Vaccination ಹಾಕಿಸಿಲ್ಲ ಅಂದ್ರೆ ಸಂಬಳವಿಲ್ಲ: ಸರ್ಕಾರಿ ನೌಕರರಿಗೆ ವಿಚಿತ್ರ ನಿಯಮ

ಕರೋನಾ ವೈರಸ್‌ನ ಎರಡನೇ ತರಂಗದ ನಡುವೆ,  ಛತ್ತೀಸ್‌ಗಢದ ಬುಡಕಟ್ಟು ಪ್ರದೇಶಕ್ಕೆ ಸರ್ಕಾರವು ಒಂದು ವಿಶಿಷ್ಟ ಘೋಷಣೆ ಮಾಡಿದೆ. ಗೊರೆಲ್ಲಾ-ಪೆಂಡ್ರಾ-ಮಾರ್ವಾಹಿ ಜಿಲ್ಲೆಯಲ್ಲಿ ಲಸಿಕೆ ಪಡೆಯದ ಯಾವುದೇ ಅಧಿಕಾರಿ ಅಥವಾ ಉದ್ಯೋಗಿಗೆ ಜೂನ್ ತಿಂಗಳಿಗೆ ಸಂಬಳ ನೀಡಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Written by - Yashaswini V | Last Updated : May 29, 2021, 12:00 PM IST
  • ಗೊರೆಲ್ಲಾ-ಪೆಂಡ್ರಾ-ಮಾರ್ವಾಹಿ ಜಿಲ್ಲೆಯಲ್ಲಿ ಲಸಿಕೆ ಪಡೆಯದ ಯಾವುದೇ ಅಧಿಕಾರಿ ಅಥವಾ ಉದ್ಯೋಗಿಗೆ ಜೂನ್ ತಿಂಗಳಿಗೆ ಸಂಬಳ ನೀಡಲಾಗುವುದಿಲ್ಲ
  • ಈ ಆದೇಶವನ್ನು ಬುಡಕಟ್ಟು ಅಭಿವೃದ್ಧಿ ಇಲಾಖೆ ಹೊರಡಿಸಿದೆ
  • ಸರ್ಕಾರಿ ನೌಕರರು ಕೋವಿಡ್ ವ್ಯಾಕ್ಸಿನೇಷನ್ ಕಾರ್ಡ್‌ನ ನಕಲನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಾಖಲಾತಿಗಾಗಿ ಸಲ್ಲಿಸಬೇಕಾಗುತ್ತದೆ
Vaccination ಹಾಕಿಸಿಲ್ಲ ಅಂದ್ರೆ ಸಂಬಳವಿಲ್ಲ: ಸರ್ಕಾರಿ ನೌಕರರಿಗೆ ವಿಚಿತ್ರ ನಿಯಮ title=
Representational Image

ರಾಯ್‌ಪುರ: ಕೊರೊನಾವೈರಸ್‌ನ ಎರಡನೇ ಅಲೆಯ (Coronavirus Second Wave) ಅಟ್ಟಹಾಸದ ನಡುವೆ ಛತ್ತೀಸ್‌ಗಢದ ಬುಡಕಟ್ಟು ಪ್ರದೇಶಕ್ಕೆ ಸರ್ಕಾರವು ಒಂದು ವಿಶಿಷ್ಟವಾದ ಘೋಷಣೆ ಮಾಡಿದೆ. ಗೊರೆಲ್ಲಾ-ಪೆಂಡ್ರಾ-ಮಾರ್ವಾಹಿ ಜಿಲ್ಲೆಯಲ್ಲಿ ಲಸಿಕೆ ಪಡೆಯದ ಯಾವುದೇ ಅಧಿಕಾರಿ ಅಥವಾ ಉದ್ಯೋಗಿಗೆ ಜೂನ್ ತಿಂಗಳಿಗೆ ಸಂಬಳ ನೀಡಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶವನ್ನು ಬುಡಕಟ್ಟು ಅಭಿವೃದ್ಧಿ ಇಲಾಖೆ (Tribal Development Department) ಹೊರಡಿಸಿದೆ.

ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಸರ್ಕಾರಿ ನೌಕರರು (Govt Employees) ಕೋವಿಡ್ ವ್ಯಾಕ್ಸಿನೇಷನ್ ಕಾರ್ಡ್‌ನ ನಕಲನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಾಖಲಾತಿಗಾಗಿ ಸಲ್ಲಿಸಬೇಕಾಗುತ್ತದೆ, ನಂತರ ಅವರ ವೇತನ ಬರುತ್ತದೆ ಎನ್ನಲಾಗಿದೆ.

ಇದನ್ನೂ ಓದಿ - MDM Scheme: ಸಿಹಿ ಸುದ್ದಿ! 11.8 ಕೋಟಿ ವಿದ್ಯಾರ್ಥಿಗಳ ಖಾತೆಗೆ ಸರ್ಕಾರದ ಹಣ

ಬುಡಕಟ್ಟು ಅಭಿವೃದ್ಧಿ ಇಲಾಖೆ ಸಹಾಯಕ ಆಯುಕ್ತ ಕೆ. ಎಸ್. ಮಸ್ರಾಮ್ ಇನ್ನೂ ಕೂಡ ಕರೋನಾ ವ್ಯಾಕ್ಸಿನೇಷನ್ (Corona Vaccination) ಪಡೆಯದ ಸರ್ಕಾರಿ ನೌಕರರ  ಸಂಬಳವನ್ನು ಜೂನ್ ತಿಂಗಳಲ್ಲಿ ತಡೆಹಿಡಿಯಲಾಗುವುದು. ಇದಕ್ಕೆ ನೌಕರರೇ ಕಾರಣ. ಈ ಆದೇಶವನ್ನು ತಕ್ಷಣದಿಂದ ಜಾರಿಗೆ ತರಲಾಗಿದೆ  ಎಂದು ಹೇಳಿದರು.

ಇದನ್ನೂ ಓದಿ -  Cyclone Yaas : ಕೇಂದ್ರ ಸರ್ಕಾರದಿಂದ 3 ರಾಜ್ಯಗಳಿಗೆ ₹ 1000 ಕೋಟಿ ನೆರವು!

ಈ ಆದೇಶದ ಫಲಿತಾಂಶದ ಬಗ್ಗೆ ಎಲ್ಲರೂ ಯೋಚಿಸಬೇಕು. ಸುಮಾರು 90 ಪ್ರತಿಶತ ಉದ್ಯೋಗಿಗಳಿಗೆ ಈಗಾಗಲೇ ಲಸಿಕೆ ಸಿಕ್ಕಿದೆ. ನಮ್ಮ ಗುರಿ ಸರ್ಕಾರಿ ನೌಕರರಿಗೆ ಕಿರುಕುಳ ನೀಡುವುದು ಅಥವಾ ಅವರ ಸಂಬಳವನ್ನು ನಿಲ್ಲಿಸುವುದಲ್ಲ. ಕರೋನಾ ವಿರುದ್ಧದ ಹೋರಾಟದಲ್ಲಿ ಪ್ರತಿಯೊಬ್ಬರೂ ಲಸಿಕೆ ಪಡೆಯಲಿ ಎಂಬುದು ನಮ್ಮ ಗುರಿ ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News