ನವದೆಹಲಿ: Coronavirus Latest Update - ಭಾರತದಲ್ಲಿ ಕೊರೊನಾ ವೈರಸ್ (Coronavirus) ಮೂರನೆಯ ಅಲೆಯ (Coronavirus Third Wave) ಭೀತಿಯ ಹಿನ್ನೆಲೆ AIIMS Director Dr. Ranadeep Guleria ಜನರಿಗೆ ಭಾರಿ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಒಂದು ವೇಳೆ ಎಲ್ಲಾ ನಿರ್ಭಂಧನೆಗಳನ್ನು ತೆಗೆದುಹಾಕಿದರೆ, ಮುಂಬರುವ ಅಲೆ ಎರಡನೇ ಅಲೆಗಿಂತ ತುಂಬಾ ಅಪಾಯಕಾರಿ ಸಾಬೀತಾಗಲಿದೆ ಎಂದು ಅವರು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಇವು ಕೊರೊನಾ ಮೂರನೇ ಅಲೆಗೆ ಕಾರಣವಾಗಬಹುದು
ಇಮ್ಯೂನಿಟಿಯಲ್ಲಿನ ಕೊರತೆ ಹಾಗೂ ಲಾಕ್ಡೌನ್ (Lockdown) ಸಡಿಲಿಕೆಗೊಳಿಸಿರುವುದು ಸಂಭಾವ್ಯ ಮೂರನೇ ಅಲೆಗೆ ಕಾರಣಗಳಾಗಬಹುದು ಎಂದು ಡಾ. ಗುಲೇರಿಯಾ ಹೇಳಿದ್ದಾರೆ.  'ಒಂದು ವೇಳೆ ಎಲ್ಲಾ ನಿರ್ಬಂಧನೆಗಳನ್ನು ತೆಗೆದು ಹಾಕಿದರೆ ಮತ್ತು  ವೈರಸ್ ಕೂಡ ಪ್ರತಿರಕ್ಷೆಗೆ ನಿರೋಧವಾಗಿದ್ದರೆ, ಮುಂದಿನ ಅಲೆ ಎರಡನೇ ಅಲೆಗಿಂತ (Coronavirus Second Wave) ವ್ಯಾಪಕ ಮತ್ತು ಭೀಕರವಾಗಿರಲಿದೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಾ (Indian Institute Of Technology) ಮಾದರಿಯಿಂದ ಸಾಬೀತಾಗುತ್ತದೆ ' ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-Bhushan Kumar: T-Series ಕಂಪನಿಯ MD Bhushan Kumar ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು


ಈ ರೀತಿ ಕಮ್ಮಿಯಾಗಲಿದೆ ಮೂರನೇ ಅಲೆಯ ಗಂಭೀರತೆ
ಕಾರ್ಯಕ್ರಮವೊಂದರಲ್ಲಿ ಈ ಕುರಿತು ಮಾತನಾಡಿರುವ ಡಾ. ಗುಲೇರಿಯಾ, ಸಾಮಾಜಿಕ ಅಂತರದ ನಿಯಮಗಳ (Social Distancing) ಪಾಲನೆ, ಮಾಸ್ಕ್ ಧಾರಣೆ (Wearing Mask) ಹಾಗೂ ಲಸಿಕೆ ಪಡೆಯುವಂತಹ ಕೆಲ ಕೊವಿಡ್ ಗೆ (Covid-19) ಸಂಬಂಧಿಸಿದ ನಿಯಮಗಳ ಪಾಲನೆಯಿಂದ ಮೂರನೇ ಅಲೆಯ ಗಂಭೀರತೆಯನ್ನು ಕಡಿಮೆ ಮಾಡಬಹುದಾಗಿದೆ. 'ಒಂದು ವೇಳೆ ಕೆಲ ನಿರ್ಬಂಧನೆಗಳನ್ನು ಹಾಗೆಯೇ ಮುಂದುವರೆಸಿದ್ದಾದಲ್ಲಿ ಮತ್ತು ವೈರಸ್ ಕೂಡ ಸ್ಥಿರವಾದಲ್ಲಿ ಪ್ರಕರಣಗಳು ಹೆಚ್ಚಾಗುವುದಿಲ್ಲ ಹಾಗೂ ನಾವು ಇನ್ನೂ ಹೆಚ್ಚಿನ ನಿರ್ಬಂಧನೆಗಳನ್ನು ಪಾಲಿಸಿದಲ್ಲಿ ಪ್ರಕರಣಗಳು ಮತ್ತಷ್ಟು ಕಡಿಮೆಯಾಗಲಿವೆ' ಎಂದು ಗುಲೇರಿಯಾ ಹೇಳಿದ್ದಾರೆ.


ಇದನ್ನೂ ಓದಿ-Surekha Sikri Death:ಕಿರುತೆರೆಯ ಹಿರಿಯ ಕಲಾವಿದೆ ಸುರೇಖಾ ಸಿಕ್ರಿ ನಿಧನ


ಹೊಸ ರೂಪಾಂತರಿಯ ಮೇಲೆ ಕಾರ್ಯ ನಿರ್ವಹಿಸುತ್ತಿದೆ ವ್ಯಾಕ್ಸಿನ್
ಒಂದೊಮ್ಮೆ ಕೊರೊನಾ ವೈರಸ್ ನ ಹೊಸ ರೂಪಾಂತರಿ ಪ್ರಕರಣಗಳು ಜಾಸ್ತಿಯಾದರೂ ಕೂಡ ಪ್ರಸ್ತುತ ಇರುವ ಲಸಿಕೆಗಳಲ್ಲಿ ಸ್ವಲ್ಪ ಬದಲಾವಣೆ ಮಾಡಬಹುದಾಗಿದೆ. ಪ್ರಸ್ತುತ ಕೊವಿಡ್-19 ಮೂರನೇ ಅಲೆ ಇತರೆ ದೇಶಗಳಲ್ಲಿ ನೋಡಲು ಸಿಗುತ್ತಿದೆ. ಆದರೆ, ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದರಿಂದ ಲಸಿಕೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಸಂಕೇತಗಳು ದೊರೆಯುತ್ತಿದೆ. ಕೊವ್ಯಾಕ್ಸಿನ್(Covaxin), ಕೋವಿಶೀಲ್ಡ್ (Covishield) ಹಾಗೂ ಸ್ಪುಟ್ನಿಕ್ V (Sputnik V) ಸೇರಿದಂತೆ ದೇಶದಲ್ಲಿ ಇತರೆ ಲಸಿಕೆಗಳ ಮೇಲೂ ಕೂಡ ಕಾರ್ಯ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ-'ಪೋಷಕರ ಸಂಬಂಧ ಅಕ್ರಮವಾಗಿರಬಹುದು ಆದರೆ ಅವರಿಂದ ಹುಟ್ಟಿದ ಮಗು ಅಲ್ಲ'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ