ಫರಿದಾಬಾದ್: ಹಣ ಕೇಳಿದಕ್ಕೆ ಅಂಗಡಿ ಮಾಲೀಕನ ಪಕ್ಕೆಲುಬು ಮುರಿಯುವಂತೆ ಗ್ರಾಹಕನೊಬ್ಬ ಥಳಿಸಿರುವ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿನಡೆದಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗುತ್ತಿದೆ. ಉಪಕರಣ ಸರಿಪಡಿಸಿದ ಹಣ ಕೇಳಿದಕ್ಕೆ ಅಂಗಡಿ ಮಾಲೀಕನಿಗೆ ಗ್ರಾಹಕ ಮನಬಂದಂತೆ ಥಳಿಸಿದ್ದಾನೆ. ಇಡೀ ಘಟನೆಯು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಳಿಕ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.


COMMERCIAL BREAK
SCROLL TO CONTINUE READING

ವರದಿಯ ಪ್ರಕಾರ ಅಂಗಡಿ ಮಾಲೀಕನನ್ನು ಫರಿದಾಬಾದ್‌(Faridabad)ನ ಲಕದ್‌ಪುರ್ ನಿವಾಸಿ ಗೌರವ್ ಎಂದು ಗುರುತಿಸಲಾಗಿದೆ. ಗ್ರಾಹಕನಿಂದ ಮನಬಂದಂತೆ ಥಳಿಸಿಕೊಂಡ ಗೌರವ್ ಪಕ್ಕೆಲುಬು ಮುರಿತವಾಗಿದ್ದು, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿಯನ್ನು ದಿನೇಶ್ ಭದ್ರಾನಾ ಎಂದು ಗುರುತಿಸಲಾಗಿದ್ದು, ಹಲ್ಲೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಆತನನ್ನು ಬಂಧಿಸಲಾಗಿದೆ ಅಂತಾ ಸುರಜ್ಕುಂಡ್ ಸ್ಟೇಷನ್ ಹೌಸ್ ಆಫೀಸರ್ ಹೇಳಿದ್ದಾರೆ.


ಜಮ್ಮು-ಕಾಶ್ಮೀರದಲ್ಲಿ 30 ವರ್ಷಗಳಲ್ಲಿ 5,886 ಭದ್ರತಾ ಸಿಬ್ಬಂದಿ ಹುತಾತ್ಮ..!


ತನ್ನ ಕೆಟ್ಟು ಹೋದ ಪವರ್ ಇನ್ವರ್ಟರ್(Power Inverter) ಅನ್ನು ಸರಿಪಡಿಸಿಕೊಡುವಂತೆ ಆರೋಪಿ ದಿನೇಶ್ ಭದ್ರಾನಾ, ಗೌರವ್ ಗೆ ಬಲವಂತ ಮಾಡಿದ್ದಾನೆ. ಬಳಿಕ ಉಪಕರಣ ರಿಪೇರಿ ಮಾಡಿದ ಗೌರವ್ 1,850 ರೂ. ನೀಡುವಂತೆ ಕೇಳಿಕೊಂಡಿದ್ದಾನೆ. ಇದರಿಂದ ಕುಪಿತಗೊಂಡ ದಿನೇಶ್ ಹಣ ಪಾವತಿಸಲು ನಿರಾಕರಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಪವರ್ ಇನ್ವರ್ಟರ್ ರಿಪೇರಿ ಮಾಡಿದ ಹಣ ನೀಡಲೇಬೇಕು ಅಂತಾ ಗೌರವ್ ಒತ್ತಾಯಿಸಿದ್ದಾನೆ. ಇದರಿಂದ ಕೋಪಗೊಂಡ ದಿನೇಶ್ ಅತ್ಯಂತ ಕ್ರೂರವಾಗಿ ಗೌರವ್ ಗೆ ಥಳಿಸಿದ್ದಾನೆ.


ಇದನ್ನೂ ಓದಿ: ಉಜ್ವಲಾ 2.0 ಯೋಜನೆ ಬಿಡುಗಡೆ, ಕೇವಲ ತುಂಬಿದ ಸಿಲಿಂಡರ್ ಅಷ್ಟೇ ಅಲ್ಲ ಒಲೆಯು ಉಚಿತ


ಅಂಗಡಿ ಮಾಲೀಕ ಗೌರವ್ ಮೇಲೆ ದಿನೇಶ್ ಮನಬಂದಂತೆ ಹಲ್ಲೆ ನಡೆಸುತ್ತಿರುವ ದೃಶ್ಯವು ಸಿಸಿಟಿವಿ ಕ್ಯಾಮೆರಾ(CCTV Camera)ದಲ್ಲಿ ಸೆರೆಯಾಗಿದೆ. ದಿನೇಶ್ ನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಗೌರವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರದೇಶದಲ್ಲಿ ವಲಸಿಗರು ಇಂತಹ ಗೂಂಡಾಗಿರಿಗೆ ತುತ್ತಾಗುತ್ತಾರೆ ಎಂದು ಗೌರವ್ ಅವರ ತಂದೆ ಉಮೇಶ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ