ಪ್ಯಾರಾಸೈಲಿಂಗ್ ವೇಳೆ ಸಮುದ್ರ ಮಧ್ಯದಲ್ಲಿ ಮುರಿದುಬಿದ್ದ ಹಗ್ಗ, ಮೈ ಜುಮ್ಮೆನಿಸುವ ವಿಡಿಯೋ ಇಲ್ಲಿದೆ

ಇಬ್ಬರು ಮಹಿಳೆಯರು, ಕರಾವಳಿ ತೀರದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಬಂದಿದ್ದರು.  ಈ ವೇಳೆ ಎಲ್ಲರೂ ಪ್ಯಾರಾಸೈಲಿಂಗ್ ನಡೆಸುತ್ತಿರುವುದನ್ನು ನೋಡಿ ಆಕರ್ಷಿತರಾದ ಮಹಿಳೆಯರು ತಾವು ಕೂಡಾ ಪ್ಯಾರಾ ಸೈಲಿಂಗ್ ನಡೆಸಲು ನಿರ್ಧರಿಸಿದ್ದಾರೆ.

Written by - Ranjitha R K | Last Updated : Dec 23, 2021, 04:12 PM IST
  • ಪ್ಯಾರಾಸೈಲಿಂಗ್‌ ನಡೆಸುತ್ತಿದ್ದ ವೇಳೆ ಅವಘಡ
  • ಹಗ್ಗ ಮುರಿದು ಬಿದ್ದು ಅವಘಡ
  • ಪವಾಡ ಸದೃಶವಾಗಿ ಪಾರಾದ ಮಹಿಳೆಯರು
ಪ್ಯಾರಾಸೈಲಿಂಗ್ ವೇಳೆ ಸಮುದ್ರ ಮಧ್ಯದಲ್ಲಿ ಮುರಿದುಬಿದ್ದ ಹಗ್ಗ, ಮೈ ಜುಮ್ಮೆನಿಸುವ ವಿಡಿಯೋ ಇಲ್ಲಿದೆ title=
ಪ್ಯಾರಾಸೈಲಿಂಗ್‌ ನಡೆಸುತ್ತಿದ್ದ ವೇಳೆ ಅವಘಡ (photo youtube)

ಮುಂಬೈ : ಮಹಾರಾಷ್ಟ್ರದ ಅಲಿಬಾಗ್‌ನಲ್ಲಿ ಇಬ್ಬರು ಮಹಿಳೆಯರು ಪ್ಯಾರಾಸೈಲಿಂಗ್‌ (Parasailing) ನಡೆಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಪ್ಯಾರಾಸೈಲಿಂಗ್‌ ವೇಳೆ, ದೋಣಿಗೆ ಸಂಪರ್ಕಿಸುವ ಹಗ್ಗ ತುಂಡಾಗಿ ಬಿದ್ದು ದುರಂತ ಸಂಭವಿಸಿದೆ. ಮುಂಬೈನ ಸಕಿನಾಕಾ ನಿವಾಸಿಗಳಾದ ಇಬ್ಬರು ಮಹಿಳೆಯರು ನವೆಂಬರ್ 27 ರಂದು ಮಹಾರಾಷ್ಟ್ರದ ಕರಾವಳಿ ತೀರದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಬಂದಿದ್ದರು.  ಈ ವೇಳೆ ಇಬ್ಬರೂ,  ಪ್ಯಾರಾಸೈಲಿಂಗ್ ಮಾಡಲು ನಿರ್ಧರಿಸಿದ್ದಾರೆ. 

ಪ್ಯಾರಾಸೈಲಿಂಗ್ ವೇಳೆ ಇದ್ದಕ್ಕಿದ್ದಂತೆ ನಡೆಯಿತು ಅವಘಡ : 
ಇಬ್ಬರು ಮಹಿಳೆಯರು, ಕರಾವಳಿ ತೀರದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಬಂದಿದ್ದರು.  ಈ ವೇಳೆ ಎಲ್ಲರೂ ಪ್ಯಾರಾಸೈಲಿಂಗ್ (Parasailing) ನಡೆಸುತ್ತಿರುವುದನ್ನು ನೋಡಿ ಆಕರ್ಷಿತರಾದ ಮಹಿಳೆಯರು ತಾವು ಕೂಡಾ ಪ್ಯಾರಾ ಸೈಲಿಂಗ್ ನಡೆಸಲು ನಿರ್ಧರಿಸಿದ್ದಾರೆ. ಆದರೆ ಈ ಮಹಿಳೆಯರು ಪ್ಯಾರಾಸೈಲಿಂಗ್ ನಡೆಸುತ್ತಿದ್ಧಂತೆಯೇ, ಪ್ಯಾರಾಸೈಲಿಂಗ್ ಹಗ್ಗವು ಮುರಿದು ಬಿದ್ದಿದೆ. 

ಇದನ್ನೂ ಓದಿ : Black Idli: ನೀವು ಎಂದಾದರೂ 'ಕರಿ ಇಡ್ಲಿ' ತಿಂದಿದ್ದೀರಾ? ಎಲ್ಲಿ ಸಿಗುತ್ತೆ?

ಇಬ್ಬರು ಮಹಿಳೆಯರು ಲೈಫ್ ಜಾಕೆಟ್‌ಗಳನ್ನು (Life Jacket) ಧರಿಸಿದ್ದ ಕಾರಣ, ಬ್ಬರ ಪ್ರಾಣಕ್ಕೂ ಯಾವುದೇ ಅಪಾಯವಾಗಿಲ್ಲ.  ಹಗ್ಗ ಮುರಿದು ಬೀಳುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೀಗ   ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗುತ್ತಿದೆ. 

 

ವಿಡಿಯೋ ನೋಡಿದ ಜನರು ಭದ್ರತೆಯ ಬಗ್ಗೆ ಎತ್ತುತ್ತಿದ್ದಾರೆ ಪ್ರಶ್ನೆ : 
ಸಾಹಸ ಕ್ರೀಡಾ ಸೇವೆಗಳನ್ನು ಒದಗಿಸುವ ನಿರ್ವಾಹಕರು ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಇದೀಗ ಕಳವಳ ವ್ಯಕ್ತವಾಗಿದೆ. ಈ ವಿಡಿಯೋ (Viral video) ವೀಕ್ಷಿಸಿದ ಜನರು, ಸುರಕ್ಷತಾ ಮಾನದಂಡಗಳನ್ನು ಪೂರೈಸದ ಸಾಧನಗಳನ್ನು ಬಳಸುತ್ತಿರುವ ಆಪರೇಟರ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ‘ನಮ್ಮನ್ನು ಬಿಟ್ಟು ಹೋಗ್ಬೇಡಿ ಸಾರ್ ಪ್ಲೀಸ್’: ಶಿಕ್ಷಕನ ವರ್ಗಾವಣೆಗೆ ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು..

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News