಸಿಕೆಯ ಎರಡು ಪ್ರಮಾಣಗಳ ನಡುವೆ ಕನಿಷ್ಠ 4 ವಾರಗಳ ಅಂತರವಿರಬೇಕು ಎಂದು ಹೇಳಲಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.