ನವದೆಹಲಿ: ಕಣಿವೆ ರಾಜ್ಯ ಜಮ್ಮು- ಕಾಶ್ಮೀರ(Jammu and Kashmir)ದಲ್ಲಿ ಕಳೆದ 30 ವರ್ಷಗಳಲ್ಲಿ 5,886 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ಉಲ್ಲೇಖಿಸಿ ANI ಸುದ್ದಿಸಂಸ್ಥೆ ವರದಿ ಮಾಡಿದೆ. 1989ರಿಂದ 2019ರ ಆಗಸ್ಟ್ 5 ರವರೆಗೆ ಜಮ್ಮು- ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ಕೃತ್ಯಗಳಲ್ಲಿ 5,886 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಅಂತಾ ಗೃಹ ವ್ಯವಹಾರಗಳ ಸಚಿವಾಲಯದ ರಾಜ್ಯ ಖಾತೆ ಸಚಿವ ನಿತ್ಯಾನಂದ ರೈ(Nityanand Rai) ಲೋಕಸಭೆಯಲ್ಲಿ ಮಂಗಳವಾರ ತಿಳಿಸಿದ್ದಾರೆ.
ಇದನ್ನೂ ಓದಿ: Indian Railways : ರೈಲು ಟಿಕೆಟ್ ಬುಕ್ ಮಾಡುವಾಗ ನೆನಪಿರಲಿ ಈ ಕೋಡ್ ಇಲ್ಲವಾದರೆ ಸಿಗುವುದಿಲ್ಲ ಸೀಟ್
ಜಮ್ಮು ಮತ್ತು ಕಾಶ್ಮೀರವು ಭಯೋತ್ಪಾದಕ ಹಿಂಸಾಚಾರ(Terrorism)ದಿಂದ ನಲುಗಿಹೋಗಿದೆ. ಕಣಿವೆ ರಾಜ್ಯದಲ್ಲಿ ಉಗ್ರ ಚಟುವಟಿಕೆ ನಡೆಸುವುದಕ್ಕೆ ಗಡಿಯಾಚೆಯಿಂದ ಪ್ರಾಯೋಜಿಸಲಾಗಿದೆ ಮತ್ತು ಬೆಂಬಲಿಸಲಾಗುತ್ತದೆ ಎಂದು ನಿತ್ಯಾನಂದ ರೈ ಹೇಳಿದ್ದಾರೆ. ಸಂವಿಧಾನದ 370ನೇ ವಿಧಿ ರದ್ದತಿಗೂ ಮುನ್ನ ಜಮ್ಮು- ಕಾಶ್ಮೀರದಲ್ಲಿ ನಡೆದ ಭದ್ರತಾ ಸಿಬ್ಬಂದಿ ಹತ್ಯೆಗೆ ಸಂಬಂಧಿಸಿದ ಮಾಹಿತಿಯನ್ನು ಲಿಖಿತ ಪ್ರತಿಕ್ರಿಯೆ ಮೂಲಕ ಹಂಚಿಕೊಂಡರು.
ಜಮ್ಮು- ಕಾಶ್ಮೀರ(Jammu and Kashmir)ವು ನಿರಂತರವಾಗಿ ಭಯೋತ್ಪಾದಕ ಹಿಂಸಾಚಾರ ಪೀಡಿತವಾಗಿದೆ. ಕಣಿವೆ ರಾಜ್ಯದಲ್ಲಿ ನಡೆಯುವ ಉಗ್ರಚಟುವಟಿಕೆಗಳನ್ನು ಗಡಿಯುದ್ದಕ್ಕೂ ಬೆಂಬಲಿಸಲಾಗುತ್ತಿದೆ. ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಆರಂಭವಾದಾಗಿನಿಂದ(1989ರಿಂದ 2019ರ ಆಗಸ್ಟ್ 5ರವರೆಗೆ) 30 ವರ್ಷಗಳಲ್ಲಿ ಒಟ್ಟು 5,886 ಭದ್ರತಾ ಸಿಬ್ಬಂದಿ ಭಯೋತ್ಪಾದನಾ ಕೃತ್ಯಗಳಲ್ಲಿ ಹುತಾತ್ಮರಾಗಿದ್ದಾರೆಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Free Ration : ಕೋವಿಡ್ ಸಮಯದಲ್ಲಿ 80 ಕೋಟಿ ಭಾರತೀಯರಿಗೆ 'ಉಚಿತ ಪಡಿತರ' : ಪ್ರಧಾನಿ ಮೋದಿ
ಭದ್ರತಾ ಪಡೆ(Security Forces)ಗಳಿಗೆ ಪ್ರಸ್ತುತ ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ, ಹುತಾತ್ಮ ಭದ್ರತಾ ಪಡೆಯ ಕುಟುಂಬ ಸದಸ್ಯರಿಗೆ ಕೇಂದ್ರ ಸರ್ಕಾರವು ಸೂಕ್ತ ಪರಿಹಾರ ನೀಡಿದೆ ಎಂದು ರೈ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ