ನವದೆಹಲಿ: ಇತ್ತೀಚಿನ ದಿನಗಳಲ್ಲಿ, ಯಾವುದೇ ಕೆಲಸವನ್ನು ಮಾಡಲು ಆಧಾರ್ ಕಾರ್ಡ್(Aadhaar Card) ಪ್ರಮುಖ ದಾಖಲೆಯಾಗಿದೆ. ನೀವು ಬ್ಯಾಂಕ್ ಖಾತೆ ತೆರೆಯುವಾಗ ಆಗಲಿ ಅಥವಾ ಯಾವುದೇ ಸರ್ಕಾರಿ ಯೋಜನೆಯ ಲಾಭವನ್ನು ಪಡೆದುಕೊಳ್ಳುವಾಗ ಆಗಲಿ ಎಲ್ಲಾ ಕೆಲಸಗಳಿಗೆ ನೀವು ಆಧಾರ್ ಸಂಖ್ಯೆಯನ್ನು ಹೊಂದಿರಬೇಕು.  ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆಧಾರ್‌ನಲ್ಲಿ ಸರಿಯಾದ ಮೊಬೈಲ್ ಸಂಖ್ಯೆ ಇಲ್ಲದಿದ್ದರೆ, ನಿಮಗೆ ಸಮಸ್ಯೆಗಳಿರಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ಆಧಾರ್ ತಯಾರಿಸುವ ಸಂಸ್ಥೆ ಯುಐಡಿಎಐ(UIDAI)  ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ಹೊಸ ಮಾರ್ಗವನ್ನು ತಿಳಿಸಿದೆ.


UIDAI (Unique Identification Authority of India) ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಈ ಟ್ವೀಟ್ ಪ್ರಕಾರ, ನೀವು ಆಧಾರ್‌ನಲ್ಲಿ ನಿಮ್ಮ ಇತ್ತೀಚಿನ ಮೊಬೈಲ್ ಸಂಖ್ಯೆಯನ್ನು ಇನ್ನೂ ನವೀಕರಿಸದಿದ್ದರೆ, ಯಾವುದೇ ಡಾಕ್ಯುಮೆಂಟ್ ಇಲ್ಲದೆ ನೀವು ಅದನ್ನು ನವೀಕರಿಸಬಹುದು. ನಿಮ್ಮ ಆಧಾರ್ ಕಾರ್ಡ್ ತೆಗೆದುಕೊಂಡು ನೀವು ಹತ್ತಿರದ ಯಾವುದೇ ಆಧಾರ್ ಸೇವಾ ಕೇಂದ್ರಕ್ಕೆ ಹೋಗಿ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ವಿನಂತಿಯನ್ನು ನೀಡಬಹುದು.


COMMERCIAL BREAK
SCROLL TO CONTINUE READING

ಒಟಿಪಿ ಲಭ್ಯವಿರುವುದಿಲ್ಲ:
ಯಾವುದೇ ಪರಿಶೀಲನಾ ಪ್ರಕ್ರಿಯೆಗೆ ನೀವು ಆಧಾರ್ ಸಂಖ್ಯೆಯನ್ನು ಬಳಸಿದರೆ ನಿಮ್ಮ ಸಂಖ್ಯೆಯಲ್ಲಿ ಒಟಿಪಿ ಬರುತ್ತದೆ. ಈ ಒಟಿಪಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯಲ್ಲಿ ಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ತಪ್ಪು ಅಥವಾ ಹಳೆಯ ಸಂಖ್ಯೆ ಬಳಸುತಿದ್ದರೆ ನಿಮಗೆ ಒಟಿಪಿ ಪಡೆಯಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ನಿಮ್ಮ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಇದರೊಂದಿಗೆ, ನಿಮ್ಮ ಆಧಾರ್ ಅನ್ನು ಯಾವುದೇ ಡಾಕ್ಯುಮೆಂಟ್‌ಗೆ ಲಿಂಕ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ.


ಸಂಖ್ಯೆ ಬದಲಾಯಿಸಲು 50 ರೂ. ಖರ್ಚು:
ಇದರೊಂದಿಗೆ, ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ನೀವು ಆಧಾರ್ ಅನ್ನು ಲಿಂಕ್ ಮಾಡಲು ಬಯಸಿದರೆ, ನೀವು ನಿಮ್ಮ ಹತ್ತಿರವಿರುವ ಆಧಾರ್ ಸೇವಾ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಇಲ್ಲಿ ನೀವು 50 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.


ಈ ಸಂಖ್ಯೆಯಲ್ಲಿ ಸಂಪರ್ಕಿಸಬಹುದು:
ಇದಲ್ಲದೆ, ನಿಮಗೆ ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ನೀವು ಟೋಲ್ ಫ್ರೀ ಸಂಖ್ಯೆ 1947 ಗೆ ಕರೆ ಮಾಡಬಹುದು. ಇದಲ್ಲದೆ, ನೀವು help@uidai.gov.in ಗೆ ಇ-ಮೇಲ್ ಮಾಡಬಹುದು.