ನವದೆಹಲಿ: Cheating Case - ಮಾನವ ಹಕ್ಕುಗಳ ಕಾರ್ಯಕರ್ತ ಪ್ರತಾಪ್ ಚಂದ್ರ,  ಶನಿವಾರ ಲಖನೌನ ACJM-5 ಶಾಂತನು ತ್ಯಾಗಿ ಅವರ ನ್ಯಾಯಾಲಯದಲ್ಲಿ 156-3ರ ಅಡಿ ವಂಚನೆಯ ಪ್ರಕರಣ ದಾಖಲಿಸಿದ್ದಾರೆ. ತಮ್ಮ ಆರೋಪಪಟ್ಟಿಯಲ್ಲಿ ಅವರು ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮಾಲೀಕರಾಗಿರುವ ಅದರ್ ಪೂನಾವಾಲಾ (Adar Poonawalla), ಡ್ರಗ್ ಕಂಟ್ರೋಲ್ ಡೈರೆಕ್ಟರೇಟ್, ಆರೋಗ್ಯ ಸಚಿವರು, ICMR ಹಾಗೂ WHO ಹೆಸರುಗಳನ್ನು ಉಲ್ಲೇಖಿಸಿದ್ದಾರೆ.


COMMERCIAL BREAK
SCROLL TO CONTINUE READING

ಪ್ರತಾಪ್ ಚಂದ್ರ ಅವರು ಮೇ 30 ರಂದು ಆಶಿಯಾನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು, ಆದರೆ, ಪ್ರಕರಣವನ್ನು ದಾಖಲಿಸಲು ಪೊಲೀಸರು ಮೀನಾಮೇಷ ಎಣಿಸಿದ  ಬಳಿಕ ಅವರು,  ಲಕ್ನೋ ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ದೂರು ಕಳುಹಿಸಿ ಪ್ರಕರಣ ದಾಖಲಿಸುವಂತೆ ಕೋರಿದ್ದರು. ಆದರೆ, ಕೊನೆಗೆ ನ್ಯಾಯಾಲಯಕ್ಕೆ ಮೊರೆ ಹೋದ ಅವರು ಪ್ರಕರಣವನ್ನು ದಾಖಲಿಸಿದ್ದಾರೆ.


ಪ್ರತಾಪ್ ಚಂದ್ರ ಅಭಿಪ್ರಾಯ ಏನು?
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮೂಲಕ ಉತ್ಪಾದಿಸಲಾಗಿರುವ ಹಾಗೂ ಸರ್ಕಾರಿ ಸಂಸ್ಥೆಗಳು, ICMR, ಆರೋಗ್ಯ ಸಚಿವಾಲಯ, ರಾಷ್ಟ್ರೀಯ ಆರೋಗ್ಯ ಮಿಶನ್ ನಿಂದ ಮಾನ್ಯತೆ ಪಡೆದ ಹಾಗೂ ನೀಡಲಾಗುತ್ತಿರುವ ಕೋವಿಶೀಲ್ಡ್ ವ್ಯಾಕ್ಸಿನ್ ಹಾಗೂ ವಿಭಿನ್ನ ವೃತ್ತಪತ್ರಿಕೆಗಳಲ್ಲಿ, ದೂರದರ್ಶನದಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳುವ ಕುರಿತು ನೀಡಲಾಗಿರುವ ಸರ್ಕಾರಿ ಜಾಹೀರಾತುಗಳಿಂದ ಪ್ರೇರಿತರಾಗಿ ತಾವು ಏಪ್ರಿಲ್ 8, 2021ರಂದು ಆಶಿಯಾನಾ  ಠಾಣೆಯ ವ್ಯಾಪ್ತಿಯಲ್ಲಿ ಬರುವ ರುಚಿಖಂಡನಲ್ಲಿರುವ ಗೋವಿಂದ್ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ನ ಮೊದಲ ಪ್ರಮಾಣ ತೆಗೆದುಕೊಂಡಿರುವುದಾಗಿ ಪ್ರತಾಪ್ ಚಂದ್ರ ಹೇಳಿದ್ದಾರೆ. ನಂತರ 28 ದಿನಗಳ ಬಳಿಕ ವ್ಯಾಕ್ಸಿನ್ ನ ಎರಡನೇ ಪ್ರಮಾಣ ಹಾಕಿಸಿಕೊಳ್ಳಲು ದಿನಾಂಕ ಪ್ರಕಟಿಸಲಾಯಿತು. 28 ದಿನಗಳ ನಂತರ ಎರಡನೇ ಪ್ರಮಾಣವನ್ನು 6 ವಾರಗಳ ಬಳಿಕ ಹಾಕಲಾಗುವುದು ಎನ್ನಲಾಯಿತು. ಆದರೆ, ನಂತರ ಸರ್ಕಾರ 6 ವಾರಗಳ ಅವಧಿಯನ್ನು 12 ವಾರಗಳಿಗೆ ವಿಸ್ತರಿಸಿತು ಎಂದು ಚಂದ್ರ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.


ವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕ ಆರೋಗ್ಯ ತಮ್ಮ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಹಾಗೂ  ಮೇ 21, 2021 ರಂದು ಟಿವಿ ಚಾನೆಲ್ ಗಳ ಮೇಲೆ ತಾವು ICMR ನಡೆಸಿದ ಸುದ್ಧಿಗೋಷ್ಠಿಯನ್ನು  ವಿಕ್ಷೀಸಿದೆ ಮತ್ತು ಸುದ್ದಿಗೋಷ್ಠಿ ಕುರಿತು ವೃತ್ತಪತ್ರಿಕೆಗಳಲ್ಲಿಯೂ ಕೂಡ ಓದಿದೆ ಎಂದು ಚಂದ್ರ ಹೇಳಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ICMR ಡೈರೆಕ್ಟರ್ ಜನರಲ್ ಆಗಿರುವ ಬಲರಾಮ್ ಭಾರ್ಗವ್ ಅವರು, “With the very first dose of Covishield vaccine, “good levels” of antibodies are produced in the body, but with Covaxin, adequate immune response is triggered only after the second dose.”ಎಂದು ಹೇಳಿದ್ದರು. ಅಂದರೆ, ಕೋವಿಶೀಲ್ಡ್ ವ್ಯಾಕ್ಸೀನ್ ನ ಮೊದಲ ಪ್ರಮಾಣ ಹಾಕಿಸಿಕೊಂಡ ಬಳಿಕ ಉತ್ತಮ ಗುಣಮಟ್ಟದ ಆಂಟಿಬಾಡಿ  ತಯಾರಿಸುತ್ತದೆ ಎಂದರ್ಥ ಎಂದು ಚಂದ್ರ ಹೇಳಿದ್ದಾರೆ.  ಹೀಗಾಗಿ ತಾವು ಮೇ 25, 2021ರಂದು ಸರ್ಕಾರದಿಂದ ಮಾನ್ಯತೆ ಪಡೆದ ಲ್ಯಾಬ್ ಆಗಿರುವ ಥೈರೋಕೆಯರ್ ನಲ್ಲಿ ತಮ್ಮ COVID ANTIBODY GT ಟೆಸ್ಟ್ ನಡೆಸಿರುವುದಾಗಿ ಹೇಳಿದ್ದಾರೆ. ತಮ್ಮ ಶರೀರದಲ್ಲಿ ಕೋವಿಶೀಲ್ಡ್ ವ್ಯಾಕ್ಸಿನ್ ನಿಂದ ಆಂಟಿ ಬಾಡಿಗಳು ನಿರ್ಮಾಣಗೊಂಡಿವೆಯೋ ಅಥವಾ ಇಲ್ಲವೋ ಪರೀಕ್ಷಿಸುವ ಸಲುವಾಗಿ ತಾವು ಈ ಪರೀಕ್ಷೆ ಕೈಗೊಂಡಿರುವುದಾಗಿ ಚಂದ್ರ ಹೇಳಿದ್ದಾರೆ. ಮೇ 27, 2021 ರಂದು ತಮ್ಮ ವರದಿ ಬಂದಿದ್ದು, ವರದಿ ನಕಾರಾತ್ಮಕವಾಗಿದ್ದು, ದೇಹದಲ್ಲಿ ಯಾವುದೇ ಆಂಟಿಬಾಡಿ ನಿರ್ಮಾಣಗೊಳ್ಳದೆ, ಪ್ಲೇಟ್ ಲೆಟ್ ಗಳ ಸಂಖ್ಯೆ ಕೂಡ 3 ಲಕ್ಷದಿಂದ ಕುಸಿತ ಕಂಡು 1.5 ಲಕ್ಷಕ್ಕೆ ಬಂದು ತಲುಪಿವೆ ಎಂದಿದ್ದಾರೆ. ಇದರಿಂದ ತಮಗೆ ವಂಚನೆಯಾಗಿದ್ದು, ಜೀವಕ್ಕೆ ಅಪಾಯ ಕೂಡ ಎದುರಾಗಿದೆ ಎಂದು ಪ್ರತಾಪ್ ಚಂದ್ರ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.


ಇದನ್ನೂ ಓದಿ- Monkeypox: ಕೊರೊನಾ ಪ್ರಕೋಪದ ನಡುವೆ ತಲೆ ಎತ್ತುತ್ತಿದೆ ಈ ಹೊಸ ಕಾಯಿಲೆ, 100ರಲ್ಲಿ 10 ಜನರ ಸಾವಿನ ಅಪಾಯ


ವ್ಯಾಕ್ಸಿನ್  ಕುರಿತು ಹೇಳಿಕೆ ನೀಡಿದ್ದ ICMR, ಆರೋಗ್ಯ ವಿಭಾಗಗಳು, ಈ ಆಂಟಿಬಾಡಿ ವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕ ದೇಹದಲ್ಲಿ ಆಂಟಿಬಾಡಿಗಳು ನಿರ್ಮಾಣಗೊಂಡು ವರದಿ ಪಾಸಿಟಿವ್ ಬರಲಿದೆ. ಕೆಲವರಲ್ಲಿ ಇದು ಸೀಮಿತ ಪ್ರಮಾಣದಲ್ಲಿ ಆಂಟಿ ಬಾಡಿ ಉತ್ಪತ್ತಿಸಿ , ಇನ್ನೂ ಕೆಲವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಸಿ ಕೊರೊನಾದಿಂದ ರಕ್ಷಣೆ ಒದಗಿಸಲು ಇದು ರಕ್ಷಣಾ ಕವಚದಂತೆ ಕಾರ್ಯನಿರ್ವಹಿಸಲಿದೆ ಎಂದಿದ್ದವು. ಆದರೆ , ತಮ್ಮ ಪ್ರಕರಣದಲ್ಲಿ ವರದಿ ನೆಗೆಟಿವ್ ಬಂದಿದೆ.  ಅಂದರೆ, ಆಂಟಿಬಾಡಿಗಳು ನಿರ್ಮಾಣಗೊಳ್ಳದೆ, ಪ್ಲೇಟ್ ಲೆಟ್ ಗಳ ಸಂಖ್ಯೆ ಕೂಡ ಅರ್ಧಕ್ಕೆ ಇಳಿಕೆಯಾಗಿದೆ. ಇದರಿಂದ ಸೋಂಕಿನ ಅಪಾಯ ಕೂಡ ಹೆಚ್ಚಾಗಿದೆ. ತಮ್ಮ ಸಾವು ಯಾವುದೇ ಸಮಯದಲ್ಲಿ ಸಂಭವಿಸುವ ಸಾಧ್ಯತೆ ಇದೆ. ಇದು ತಮ್ಮೊಂದಿಗೆ ನಡೆದ ದೊಡ್ಡ ವಂಚನೆಯಾಗಿದ್ದು, ತಮ್ಮ ವಿರುದ್ಧ ಹತ್ಯೆಯ ಪ್ರಯತ್ನ ಇದಾಗಿದೆ ಎಂದು ತಾವು ಭಾವಿಸುವುದಾಗಿ ಪ್ರತಾಪ್ ಚಂದ್ರ ಹೇಳಿದ್ದಾರೆ.


ಇದನ್ನೂ ಓದಿ- Corona Pandemic ಕುರಿತು ಚೀನಾಗೆ ಮೊದಲೇ ಗೊತ್ತಿತ್ತು! ಭಾರತೀಯ ವೈರಾಲಾಜಿಸ್ಟ್ ಗಂಭೀರ ಹೇಳಿಕೆ ಇದು


ಒಂದು ವಿಶ್ವಾಸಾರ್ಹ ಕಂಪನಿ, ಸಂಸ್ಥೆ, ಪದಾಧಿಕಾರಿಗಳ ಮೂಲಕ ತಮ್ಮ ವಿರುದ್ಧ ನಡೆದ ವಂಚನೆ ಇದಾಗಿದ್ದು, ಇದರಿಂದ ತಮ್ಮ ಪ್ರಾಣಕೂಡ ಹೋಗಬಹುದು. ಏಕೆಂದರೆ ವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕ ಆಂಟಿಬಾಡಿ ನಿರ್ಮಾಣಗೊಳ್ಳದೆ ಹೋದಲ್ಲಿ ಏನಾಗಲಿದೆ? ಮತ್ತೆ ತಮಗೆ ವ್ಯಾಕ್ಸಿನ್ ಹಾಕಲಾಗುವುದೆ? ಅಥವಾ ತಾವು ಶಾಶ್ವತವಾಗಿ ಮನೆಯಲ್ಲಿಯೇ ಇರಬೇಕೇ?  ಏಕೆಂದರೆ ಇದರಿಂದ ಸಮಾಜಕ್ಕೂ ಕೂಡ ಅಪಾಯವಿದೆ ಎಂದಿದ್ದಾರೆ.  ಮುಂದುವರೆದು ಉಲ್ಲೇಖಿಸಿರುವ ಅವರುಇದು ಸಮಯಕ್ಕೆ ಸರಿಯಾಗಿ ಕಾರ್ ನಲ್ಲಿರುವ ಏರ್ ಬ್ಯಾಗ್ ತೆರೆಯದೆ ಹೋದ ಪ್ರಕರಣ ಅಥವಾ ಸಬ್ ಸ್ಟ್ಯಾಂಡರ್ಡ್ ಬುಲೆಟ್ ಪ್ರೂಫ್ ಜ್ಯಾಕೆಟ್ ಧರಿಸಿ ಅಪಾಯದಲ್ಲಿ ಸಿಲುಕಿರುವ  ಪ್ರಕರಣದಂತಿದೆ. ಎಕೆಂದರೆ ತಮ್ಮ ಪ್ರಕರಣದಲ್ಲಿ ತಾವು ನಕಲಿ ಔಷಧಿ ಪಡೆದು ಅಪಾಯದಲ್ಲಿರುವುದಾಗಿ ಚಂದ್ರ ಹೇಳಿದ್ದಾರೆ.


ಪ್ರತಾಪ್ ಚಂದ್ರ ಅವರ ವತಿಯಿಂದ ವಕೀಲರಾಗಿರುವ ಶ್ರೀ ಅನೀಲ್ ಸಚಾನ್ ಹಾಗೂ ಶ್ರೀ ವಿಷ್ಣು ಅವಸ್ಥಿ ದಾಖಲಿಸಿದ್ದಾರೆ. 


ಇದನ್ನೂ ಓದಿ-Viral News:ಏಕಕಾಲಕ್ಕೆ 10 ಮಕ್ಕಳನ್ನು ಹೆತ್ತ ಮಹಾತಾಯಿ, ಈ ದಾಖಲೆ ನಿರ್ಮಾಣಗೊಂಡಿದ್ದು ಎಲ್ಲಿ ಗೊತ್ತಾ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.