ನವದೆಹಲಿ: ಭಾರತದ ಗಡಿಯುದ್ದಕ್ಕೂ ಚೀನಾ ಮೂಲಸೌಕರ್ಯ ಅಭಿವೃದ್ಧಿ ಪಡಿಸುತ್ತಿರುವುದು ಹೊಸತೇನಲ್ಲ. ಟೆಬೆಟ್ ನಲ್ಲಿ ವಿಶ್ವದ ಅತಿದೊಡ್ಡ ಕ್ಲೌಡ್ ಕಂಪ್ಯೂಟಿಂಗ್ ಸೆಂಟರ್ ನಿಂದ ಹಿಡಿದು ಅತ್ಯಾಧುನಿಕ ರಸ್ತೆಗಳನ್ನೂ ಚೀನಾ ನಿರ್ಮಿಸುತ್ತಿದೆ. ಈಗ ಅರುಣಾಚಲ ಸಮೀಪದಲ್ಲೇ ಚೀನಾ (China) ರೈಲನ್ನು ಚಲಿಸಲು ಸಿದ್ಧತೆ ನಡೆದಿದೆ.


COMMERCIAL BREAK
SCROLL TO CONTINUE READING

ಈ ವರ್ಷದ ಆರಂಭದಿಂದಲೂ ಭಾರತ-ಚೀನಾ (India-China) ನಡುವೆ ಗಡಿಯಲ್ಲಿ ಉದ್ವಿಗ್ನತೆ ಮುಂದುವರಿದಿದೆ. ಮೇ-ಜೂನ್‌ನಲ್ಲಿ ಉಭಯ ದೇಶಗಳ ಸೇನೆಗಳ ನಡುವಿನ ಗಲ್ವಾನ್ ಘರ್ಷಣೆ ಬಳಿಕ  ಪರಿಸ್ಥಿತಿ   ಇನ್ನಷ್ಟು ಬಿಗಡಾಯಿಸಿದೆ. ಈ ಮಧ್ಯೆ ಚೀನಾ ಗಡಿಯಲ್ಲಿ ಭಾರತದ ವಿರುದ್ಧ ಮತ್ತೊಂದು ಪಿತೂರಿ ರೂಪಿಸುತ್ತಿದೆ.


ಚೀನಾ ಈ ಸಂಚು ರೂಪಿಸುತ್ತಿರುವುದು ಅರುಣಾಚಲ ಪ್ರದೇಶದಲ್ಲಿ.  ಅರುಣಾಚಲ ಪ್ರದೇಶ (Arunachal Pradesh) ಕ್ಕೆ ಹೊಂದಿಕೊಂಡಂತೆ, ಭಾರತದ ಗಡಿಯ ಅತಿ ಸಮೀಪದವರೆಗೂ  ರೈಲ್ವೆ ಹಳಿ ಹಾಕುವ ಯೋಜನೆ ರೂಪಿಸುತ್ತಿದೆ ಚೀನಾ. ಇದರ ಹಿಂದಿನ  ಉದ್ದೇಶ, ಒಂದು ವೇಳೆ ಯುದ್ಧ ಸನ್ನಿವೇಶ ಉಂಟಾದರೆ,   ಈ ರೈಲ್ವೆ ಹಳಿಯ ಮೂಲಕ ಪಿಎಲ್ ಎ (PLA) ಅತಿ ಕ್ಷಿಪ್ರಗತಿಯಲ್ಲಿ ಭಾರತದ ಗಡಿ ತಲುಪುತ್ತದೆ. ಹಾಗಾಗಿ ಭಾರತದ ವಿರುದ್ಧದ ಒಂದು ಸಮರ ವ್ಯೂಹವಾಗಿ ಚೀನಾ ಈ ರೈಲ್ವೆ ಹಳಿಗಳನ್ನು ಅಭಿವೃದ್ದಿ ಪಡಿಸುತ್ತಿದೆ. 


ಎಲ್‌ಎಸಿಯಲ್ಲಿ T-90 ಟ್ಯಾಂಕ್‌ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ನಿಯೋಜಿಸಿದ ಭಾರತ


ಭಾರತ ಮತ್ತು ಚೀನಾ ನಡುವೆ ಲಡಾಕ್ ವಿಚಾರದಲ್ಲಿ ವಿವಾದ ಏರ್ಪಟ್ಟಿರುವ ನಡುವೆಯೇ, ಚೀನಾ, ಅರುಣಾಚಲ ಪ್ರದೇಶದ ಗಡಿಯುದ್ದಕ್ಕೂ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತಿದೆ. ಲಡಾಕ್ ಗೆ ನಿಕಟವಾಗಿರುವ ಟಿಬೇಟ್ ನಲ್ಲಿ ಚೀನಾ ರೈಲ್ವೆ (Train) ಲೈನ್ ಗಳನ್ನು ಹಾಕುತ್ತಿದೆ. ಈ ರೈಲ್ವೇ ಹಳಿ ಅರುಣಾಚಲ ಪ್ರದೇಶದ ಗಡಿಯ ಸಮೀಪದಲ್ಲೇ ಹಾದುಹೋಗುತ್ತದೆ.  ಅಂದರೆ, ಭಾರತದ ಗಡಿಗೆ ಹೊಂದಿಕೊಂಡಂತೆ ರೈಲು ಓಡಿಸಲು ಸಜ್ಜಾಗಿದೆ ಡ್ರ್ಯಾಗನ್ ಚೀನಾ.


ಸಿಚುವಾನ್ ಪ್ರಾಂತ್ಯದ ಯಾನ್ ಮತ್ತು ಟಿಬೇಟಿನ (Tibet) ಲಿಂಜಿ ನಡುವೆ ಸಮರತಂತ್ರಕ್ಕೆ ಪೂರಕವಾಗಿರುವ ಮಹತ್ವದ  ಸಿಚುವಾನ್ – ಟಿಬೇಟ್ ರೈಲ್ವೆ ಮಾರ್ಗ ನಿರ್ಮಿಸುವ ತಯಾರಿಯಲ್ಲಿದೆ ಚೀನಾ. ಚೀನಾ ಅಧಿಕೃತ ಮಾಧ್ಯಮಗಳೇ ಈ ವಿಷಯ ತಿಳಿಸಿವೆ. ಲಿಂಜಿಯನ್ನು ನಯಿಂಗಶಿ ಎಂದೂ ಕರೆಯಲಾಗುತ್ತದೆ.  ಇದು ಅರುಣಾಚಲ ಪ್ರದೇಶದ ಗಡಿಗೆ ಸಮೀಪದಲ್ಲಿದೆ. ಲಿಂಜಿಯಲ್ಲಿ ವಿಮಾನ ನಿಲ್ದಾಣವಿದೆ. ಹಿಮಾಲಯದುದ್ದಕ್ಕೂ ನಿರ್ಮಿಸಲಾಗಿರುವ ಐದು ವಿಮಾನ ನಿಲ್ದಾಣಗಳ ಪೈಕಿ ಲಿಂಜಿ ವಿಮಾನ ನಿಲ್ದಾಣ ಕೂಡಾ ಒಂದಾಗಿದೆ. 


ಲಡಾಖ್‌ನಲ್ಲಿ ಭಾರತೀಯ ಸೇನೆಯ ಪರಾಕ್ರಮ, 6 ಹೊಸ ಶಿಖರಗಳು ವಶಕ್ಕೆ


 ಈ ರೈಲ್ವೆ ಹಳಿ ನಿರ್ಮಿಸಬೇಕಾದರೆ, ಇಲ್ಲಿ ಎರಡು ಸುರಂಗ ಮತ್ತು ಒಂದು ಸೇತುವೆ ನಿರ್ಮಿಸಬೇಕಾಗಿದೆ. ಅದಕ್ಕಾಗಿ ವಿದ್ಯುತ್  ಪೂರೈಕೆಗಾಗಿ ಚೀನಾ ಟೆಂಡರ್ ಪ್ರಕಟಿಸಿದೆ.  ಸದ್ಯದಲ್ಲೇ ಇಲ್ಲಿ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂಬುದರ ಸಂಕೇತ ನೀಡುತ್ತಿದೆ ಈ ಟೆಂಡರ್ ಪ್ರಕಟಣೆ. 


ಸರಕಾರಿ ನೇತೃತ್ವದ ಚೀನಾ ನ್ಯೂಸ್ ಪ್ರಕಾರ ಸಿಂಘಾಯಿ – ಟಿಬೆಟ್ ರೈಲ್ವೆ ಮಾರ್ಗದ ಬಳಿಕ ಸಿಚುವಾನ್ – ಟಿಬೆಟ್ ರೈಲ್ವೆ ಮಾರ್ಗ ಆರಂಭವಾಗಲಿದೆ. 
ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (BRI) ಪ್ರಕಾರ ಚೀನಾ ಹೊಸ ಸಿಲ್ಕ್ ಮಾರ್ಗ ನಿರ್ಮಿಸುವ ಕಾರ್ಯ ಮಾಡುತ್ತಿದೆ.  ಇದರ ಪ್ರಕಾರ ಚೀನಾ ಮೂಲಸೌಕರ್ಯ ವೃದ್ದಿಗಾಗಿ ಹಲವು ದೇಶಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.  ಪಾಕಿಸ್ತಾನದೊಂದಿಗೆ ಸೇರಿ ನಿರ್ಮಿಸುತ್ತಿರುವ ಸಿಪೆಕ್ (CPEC) ರೋಡ್ ಕೂಡಾ ಈ ಸಿಲ್ಕ್ ಮಾರ್ಗದ ಒಂದು ಅಂಗವಾಗಿದೆ. 


ಪ್ರಸ್ತುತ ಟಿಬೇಟ್ ನಲ್ಲಿ ಮೂಲಸೌಕರ್ಯಕ್ಕಾಗಿ ಚೀನಾ 146 ಬಿಲಿಯನ್ ಕೋಟಿ ಡಾಲರ್ ವೆಚ್ಚ ಮಾಡುತ್ತಿದೆ. ಈಗಾಗಲೇ ಇರುವ ಯೋಜನೆಗಳ ಪೂರ್ಣಗೊಳಿಸುವುದು ಸೇರಿದಂತೆ, ಹೊಸ ಯೋಜನೆಗಳ ಆರಂಭಕ್ಕೂ ಈ ಮೊತ್ತವನ್ನು ಬಳಸಲಾಗುವುದು. ನೇಪಾಲ – ಚೀನಾ ನಡುವಣ ರೈಲ್ವೆ ಲಿಂಕ್ ಪೂರ್ಣಗೊಳಿಸುವುದು ಕೂಡಾ ಈ ಯೋಜನೆಯಲ್ಲಿ ಸೇರಿದೆ.  ಟಿಬೇಟ್ ಮತ್ತು ನೇಪಾಳ ನಡುವೆ ಕಠ್ಮಂಡು ಮತ್ತು ಶಿಗಾತ್ಸೆಯನ್ನು ಜೋಡಿಸುವ  ಈ ರೈಲ್ವೆ ಮಾರ್ಗದ ಮೇಲೂ ಕೆಲಸ ನಡೆಯುತ್ತಿದೆ.