Video: ರಸ್ತೆಯುದ್ದಕ್ಕೂ ತಾನೇ ಬುಲೆಟ್ ಓಡಿಸಿಕೊಂಡು ಮದುವೆ ಮಂಟಪ ಸೇರಿದ ವಧು
ಸಾಮಾನ್ಯವಾಗಿ ವಧು ನಾಚಿಕೊಂಡು, ತಲೆ ಬಾಗಿಸಿಕೊಂದು ಬರಬೇಕು ಎಂಬ ಕಲ್ಪನೆಯು ಹಿಂದಿನಿಂದ ನಡೆದುಕೊಂಡು ಬಂದಿದೆ. ಆದರೆ ಇಯಾಗ ಕಾಲ ಬದಲಾಗಿದೆ.
ನವದೆಹಲಿ : ಭಾರತದಲ್ಲಿ ಮತ್ತೆ ಮದುವೆಯ ಸೀಸನ್ ಶುರುವಾಗಿದೆ. ಮದುವೆಯ ಸಂದರ್ಭದಲ್ಲಿ ವಧು-ವರರು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತಾರೆ. ಮದುವೆ ಮಂಟಪಕ್ಕೆ ಯಾವ ರೀತಿ ಎಂಟ್ರಿ ಕೊಡಬೇಕು ಎನ್ನುವುದು ಇತ್ತೀಚಿನ ದಿನಗಳಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ಹಾಗಾಗಿ ಪ್ರತಿ ವಧು ಕೂಡಾ ತನ್ನ ಎಂಟ್ರಿ ಬಗ್ಗೆ ವಿಶಿಷ್ಟವಾಗಿ ಆಲೋಚಿಸಿರುತ್ತಾಳೆ.
ಬುಲೆಟ್ ಓಡಿಸಿಕೊಂಡು ಎಂಟ್ರಿ ಕೊಟ್ಟ ವಧು :
ಸಾಮಾನ್ಯವಾಗಿ ವಧು ನಾಚಿಕೊಂಡು, ತಲೆ ಬಾಗಿಸಿಕೊಂದು ಬರಬೇಕು ಎಂಬ ಕಲ್ಪನೆಯು ಹಿಂದಿನಿಂದ ನಡೆದುಕೊಂಡು ಬಂದಿದೆ. ಆದರೆ ಈಗ ಕಾಲ ಬದಲಾಗಿದೆ. ಸದ್ಯ ಮದುವೆ ಆಗುತ್ತಿರುವ ಮಹಿಳೆಯರು ಪ್ರಾಚೀನ ಶೈಲಿಯನ್ನು ಹಿಂದಿಕ್ಕಿ ಹೊಸ ಹೊಸ ರೀತಿಯಲ್ಲಿ ಮದುವೆ ಮಂಟಪಕ್ಕೆ ಬರಲಾರಂಭಿಸಿದ್ದಾರೆ. ವೈರಲ್ ಆಗುತ್ತಿರುವ ವೀಡಿಯೋದಲ್ಲಿ (Viral video) ವಧುಯೊಬ್ಬಳು ಬುಲೆಟ್ ಬೈಕ್‌ನಲ್ಲಿ ರಸ್ತೆಯಲ್ಲಿ ಬಿಂದಾಸ್ ಆಗಿ ಓಡಾಡುತ್ತಿರುವುದು ಕಂಡು ಬರುತ್ತದೆ. ವಿವಾಹದ ಧಿರಿಸಿನಲ್ಲಿ ವಧು, ( bride video) ಅದ್ಬುತವಾಗಿ ಕಂಗೊಳಿಸುತ್ತಾಳೆ. ವಧು ರಸ್ತೆಯುದ್ದಕ್ಕೂ ಬೈಕ್ ಓಡಿಸಿಕೊಂಡು ಹೋಗುತ್ತಿದ್ದರೆ ಅಲ್ಲಿ ನೆರೆದವರು ಆಶ್ಚರ್ಯದಿಂದ ವಧುವನ್ನೇ ದಿಟ್ಟಿಸಿ ನೋಡುತ್ತಿರುವುದು ಕೂಡಾ ಕಂಡು ಬಂದಿದೆ.
ಇದನ್ನೂ ಓದಿ : Accindent Viral Video: ಸಾವಿನ ಬಾಯಿಗೆ ಬಂದ ವ್ಯಕ್ತಿ 'ಯಮರಾಜ'ನಿಂದ ತಪ್ಪಿಸಿಕೊಂಡಿದ್ದು ಹೀಗೆ!
ವಧು ಪೂರ್ಣ ರಾಯಲ್ ಶೈಲಿಯಲ್ಲಿ ಬುಲೆಟ್ ಅನ್ನು ಓಡಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಈ ಸಮಯದಲ್ಲಿ, ವಧು ಕೆಂಪು ಬಣ್ಣದ ಲೆಹೆಂಗಾವನ್ನು ಧರಿಸಿದ್ದು, ಸುಂದರವಾಗಿ ಕಂಗೊಳಿಸುತ್ತಾಳೆ. ವಧುವಿನ ಮೇಕಪ್ ಬಗ್ಗೆಯೂ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬುಲೆಟ್‌ನಿಂದ ವಧುವಿನ ಗ್ರ್ಯಾಂಡ್ ಎಂಟ್ರಿ
ವಿಟ್ಟಿ_ವೆಡ್ಡಿಂಗ್ ಎಂಬ ಖಾತೆಯಿಂದ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು (Viral video) ಹಂಚಿಕೊಳ್ಳಲಾಗಿದೆ. ಈ ವೀಡಿಯೋ ಎಷ್ಟು ಅದ್ಭುತವಾಗಿದೆ ಎಂದರೆ ಇದುವರೆಗೆ 12 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
ಇದನ್ನೂ ಓದಿ : Watch:ಬೃಹತ್ ಗಾತ್ರದ ಹೆಬ್ಬಾವು ರಸ್ತೆ ದಾಟುವ ವಿಡಿಯೋ ವೈರಲ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.