ಅಹಮದಾಬಾದ್: ದೇಶದಲ್ಲಿ ಹೊಸ ಕರೋನಾವೈರಸ್ ಪ್ರಕರಣಗಳು ಕಡಿಮೆಯಾಗಿದ್ದರೂ ಈ ಕಾಯಿಲೆ ಇನ್ನೂ ಕೊನೆಗೊಂಡಿಲ್ಲ. ಔಷಧಿ ಬರುವವರೆಗೆ ಈ ವೈರಸ್ ಅನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿರಂತರವಾಗಿ ಕರೋನಾವನ್ನು ಲಘುವಾಗಿ ತೆಗೆದುಕೊಳ್ಳಬಾರದು ಎಂದು ಜನರಿಗೆ ಮನವಿ ಮಾಡುತ್ತಲೇ ಇದ್ದಾರೆ. ಆದರೆ ಜನರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದೇ ಆತಂಕಕಾರಿ ವಿಷಯ.


COMMERCIAL BREAK
SCROLL TO CONTINUE READING

ಸರ್ಕಾರದ ಹಲವು ಪ್ರಯತ್ನಗಳ ಹೊರತಾಗಿಯೂ, ಜನರು ಕರೋನಾ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ರಾಜ್ಯ ಸರ್ಕಾರಗಳು ತಮ್ಮ ಮಟ್ಟದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿವೆ. ನಿನ್ನೆಯಷ್ಟೇ ದೆಹಲಿ ಸರ್ಕಾರ ಮಾಸ್ಕ್ (Mask) ಧರಿಸದಿದ್ದರೆ 2000 ರೂ. ದಂಡ ವಿಧಿಸುವುದಾಗಿ ಘೋಷಿಸಿತ್ತು. ಈ ಮಧ್ಯೆ ಅಹಮದಾಬಾದ್‌ನಲ್ಲಿ ಕರ್ಫ್ಯೂ ವಿಧಿಸಲಾಗಿದೆ.


ವಿಜ್ಞಾನಿಗಳಿಗೂ ಆಶ್ಚರ್ಯ ಉಂಟುಮಾಡಿದ ಮೂರು ಮಕ್ಕಳ ಕರೋನಾ ಕಥೆ


ಅಹಮದಾಬಾದ್‌ನಲ್ಲಿ ಕರ್ಫ್ಯೂ:
ಹೆಚ್ಚುತ್ತಿರುವ ಕರೋನಾವೈರಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಅಹಮದಾಬಾದ್‌ನಲ್ಲಿ ಕರ್ಫ್ಯೂ ವಿಧಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ಇಲ್ಲಿ ಕರ್ಫ್ಯೂ (Curfew) ವಿಧಿಸಲಾಗಿದೆ. ಶುಕ್ರವಾರದಿಂದ ಕರ್ಫ್ಯೂ ಜಾರಿಗೆ ಬರಲಿದ್ದು ಅನಿರ್ದಿಷ್ಟ ಅವಧಿಯವರೆಗೆ ಮುಂದುವರೆಯಲಿದೆ ಎಂದು ಹೇಳಲಾಗಿದೆ. ಈ ವೇಳೆ ನಾಗರೀಕರು ಮನೆಯಲ್ಲಿಯೇ ಇದ್ದು ಸಹಕರಿಸಬೇಕು ಎಂದು ಸ್ಥಳೀಯ ಆಡಳಿತ ಮನವಿ ಮಾಡಿದೆ. ಅಹಮದಾಬಾದ್‌ನಲ್ಲಿ ಈವರೆಗೆ ಒಟ್ಟು 46,022 ಕರೋನಾ ಪ್ರಕರಣಗಳು ದಾಖಲಾಗಿವೆ.


ಪ್ರತಿಯೊಬ್ಬ ಭಾರತೀಯನಿಗೂ ಲಸಿಕೆ ಹಾಕಲು 2024 ರವರೆಗೆ ಕಾಯಬೇಕಂತೆ...!


ಮುಂಬೈನಲ್ಲಿ ಕರೋನಾದ ಎರಡನೇ ತರಂಗ:
ಮತ್ತೊಂದೆಡೆ ದೇಶದ ಆರ್ಥಿಕ ರಾಜಧಾನಿ ಮುಂಬೈ (Mumbai) ಎರಡನೇ ತರಂಗದ ಕರೋನಾವೈರಸ್ ಬೆದರಿಕೆಯನ್ನು ಎದುರಿಸುತ್ತಿದೆ. ಹೊಸ ವರ್ಷದಿಂದ ವಾಣಿಜ್ಯ ನಗರಿಯಲ್ಲಿ ಎರಡನೇ ತರಂಗದ ಕರೋನಾ ಬರಬಹುದೆಂಬ ಆತಂಕವನ್ನು ಬಿಎಂಸಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮುಂಬೈನ ಗಾರ್ಡಿಯನ್ ಸಚಿವ ಆದಿತ್ಯ ಠಾಕ್ರೆ ಬಿಎಂಸಿ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ ಅದನ್ನು ಎದುರಿಸಲು ಸಂಪೂರ್ಣ ಸಿದ್ಧರಾಗಿರಬೇಕು ಎಂದು ಹೇಳಿದರು.


ಕರೋನಾ ನಿಯಂತ್ರಣಕ್ಕೆ ದಂಡ ಪ್ರಯೋಗ: ದೆಹಲಿ ಸರ್ಕಾರದ ಕಠಿಣ ನಿರ್ಧಾರ


ದೆಹಲಿಯಲ್ಲಿ ಲಾಕ್‌ಡೌನ್‌:
ದೀಪಾವಳಿಯ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೊಸ ಕರೋನಾ ಪ್ರಕರಣಗಳು ಶೀಘ್ರವಾಗಿ ಹೆಚ್ಚಾಗಿದೆ. ವಿಶೇಷವೆಂದರೆ ಕರೋನಾ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ದೆಹಲಿಯಲ್ಲಿ ಮತ್ತೊಮ್ಮೆ ಲಾಕ್‌ಡೌನ್‌ ಜಾರಿಗೆ ತರಲು ಸರ್ಕಾರ ಚಿಂತಿಸುತ್ತಿದೆ. ದೆಹಲಿಯಲ್ಲಿ ಭಾಗಶಃ ಲಾಕ್‌ಡೌನ್‌ (Lockdown) ವಿಧಿಸಲು ಅನುಮತಿ ಕೋರಿ ಸಿಎಂ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ.