ನವದೆಹಲಿ: Central Vista redevelopment plan - ಮೋದಿ ಸರ್ಕಾರದ ಕನಸಿನ ಯೋಜನೆಯಾಗಿರುವ ಸೆಂಟ್ರಲ್ ವಿಸ್ಟಾ ರೀಡೆವಲಪ್ಮೆಂಟ್ ಪ್ಲಾನ್ ಗೆ ಸುಪ್ರೀಂ ಕೋರ್ಟ್‌ನಿಂದ ಗ್ರೀನ್ ಸಿಗ್ನಲ್ ದೊರೆತಿದೆ. ಈ ಯೋಜನೆಯ ಅಡಿ ಹೊಸ ಸಂಸತ್ತಿನ ಕಟ್ಟಡ ನಿರ್ಮಿಸಲಾಗುತ್ತಿದೆ. ಹೊಸ ಸಂಸತ್ ಭವನ ನಿರ್ಮಾಣದ ವಿರುದ್ಧ ಹಲವಾರು ಅರ್ಜಿಗಳು ದಾಖಲಾಗಿದ್ದವು. ಆದರೆ, ಪರಿಸರ ಸಮಿತಿ ಸಲ್ಲಿಸಿರುವ ವರದಿ ನಿಯಮಗಳ ಪ್ರಕಾರ ಇದೆ ಎಂದು ಹೇಳಿ ಸುಪ್ರೀಂ ಕೋರ್ಟ್ ಅದನ್ನು ಪುರಸ್ಕರಿಸಿದೆ ಮತ್ತು ಯೋಜನೆಗೆ ಪರಿಸರ ಅನುಮತಿಯನ್ನು ಸರಿಯಾದ ರೀತಿಯಲ್ಲಿ ನೀಡಲಾಗಿದೆ ಎಂದು ಹೇಳಿದೆ. ಭೂ ಬಳಕೆ ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸದ್ಯಕ್ಕೆ ಕಾಯ್ದಿರಿಸಿದೆ. ನಿರ್ಮಾಣವನ್ನು ಪ್ರಾರಂಭಿಸಲು, ಪರಂಪರೆ ಸಂರಕ್ಷಣಾ ಸಮಿತಿಯ ಅನುಮೋದನೆ ಸಹ ಪಡೆಯುವುದು ಆವಶ್ಯಕ ಎಂದು ನ್ಯಾಯಪೀಠ ಹೇಳಿದೆ.


COMMERCIAL BREAK
SCROLL TO CONTINUE READING

2:1 ಅನುಪಾತದಲ್ಲಿ ಸುಪ್ರೀಂ ಮಹತ್ವದ ತೀರ್ಪು
ಈ ಕುರಿತು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಜಸ್ಟಿಸ್ ಎ.ಎಸ್. ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಹಾಗೂ ಸಂಜೀವ್ ಖನ್ನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ತೀರ್ಪು ಪ್ರಕಟಿಸಿದ್ದು, 2:1 ಅನುಪಾತದಲ್ಲಿ ತನ್ನ ತೀರ್ಪನ್ನು ಸರ್ಕಾರದ ಪರ ನೀಡಿದೆ.  ಇದೇ ವೇಳೆ ಸೆಂಟ್ರಲ್ ವಿಸ್ಟಾ ಪರಿಯೋಜನೆಯ ಎಲ್ಲಾ ನಿರ್ಮಾಣ ಸ್ಥಳಗಳಲ್ಲಿ ಹೊಗೆ ಗೋಪುರಗಳನ್ನು ಹಾಗೂ ಆಂಟಿ-ಸ್ಮಾಗ್ ಗನ್ ಗಳನ್ನು ಸ್ಥಾಪಿಸಲು ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಯೋಜನೆಯನ್ನು ಸೆಪ್ಟೆಂಬರ್ 2019ರಲ್ಲಿ ಘೋಷಿಸಲಾಗಿತ್ತು. ಈ ಯೋಜನೆ ಸಂಸತ್ತಿನ ತ್ರಿಕೊಣಾಕಾರದ ನೂತನ ಕಟ್ಟಡವನ್ನು ಸಹ ಒಳಗೊಂಡಿದೆ. ಈ ನೂತನ ಕಟ್ಟಡ ದಲ್ಲಿ ಏಕಕಾಲಕ್ಕೆ ಲೋಕಸಭೆ ಹಾಗೂ ರಾಜ್ಯಸಭೆಯ 900 ರಿಂದ 1200 ಸದಸ್ಯರು ಕುಳಿತುಕೊಳ್ಳಬಹುದು. 


ಇದನ್ನು ಓದಿ- ನೂತನ ಸಂಸತ್ ಭವನ ಕಟ್ಟಡಕ್ಕೆ 'ಕರ್ನಾಟಕದ ಪುರೋಹಿತರಿಂದ ಭೂಮಿ ಪೂಜೆ' ನೆರವೇರಿಸಿದ ಪ್ರಧಾನಿ ಮೋದಿ


ಈ ಕಟ್ಟಡದ ನಿರ್ಮಾಣ ಕಾರ್ಯ ಆಗಸ್ಟ್ 2022 ರ ವೇಳೆಗೆ 75 ನೇ ಸ್ವಾತಂತ್ರ್ಯ ದಿನದಂದು ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದ್ದು, ಕಟ್ಟಡ ಕಾಮಗಾರಿಗೆ ಭರದ ಸಿದ್ಧತೆ ನಡೆಸಲಾಗಿದೆ.


ಪ್ರತಿ ವರ್ಷ ಸಾವಿರ ಕೋಟಿ ರೂ. ಉಳಿತಾಯದ ಗುರಿ
20 ಸಾವಿರ ಕೋಟಿ ರೂ.ಗಳಿಂದ ನಿರ್ಮಾಣಗೊಳ್ಳುತ್ತಿರುವ ಈ ಕಟ್ಟಡ ಹಣದ ದುರ್ಬಳಕೆ ಅಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಗೆ ಮನವರಿಕೆ ಮಾಡಿಕೊಟ್ಟಿದೆ. ಅಷ್ಟೇ ಅಲ್ಲ ಇದರಿಂದ ಉಳಿತಾಯವಾಗಲಿದ್ದು, ಪ್ರಸ್ತುತ 10 ಕಟ್ಟಡಗಳಲ್ಲಿ ನಡೆಯುತ್ತಿರುವ ಸಚಿವಾಲಯಗಳ ಬಾಡಿಗೆ ರೂಪದಲ್ಲಿ ನೀಡಲಾಗುತ್ತಿದೆ. ಈ ಕಟ್ಟಡ ನಿರ್ಮಾಣದಿಂದ ಸಚಿವಾಲಯಗಳ ನಡುವೆ ಇರುವ ಸಮನ್ವಯದ ಕೊರತೆ ಕೂಡ ದೂರಾಗಲಿದೆ ಎಂದು ಸರ್ಕಾರ ಹೇಳಿದೆ. 


ಇದನ್ನು ಓದಿ- New Parliament House: ಹೊಸ ಸಂಸತ್‌ ಕಟ್ಟಡಕ್ಕೆ ಇಂದು ಶಂಕು ಸ್ಥಾಪನೆ


ಏನಿದು ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್ ?
ಸೆಂಟ್ರಲ್ ವಿಸ್ಟಾದ ಮಾಸ್ಟರ್ ಪ್ಲ್ಯಾನ್ ಪ್ರಕಾರ, ಹಳೆಯ ವೃತ್ತಾಕಾರದ ಪಾರ್ಲಿಮೆಂಟ್ ಹೌಸ್ ಮುಂದೆ ಗಾಂಧೀಜಿಯ ಪ್ರತಿಮೆಯ ಹಿಂದೆ ಹೊಸ ತ್ರಿಕೋನಾಕಾರದ ಪಾರ್ಲಿಮೆಂಟ್ ಹೌಸ್ (New Parliament) ನಿರ್ಮಿಸಲಾಗುತ್ತಿದೆ. ಇದನ್ನು 13 ಎಕರೆ ಭೂಮಿಯಲ್ಲಿ ನಿರ್ಮಿಸಲಾಗುವುದು. ಈ ಭೂಮಿಯಲ್ಲಿ ಈಗ ಉದ್ಯಾನವನ, ತಾತ್ಕಾಲಿಕ ನಿರ್ಮಾಣ ಮತ್ತು ಪಾರ್ಕಿಂಗ್ ವ್ಯವಸ್ಥೆ ಇದೆ. ಹೊಸ ಸಂಸತ್ ಭವನದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಉಭಯ ಸದನಗಳಿಗೆ ತಲಾ ಒಂದು ಕಟ್ಟಡವನ್ನು ಹೊಂದಿರಲಿದೆ. ಆದರೆ ಕೇಂದ್ರ ಸಭಾಂಗಣವನ್ನು ನಿರ್ಮಿಸಲಾಗುವುದಿಲ್ಲ. ಇಡೀ ಯೋಜನೆಯ ಮೌಲ್ಯ 20 ಸಾವಿರ ಕೋಟಿ ರೂ. ಇರಲಿದೆ. ರಾಷ್ಟ್ರಪತಿ ಭವನ, ಪ್ರಸ್ತುತ ಇರುವ ಸಂಸತ್ ಭವನ, ಇಂಡಿಯಾ ಗೇಟ್ ಮತ್ತು ರಾಷ್ಟ್ರೀಯ ದಾಖಲೆಗಳ ಕಟ್ಟಡವನ್ನುಹಾಗೆಯೇ ಇರಿಸಲಾಗುವುದು.


ಹೊಸ ಸಂಸತ್ತಿನ ಆವಶ್ಯಕತೆ ಏನು?
ಈ ಕುರಿತು ಮಾರ್ಚ್ 2020 ರಲ್ಲಿ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದ ಸರ್ಕಾರ ಹಳೆ ಸಂಸತ್ ಭವನ ಮಿತಿಮೀರಿ ಬಳಕೆಯಾಗಿದೆ ಹಾಗೂ ಶಿಥಿಲವಾಗತೊಡಗಿದೆ. ಇದರ ಜೊತೆಗೆ 2026 ರಲ್ಲಿ ಲೋಕಸಭಾ ಸ್ಥಾನಗಳನ್ನು ಹೊಸದಾಗಿ ರಚಿಸುವ ಕಾಮಗಾರಿ ಕೂಡ ಶೆಡ್ಯೂಲ್ ಮಾಡಲಾಗಿದೆ. ಇದು ಪೂರ್ಣಗೊಂಡ ಬಳಿಕ ಸಂಸತ್ತಿನಲ್ಲಿ ಸದಸ್ಯರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಲಿದೆ. ಹೀಗಾಗಿ ಹಳೆ ಕಟ್ಟಡದಲ್ಲಿ ಸ್ಥಾನಗಳ ಕೊರತೆ ಎದುರಾಗಲಿದೆ.  ಸಂವಿಧಾನದ ಆರ್ಟಿಕಲ್ 81ರ ಪ್ರಕಾರ ದೇಶದ ಜನಗಣತಿಗೆ ಅನುಗುಣವಾಗಿ ಸದಸ್ಯರ ಸಂಖ್ಯೆಯಲ್ಲಿಯೂ ಕೂಡ ಬದಲಾವಣೆ ಮಾಡುವ ನಿಯಮವಿದೆ. ಆದರೆ, 1971ರ ನಂತರ್ ಈ ಕಾರ್ಯ ನಡೆಸಲಾಗಿಲ್ಲ. 2021ರಲ್ಲಿ ಸಂಸತ್ತಿನ ಕಟ್ಟಡ ನಿರ್ಮಾಣಗೊಂಡು 100 ವರ್ಷಗಳು ಪೂರ್ಣಗೊಳ್ಳಲಿವೆ ಎಂಬುದು ಇಲ್ಲಿ ಉಲ್ಲೇಖನೀಯ.


ಇದನ್ನು ಓದಿ- ಸಿದ್ಧವಾಗಲಿದೆ ನೂತನ ಸಂಸತ್ ಭವನ, ಸಂಸದರಿಗೆ ಸಿಗಲಿವೆ ಆಧುನಿಕ ಸೌಲಭ್ಯಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.