ನವದೆಹಲಿ: ಕರೋನಾ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದ ನಂತರ ಲಸಿಕೆ ದಾಸ್ತಾನು ಉಳಿಸಿಕೊಳ್ಳುವುದು ಈಗ ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ. ಇದರಿಂದ ಜನರು ಸರಿಯಾದ ಸಮಯದಲ್ಲಿ 2 ಡೋಸ್ ಲಸಿಕೆ ಪಡೆಯಬಹುದು. ಈ ಸಂಚಿಕೆಯಲ್ಲಿ ಯುಕೆ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು (Britain Corona Vaccine Guidelines) ಬಿಡುಗಡೆ ಮಾಡಿದೆ, ಅದು ಈಗ ಚರ್ಚೆಯ ಕೇಂದ್ರವಾಗಿದೆ.


COMMERCIAL BREAK
SCROLL TO CONTINUE READING

ಈ ಮಾರ್ಗಸೂಚಿಯ ಪ್ರಕಾರ ಒಬ್ಬ ವ್ಯಕ್ತಿಯು ಒಂದು ಕಂಪನಿಯಿಂದ ಮೊದಲ ಡೋಸ್  ಕರೋನಾ ಲಸಿಕೆ (Corona Vaccine) ಯನ್ನು ಪಡೆದಿದ್ದರೆ ಮತ್ತು ಆ ಕಂಪನಿಯ ಲಸಿಕೆಯ ಸಂಗ್ರಹವು ಎರಡನೇ ಡೋಸ್ ಸಮಯದಲ್ಲಿ ಖಾಲಿಯಾಗಿದ್ದರೆ, ಆ ವ್ಯಕ್ತಿಗೆ ಮತ್ತೊಂದು ಕಂಪನಿಯ ಕರೋನಾ ಲಸಿಕೆ ಹಾಕಬಹುದು. ಇದಕ್ಕೆ ತಾರ್ಕಿಕವಾಗಿ ಪ್ರತಿಕ್ರಿಯಿಸಿರುವ ಬ್ರಿಟಿಷ್ ಆಡಳಿತ ಮೊದಲನೇ ಡೋಸ್ ಹಾಕಿರುವ ಲಸಿಕೆ ಸ್ಟಾಕ್ ಖಾಲಿಯಾಗಿದ್ದಾಗ ಬೇರೆ ಏನೂ ಇಲ್ಲ ಎನ್ನುವುದಕ್ಕಿಂತ ಬೇರೆ ಲಸಿಕೆ ಹಾಕಿಸಿಕೊಳ್ಳುವುದು ಉತ್ತಮ ಎಂದು ತಿಳಿಸಿದೆ.


ಎರಡು ಲಸಿಕೆಗಳನ್ನು ಅನುಮೋದಿಸಲಾಗಿದೆ : 
ಅಲ್ಲದೆ ಅದೇ ಮಾರ್ಗಸೂಚಿಯಲ್ಲಿ ಎರಡು ಕರೋನಾ ಲಸಿಕೆಗಳಾದ ಫಿಜರ್ (Pfizer) ಮತ್ತು ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾಗಳ  (Oxford-AstraZeneca) ತುರ್ತು ಅನುಮೋದನೆಯನ್ನು ಬ್ರಿಟನ್ ಪಡೆದುಕೊಂಡಿದೆ.    ಲಸಿಕೆ ಪಡೆದ ವ್ಯಕ್ತಿಯು ತಾನು ಮೊದಲು ಹಾಕಿಸಿಕೊಂಡಿರುವ ಡೋಸ್ ಯಾವ ಕಂಪೆನಿಯದ್ದು ಎಂದು ಮರೆತಿದ್ದರೆ ಅನುಮೋದಿತ ಎರಡೂ ಲಸಿಕೆಗಳಲ್ಲಿ ಒಂದನ್ನು ಹಾಕಬಹುದು ಎಂದು ಸಹ ಹೇಳಲಾಗಿದೆ.


ಇದನ್ನೂ ಓದಿ : Corona Vaccine ಅಡ್ಡಪರಿಣಾಮಗಳು ಕಂಡುಬಂದರೆ ಸಿಗಲಿದೆ ಪರಿಹಾರ: AIIMS ನಿರ್ದೇಶಕ


ಮಿಕ್ಸ್ ಅಂಡ್ ಮ್ಯಾಚ್ ವ್ಯಾಕ್ಸಿನೇಷನ್ (Mix and Match Vaccination) : 
ಬ್ರಿಟನ್‌ನ ಆರೋಗ್ಯ ಇಲಾಖೆ ಇದಕ್ಕೆ ಮಿಕ್ಸ್ ಅಂಡ್ ಮ್ಯಾಚ್ ವ್ಯಾಕ್ಸಿನೇಷನ್ ಎಂದು ಹೆಸರಿಸಿದೆ. ಬ್ರಿಟನ್‌ನ ಈ ತರ್ಕವು ವಿಶ್ವದಾದ್ಯಂತ ವಿಜ್ಞಾನಿಗಳಲ್ಲಿ ಪ್ರತ್ಯೇಕ ಚರ್ಚೆಯನ್ನು ಸೃಷ್ಟಿಸಿದೆ. ಈ ಇಡೀ ವಿಷಯದ ಬಗ್ಗೆ ಸಿಎಸ್ಐಆರ್ ನಿರ್ದೇಶಕ ಶೇಖರ್ ಮಾಂಡೆ ಹೇಳುವಂತೆ ಇದು ಆಶ್ಚರ್ಯಕರ ಸಂಗತಿಯಾಗಿದೆ. ಏಕೆಂದರೆ ವಿಜ್ಞಾನ ಜಗತ್ತಿನಲ್ಲಿ ಇದು ಎಂದಿಗೂ ಸಂಭವಿಸಿಲ್ಲ. ಮಿಕ್ಸ್ ಅಂಡ್ ಮ್ಯಾಚ್ ವಿಧಾನವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಬ್ರಿಟನ್‌ನ ವಿಜ್ಞಾನಿಗಳು ಭಾವಿಸಿರಬೇಕು, ಅದಕ್ಕಾಗಿಯೇ ಅವರು ಈ ನಿರ್ಧಾರ ಕೈಗೊಂಡಿರಬಹುದು ಎಂದು ಅವರು ತಿಳಿಸಿದ್ದಾರೆ.


ಫಾರ್ಮುಲಾ ಕ್ಲಿನಿಕಲ್ ಪ್ರಯೋಗದಲ್ಲಿದೆ :
ನಾವು ಈಗ ಪೂರ್ವಾಗ್ರಹ ಪೀಡಿತರಾಗಬಾರದು ಎಂದು ಡಾ. ಶೇಖರ್ ಮಾಂಡೆ ಹೇಳಿದ್ದಾರೆ. ಏಕೆಂದರೆ ಮಿಕ್ಸ್ ಅಂಡ್ ಮ್ಯಾಚ್ ವ್ಯಾಕ್ಸಿನೇಷನ್ ಕ್ಲಿನಿಕಲ್ ಪ್ರಯೋಗವು ಯುಕೆಯಲ್ಲಿಯೂ ನಡೆಯುತ್ತಿದೆ. ಇದರಲ್ಲಿ ಜನರಿಗೆ ಎರಡು ಡೋಸ್ ಒಂದು ಡೋಸ್ ಸ್ಪುಟ್ನಿಕ್ (Sputnik) ಮತ್ತು ಇನ್ನೊಂದು ಡೋಸ್ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಯನ್ನು ನೀಡಲಾಗುತ್ತಿದೆ. ಆದರೆ ಅದರ ಕ್ಲಿನಿಕಲ್ ಪ್ರಯೋಗ ಇನ್ನೂ ನಡೆಯುತ್ತಿದೆ ಎಂದವರು ತಿಳಿಸಿದ್ದಾರೆ.


ಇದನ್ನೂ ಓದಿ : ಶೀಘ್ರವೇ World's Biggest Vaccination Programme ಆರಂಭ: ಪ್ರಧಾನಿ ಮೋದಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.