ನವದೆಹಲಿ: ದೆಹಲಿ ಮೆಟ್ರೋ ಸೇವೆಯನ್ನು ಮುಂದಿನ ವಾರ ಸೋಮವಾರದಿಂದ ಮತ್ತೊಮ್ಮೆ ಮರುಸ್ಥಾಪಿಸಲಾಗುತ್ತಿದೆ. ಆದರೆ ಈ ಬಾರಿ ಹೊಸ ನಿಯಮಗಳು ಇರುತ್ತವೆ. ಉದಾಹರಣೆಗೆ, ದೆಹಲಿ ಮೆಟ್ರೋ (Delhi Metro) ದಿನಕ್ಕೆ 8 ಗಂಟೆ ಮಾತ್ರ ಚಲಿಸುತ್ತದೆ ಮತ್ತು ಸೋಂಕಿತ ವಲಯದ ನಿಲ್ದಾಣಗಳನ್ನು ಮುಚ್ಚಲಾಗುತ್ತದೆ. ಆದರೆ ಪ್ಲಾಟ್‌ಫಾರ್ಮ್ ಪ್ರಯಾಣಿಕರ ನಡುವೆ ಸಾಮಾಜಿಕ ಅಂತರವನ್ನು ಕಾಣದಿದ್ದರೆ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ನಿಲ್ಲುವುದಿಲ್ಲ ಎಂಬ ನಿಯಮವನ್ನೂ ಇದರಲ್ಲಿ ಸೇರಿಸಲಾಗಿದೆ.


COMMERCIAL BREAK
SCROLL TO CONTINUE READING

ಅನ್ಲಾಕ್ -4 (Unlock 4)ರ ಅಡಿಯಲ್ಲಿ ದೆಹಲಿ ಮೆಟ್ರೋ ಸೇವೆಯನ್ನು ಆರಂಭಿಸಲಾಗುತ್ತಿದ್ದು ಜನರಿಗೆ ಸೋಂಕು ತಗುಲದ ರೀತಿಯಲ್ಲಿ ನಿಗಾ ವಹಿಸಲು ಕಠಿಣ ನಿಯಮಗಳನ್ನು ರೂಪಿಸಲಾಗಿದೆ ಎಂದು ಡಿಎಂಆರ್‌ಸಿ (DMRC) ಮುಖ್ಯಸ್ಥ ಮಾಂಗು ಸಿಂಗ್ ಹೇಳಿದ್ದಾರೆ. ಎಲ್ಲಿ ಪ್ರಯಾಣಿಕರು ಸಾಮಾಜಿಕ ಅಂತರದ ನಿಯಮಗಳನ್ನು ಅನುಸರಿಸುವುದಿಲ್ಲವೋ ಅಲ್ಲಿ ಮೆಟ್ರೋ ನಿಲ್ಲಿಸಲಾಗುವುದಿಲ್ಲ ಎಂದು ಅವರು ಹೇಳಿದರು.


ಮೆಟ್ರೋ ನಿಲ್ದಾಣಗಳ ಪ್ರವೇಶದ್ವಾರದಲ್ಲಿ ಭದ್ರತಾ ಸಿಬ್ಬಂದಿ ಇರುವುದರಿಂದ ಸಾಮಾಜಿಕ ದೂರ ಮತ್ತು ಮಾಸ್ಕ್ ಗಳಂತಹ ನಿಯಮಗಳನ್ನು ಅನುಸರಿಸಲು ಸಾಧ್ಯವಿದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಪ್ಲ್ಯಾಟ್‌ಫಾರ್ಮ್‌ನಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಪ್ರಯಾಣಿಕರು ಸ್ವತಃ ಈ ನಿಯಮಗಳನ್ನು ಪಾಲಿಸಬೇಕು. ಏತನ್ಮಧ್ಯೆ ಮೆಟ್ರೊ ರೈಲು ಚಾಲಕರಿಗೆ ಪ್ಲ್ಯಾಟ್‌ಫಾರ್ಮ್‌ನಲ್ಲಿ ಪ್ರಯಾಣಿಕರ ನಡುವಿನ ಸಾಮಾಜಿಕ ಅಂತರವನ್ನು ಕಾಣದಿದ್ದರೆ ರೈಲು ನಿಲ್ಲಿಸಬಾರದು ಎಂದು ಸೂಚನೆ ನೀಡಲಾಗಿದೆ.


ಯೆಲ್ಲೋ ಲೈನ್ ನಲ್ಲಿ ಮೆಟ್ರೋ ಸೇವೆ ಪ್ರಾರಂಭ:
ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ಬುಧವಾರ ಹೇಳಿಕೆಯಲ್ಲಿ ದೆಹಲಿ ಮೆಟ್ರೊ ಸೇವೆಯನ್ನು ಹಂತ ಹಂತವಾಗಿ ಮೂರು ಹಂತಗಳಲ್ಲಿ ಸೆಪ್ಟೆಂಬರ್ 7 ರಿಂದ 12 ರವರೆಗೆ ಪುನಃಸ್ಥಾಪಿಸಲಾಗುವುದು ಎಂದು ತಿಳಿಸಿದೆ. ದೆಹಲಿಯ ಸಮೈಪುರ್ ಬಡ್ಲಿಯನ್ನು ಗುರುಗ್ರಾಮ್‌ನ ಹುಡಾ ಸಿಟಿ ಸೆಂಟರ್‌ಗೆ ಸಂಪರ್ಕಿಸುವ ಯೆಲ್ಲೊ ಲೈನ್ ಮತ್ತು ರಾಪಿಡ್ ಮೆಟ್ರೋ ಸೆಪ್ಟೆಂಬರ್ 7 ರಂದು ಕಾರ್ಯನಿರ್ವಹಿಸಲಿದೆ.


ಇವು ಹೊಸ ಮಾರ್ಗಸೂಚಿಗಳು:-
- ಮೆಟ್ರೋ ಸೇವೆ ಸೆಪ್ಟೆಂಬರ್ 7 ರಿಂದ ಪ್ರಾರಂಭವಾಗಲಿದ್ದು ಎಲ್ಲಾ ಮಾರ್ಗಗಳು ಸೆಪ್ಟೆಂಬರ್ 12 ರಿಂದ ಕಾರ್ಯನಿರ್ವಹಿಸಲಿವೆ.
- ಆರಂಭದಲ್ಲಿ ರೈಲುಗಳು ಕೆಲವೇ ಗಂಟೆಗಳವರೆಗೆ ಓಡುತ್ತವೆ, ಸೆಪ್ಟೆಂಬರ್ 12 ರ ನಂತರ ವಿಸ್ತರಿಸಲಾಗುವುದು.
- ದಟ್ಟಣೆ ಕಡಿಮೆ ಮಾಡಲು ರೈಲುಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತದೆ
- ಸಾಮಾಜಿಕ ದೂರವಿರಲು ಪ್ಲ್ಯಾಟ್‌ಫಾರ್ಮ್‌ನಲ್ಲಿ ಗುರುತು ಹಾಕಲಾಗುವುದು
- ಪ್ರಯಾಣದ ಸಮಯದಲ್ಲಿ ಮಾಸ್ಕ್ ಗಳನ್ನು ಧರಿಸುವುದು ಕಡ್ಡಾಯವಾಗಿದೆ
- ಲಕ್ಷಣರಹಿತ ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶವಿರುತ್ತದೆ
- ಪ್ರಯಾಣಿಕರು ಆರೋಗ್ಯ ಸೇತು ಆಪ್ (Aarogya Setu App) ಬಳಸುವುದು ಕಡ್ಡಾಯವಾಗಿದೆ.
- ಪ್ರವೇಶ ದ್ವಾರ ಮತ್ತು ಇತರ ಸ್ಥಳಗಳಲ್ಲಿ ಸ್ಯಾನಿಟೈಜರ್ ಸ್ಟ್ಯಾಂಡ್‌ಗಳನ್ನು ಸ್ಥಾಪಿಸಲಾಗುವುದು


ಮೆಟ್ರೋ 8 ಗಂಟೆಗಳ ಕಾಲ ಮಾತ್ರ ಚಲಿಸುತ್ತದೆ:
ಬೆಳಿಗ್ಗೆ ಏಳು ರಿಂದ ಬೆಳಿಗ್ಗೆ 11 ರವರೆಗೆ ಮತ್ತು ಸಂಜೆ ನಾಲ್ಕು ರಿಂದ ಸಂಜೆ ಎಂಟರವರೆಗೆ ರೈಲುಗಳು ಚಲಿಸುತ್ತವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸೆಪ್ಟೆಂಬರ್ 9 ರಂದು ಬ್ಲೂ ಲೈನ್ ಮತ್ತು ಪಿಂಕ್ ಲೈನ್‌ನಲ್ಲಿ ಸೇವೆ ಪುನರಾರಂಭಗೊಳ್ಳಲಿದೆ. ಸೆಪ್ಟೆಂಬರ್ 10 ರಂದು ರೆಡ್ ಲೈನ್, ಗ್ರೀನ್ ಲೈನ್, ವೈಲೆಟ್ ಲೈನ್ ನಲ್ಲಿ ಸೇವೆ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.