Bhushan Kumar: T-Series ಕಂಪನಿಯ MD Bhushan Kumar ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

Rape Case Against Bhushan Kumar - ಖ್ಯಾತ ಚಲನಚಿತ್ರ ನಿರ್ಮಾಪಕ ಹಾಗೂ ಟಿ-ಸಿರೀಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಭೂಷಣ್ ಕುಮಾರ್ ವಿರುದ್ದ 30 ವರ್ಷದ ಯುವತಿಯೋರ್ವಳು ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಭೂಷಣ್ ತನ್ನನ್ನು ಅಕ್ರಮವಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ ಪಡೆಯುತ್ತಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.

Written by - Nitin Tabib | Last Updated : Jul 16, 2021, 01:12 PM IST
  • ಖ್ಯಾತ ಚಿತ್ರ ನಿರ್ಮಾಪಕ, ಟಿ-ಸಿರೀಸ್ ಎಂಡಿ ಭೂಷಣ್ ಕುಮಾರ್ ಮೇಲೆ ರೇಪ್ ಆರೋಪ
  • ಪ್ರಕರಣ ದಾಖಲಿಸಿಕೊಂಡ ಮುಂಬೈ ಪೊಲೀಸರು.
  • 30 ವರ್ಷದ ಯುವತಿಯೋರ್ವಳು ಭೂಷಣ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ.
Bhushan Kumar: T-Series ಕಂಪನಿಯ MD Bhushan Kumar ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು title=
Rape Case Against Bhushan Kumar(File Photo)

ಮುಂಬೈ: Rape Case Against Bhushan Kumar - ಖ್ಯಾತ ಗೀತ ರಚನೆಕಾರ ದಿವಂಗತ ಗುಲ್ಶನ್ ಕುಮಾರ್ (Gulshan Kumar) ಅವರ ಪುತ್ರ ಹಾಗೂ ಟಿ-ಸಿರೀಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಭೂಷಣ್ ಕುಮಾರ್ (Bhushan Kumar) ವಿರುದ್ಧ ರೇಪ್ ಪ್ರಕರಣ (Rape Case) ದಾಖಲಾಗಿದೆ. ಟಿ-ಸಿರೀಸ್ ಕಂಪನಿಯ ಪ್ರಾಜಿಕ್ಟ್ ಕೊಡಿಸುವುದಾಗಿ ಆಮೀಶವೊಡ್ಡಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು 30 ವರ್ಷದ ಯುವತಿಯೋರ್ವಳು ಆರೋಪಿಸಿದ್ದಾಳೆ. ಇದಲ್ಲದೆ ಇನ್ನೂ ಹಲವು ಗಂಭೀರ ಆರೋಪಗಳನ್ನು ಯುವತಿ ಮಾಡಿದ್ದಾಳೆ. ಕೆಲಸ ಕೊಡಿಸುವುದಾಗಿ ಹೇಳಿ ಭೂಷಣ್ ಕುಮಾರ್ (Bhushan Kumar) ತಮ್ಮ ಮೇಲೆ 2017 ರಿಂದ ಆಗಸ್ಟ್ 2020ರವರೆಗೆ ಸತತ ಮೂರು ವರ್ಷಗಳ ಕಾಲ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.

ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ
ಯುವತಿ ದಾಖಲಿಸಿರುವ ಪ್ರಕರಣದ ಪ್ರಕಾರ ಮೂರು ವಿಭಿನ್ನ ಸ್ಥಳಗಳಲ್ಲಿ ಆಕೆಯ ಮೇಲೆ ಈ ಅತ್ಯಾಚಾರಗಳು ನಡೆದಿವೆ. ಇದಲ್ಲದೆ ಆರೋಪಿ ಭೂಷಣ್ ಕುಮಾರ್ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿ, ವಿಡಿಯೋ ಚಿತ್ರೀಕರಿಸಿ ವೈರಲ್ ಮಾಡುವ ಬೆದರಿಕೆಯೋಡ್ಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.  ಭೂಷಣ್ ಕುಮಾರ್ ವಿರುದ್ಧ DN ನಗರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭೂಷಣ್ ಕುಮಾರ್ ಕೇವಲ ಟಿ-ಸಿರೀಸ್ ಕಂಪನಿಯ (T-Series Company) ನಿರ್ದೇಶಕರಷ್ಟೇ ಆಗಿರದೆ, ಹಲವು ದೊಡ್ಡ ದೊಡ್ಡ ಕಂಪನಿಗಳ ಪ್ರೊಡಕ್ಷನ್ ಕೆಲಸ ಕೂಡ ನಿರ್ವಹಿಸುತ್ತಾರೆ.

ಇದನ್ನೂ ಓದಿ-Surekha Sikri Death:ಕಿರುತೆರೆಯ ಹಿರಿಯ ಕಲಾವಿದೆ ಸುರೇಖಾ ಸಿಕ್ರಿ ನಿಧನ

ಹಲವು ಸೂಪರ್ ಹಿಟ್ ಚಿತ್ರಗಳ ಪ್ರೊಡಕ್ಷನ್ ನೋಡಿಕೊಂಡಿದ್ದಾರೆ
ಭೂಷಣ್ ಕುಮಾರ್ ಕೇವಲ ಮ್ಯೂಸಿಕ್ ಕಂಪನಿಯನ್ನು ಮಾತ್ರ ನೋಡಿಕೊಳ್ಳದೆ, ಹಲವು ಸೂಪರ್ ಹಿಟ್ ಚಿತ್ರಗಳ ನಿರ್ಮಾಪಕರು ಕೂಡ ಆಗಿದ್ದಾರೆ. 2001ರಲ್ಲಿ ಭೂಷಣ್ ಕುಮಾರ್ 'ತುಮ್ ಬಿನ್' ಚಿತ್ರವನ್ನು ನಿರ್ಮಿಸಿದ್ದರು. ಇದಾದ ಬಳಿಕ ಅವರು ಚಿತ್ರೋದ್ಯಮದಲ್ಲಿ 'ಭೂಲ್ ಭುಲೈಯ್ಯಾ', 'ಅಶಿಖಿ-2', 'ಸನಮ್ ರೇ', 'ಆಲ್ ಇಸ್ ವೆಲ್',  'ಸರಬ್ಜೀತ್', 'ತುಮ್ಹಾರಿ ಸುಲು', ' ಭಾರತ್' ಹಾಗೂ 'ಸತ್ಯಮೇವ್ ಜಯತೆ' ಗಳಂತಹ ಚಿತ್ರಗಳಿಗೆ ನಿರ್ಮಾಪಕರಾಗಿದ್ದಾರೆ.

ಇದನ್ನೂ ಓದಿ-Tragedy: ಸೆಲ್ಫಿ ತೆಗೆದುಕೊಳ್ಳುವಾಗ ಜಲಪಾತದಿಂದ ಬಿದ್ದು ಪ್ರಸಿದ್ಧ ಇನ್‌ಸ್ಟಾಗ್ರಾಮ್ ಇನ್​​​​ಫ್ಲ್ಯೂಯೆನ್ಸರ್ ಸಾವು!

ತಮ್ಮ ಖಾಸಗಿ ಜೀವನದಿಂದ ಯಾವಾಗಲು ಚರ್ಚೆಯಲ್ಲಿರುತ್ತಾರೆ ಭೂಷಣ್ 
ಹಲವು ಭಾರಿ ಭೂಷಣ್ ಕುಮಾರ್ ತಮ್ಮ ಖಾಸಗಿ ಜೀವನದ ಕುರಿತು ಚರ್ಚೆಯಲ್ಲಿರುತ್ತಾರೆ.  ಫೆಬ್ರವರಿ 13, 2005 ರಲ್ಲಿ ಭೂಷಣ್ ಕುಮಾರ್ ಖ್ಯಾತ ಬಾಲಿವುಡ್ ನಟಿ ದಿವ್ಯಾ ಖೊಸ್ಲಾ ಕುಮಾರ್ (Divya Khosla Kumar) ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ದಿವ್ಯಾ ಕೂಡ ಹಲವು ಬಾರಿ ತಮ್ಮ ಮ್ಯೂಜಿಕ್ ವಿಡಿಯೋ ಹಾಗೂ ಇತರೆ ಪ್ರಾಜೆಕ್ಟ್ಸ್ ಗಳ ಮೂಲಕ ಹೆಡ್ಲೈನ್ ಸೃಷ್ಟಿಸುತ್ತಲೇ ಇರುತ್ತಾರೆ. ಹಲವು ಬಾರಿ ಉಭಯರು ತಮ್ಮ ಖಾಸಗಿ ಜೀವನಕ್ಕೆ ಸಂಬಂಧಿಸಿದಂತೆಯೂ ಕೂಡ ಸುದ್ದಿ ಮಾಡುತ್ತಾರೆ.

ಇದನ್ನೂ ಓದಿ-eh Ali Khans first photo : ಹೀಗಿದೆ ನೋಡಿ ಕರಿನಾ ಕಪೂರ್ ಖಾನ್ ಎರಡನೇ ಮಗು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News