Karnataka High Court: ಪೋಷಕರ ಸಂಬಂಧ ಅಕ್ರಮವಾಗಿರಬಹುದು ಆದರೆ ಅವರಿಂದ ಹುಟ್ಟಿದ ಮಗು ಅಲ್ಲ: ರಾಜ್ಯ ಹೈಕೋರ್ಟ್

Karnataka High Court - ಮಕ್ಕಳ ಕಾನೂನು ಬದ್ಧತೆಗೆ (Legality Of Child) ಸಂಬಂಧಿಸಿದಂತೆ ಇರುವ ಕಾನೂನಿನಲ್ಲಿ ಏಕರೂಪತೆ ತರುವ ಕೆಲಸ ಸಂಸತ್ತಿನದ್ದಾಗಿದೆ ಎಂದು ರಾಜ್ಯ ಹೈಕೋರ್ಟ್ ಇಂದು ಹೇಳಿದೆ. ಮಾನ್ಯತೆ ಇಲ್ಲದ ಮದುವೆಯಿಂದ ಹುಟ್ಟಿದ ಮಕ್ಕಳಿಗೆ ಹೇಗೆ ರಕ್ಷಣೆ ಒದಗಿಸಬಹುದು ಎಂಬುದನ್ನು ಸಂಸತ್ತು ನಿರ್ಧರಿಸಬೇಕು ಎಂದು ನ್ಯಾಯಪೀಠ ಹೇಳಿದೆ.

Written by - Nitin Tabib | Last Updated : Jul 15, 2021, 09:17 PM IST
  • ಪೋಷಕರ ಸಂಬಂಧ ಅಕ್ರಮವಾಗಿರಬಹುದು.
  • ಆದರೆ ಅವರಿಂದ ಹುಟ್ಟುವ ಮಗು ಅಕ್ರಮವಾಗಿರಲು ಸಾಧ್ಯವಿಲ್ಲ.
  • ಏಕೆಂದರೆ ಮಗುವಿನ ಜನನದಲ್ಲಿ ಮಗುವಿನ ಪಾತ್ರ ಇರುವುದಿಲ್ಲ ಎಂದ ರಾಜ್ಯ ಹೈಕೋರ್ಟ್.
Karnataka High Court: ಪೋಷಕರ ಸಂಬಂಧ ಅಕ್ರಮವಾಗಿರಬಹುದು ಆದರೆ ಅವರಿಂದ ಹುಟ್ಟಿದ ಮಗು ಅಲ್ಲ: ರಾಜ್ಯ ಹೈಕೋರ್ಟ್  title=
 Karnataka High Court (File Photo)

ಬೆಂಗಳೂರು:  Karnataka High Court - ತಂದೆ-ತಾಯಿಯರ ಸಂಬಂಧ ಅಕ್ರಮವಾಗಿರಬಹುದು (Illegitimate Parents) ಆದರೆ, ಅವರಿಂದ ಹುಟ್ಟಿರುವ ಮಗು ಅಕ್ರಮವಾಗಿರಲು (Illegitimate Children) ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಏಕೆಂದರೆ, ಹುಟ್ಟುವಿಕೆಯ ಹಿಂದ ಮಗುವಿನ ಯಾವುದೇ ಪಾತ್ರ ಇರುವುದಿಲ್ಲ ಎಂದು ಪೀಠ ಹೇಳಿದೆ. ಇತ್ತೀಚೆಗಷ್ಟೇ ಈ ಕುರಿತಾಗಿ ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು  ರದ್ದುಗೊಳಿಸುವಾಗ ನ್ಯಾ.ಬಿ.ವಿ ನಾಗರತ್ನ ಹಾಗೂ ನ್ಯಾ. ಹೆಚ್. ಸಂಜೀವ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಟಿಪ್ಪಣಿ ಮಾಡಿದೆ.  ಸರ್ಕಾರಿ ಸ್ವಾಮ್ಯದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯಲ್ಲಿ (BESCOM) ತನ್ನ ತಂದೆಯ ಮರಣದ ನಂತರ ಸಹಾನುಭೂತಿಯ ಆಧಾರದ ಮೇಲೆ ಉದ್ಯೋಗ ನೀಡುವಂತೆ ನಿರ್ದೇಶಿಸುವಂತೆ ಸಂತೋಷ್ ವ್ಯಕ್ತಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

2014ರಲ್ಲಿ ಲೈನ್ ಮನ್ ಗ್ರೇಡ್ 2 ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಮ್ಮ ತಂದೆಯ ಸಾವಿನ ಬಳಿಕ ಸಂತೋಷ್ ಅನುಕಂಪದ ಆಧಾರದ ಮೇಲೆ ತಮ್ಮ ತಂದೆಯ ಕೆಲಸ ತಮಗೆ ಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಸಂತೋಷ್ ತಮ್ಮ ತಂದೆಯ ಎರಡನೇ ಹೆಂಡತಿಯ ಮಗನಾಗಿದ್ದಾರೆ ಮತ್ತು ಮೊದಲನೇ ಹೆಂಡತಿ ಜೀವಂತವಿರುವಾಗಲೇ ಸಂತೋಷ್ ತಂದೆ ಎರಡನೇ ವಿವಾಹವಾಗಿದ್ದರೂ. ಈ ಸಂದರ್ಭದಲ್ಲಿ ತನ್ನ ನೀತಿ ನಿಯಮಗಳ ಕಟ್ಟಳೆಗಳಮುಂದಿಟ್ಟ BESCOM ಸಂತೋಷ್ ಅವರ ಅರ್ಜಿಯನ್ನು ತಳ್ಳಿಹಾಕಿತ್ತು. ಕಂಪನಿಯ ಈ ನಿರ್ಧಾರದ ವಿರುದ್ಧ ಸಂತೋಷ್ ಹೈಕೋರ್ಟ್ ಕದ ತಟ್ಟಿದ್ದರು. ಆದರೆ, ನ್ಯಾಯಾಲಯದಲ್ಲಿನ  ಪೀಠ ಸಂತೋಷ್ ಅವರ ಅರ್ಜಿಯನ್ನು ರದ್ದುಗೊಳಿಸಿ ತೀರ್ಪು ನೀಡಿತ್ತು. 

ಆದರೆ, ಏಕ ಸದಸ್ಯ ಪೀಠದ ತೀರ್ಪನ್ನು ರದ್ದುಗೊಳಿಸಿರುವ ದ್ವಿ ಸದಸ್ಯ ಪೀಠ. "ಪ್ರಪಂಚದಲ್ಲಿ ಯಾವುದೇ ಮಗು ತಂದೆ ಅಥವಾ ತಾಯಿ ಇಲ್ಲದೆ ಜನಿಸುವುದಿಲ್ಲ ಎಂಬುದನ್ನು ನಾವು ಹೇಳಲು ಬಯಸುತ್ತೇವೆ. ಏಕೆಂದರೆ ಮಗುವಿನ ಹುಟ್ಟಿನಲ್ಲಿ ಮಗುವಿನ ಯಾವುದೇ ಪಾತ್ರ ಇರುವುದಿಲ್ಲ. ಹೀಗಾಗಿ ಮಗುವಿನ ಪೋಷಕರ ಸಂಬಂಧ ಅಕ್ರಮವಾಗಿರಬಹುದು, ಆದರೆ  ಮಗು ಅಕ್ರಮವಾಗಿರಲು ಸಾಧ್ಯವಿಲ್ಲ ಎಂಬ ಸತ್ಯ ನ್ಯಾಯಾಲಯ ಒಪ್ಪಿಕೊಳ್ಳಲೇಬೇಕು" ಎಂಬ ಟಿಪ್ಪಣಿ ಮಾಡಿತ್ತು.

ಇದನ್ನೂ ಓದಿ-Siddaramaiah: ‘ಬೆಳಗಾವಿಯಲ್ಲಿ ಕೂಡಲೇ ವಿಧಾನಮಂಡಲ ಅಧಿವೇಶನ ಕರೆಯಬೇಕು’

ಈ ಸಂದರ್ಭದಲ್ಲಿ "ಮಕ್ಕಳ ಕಾನೂನು ಬದ್ಧತೆಗೆ ಸಂಬಂಧಿಸಿದಂತೆ ಇರುವ ಕಾನೂನಿನಲ್ಲಿ ಏಕರೂಪತೆ ತರುವ ಕೆಲಸ ಸಂಸತ್ತಿನದ್ದಾಗಿದೆ ಎಂದು ರಾಜ್ಯ ಹೈಕೋರ್ಟ್ ಇಂದು ಹೇಳಿದೆ. ಮಾನ್ಯತೆ ಇಲ್ಲದ ಮದುವೆಯಿಂದ ಹುಟ್ಟಿದ ಮಕ್ಕಳಿಗೆ ಹೇಗೆ ರಕ್ಷಣೆ ಒದಗಿಸಬಹುದು ಎಂಬುದನ್ನು ಸಂಸತ್ತು ನಿರ್ಧರಿಸಬೇಕು" ಎಂದು ನ್ಯಾಯಪೀಠ ಹೇಳಿದೆ.

ಇದನ್ನೂ ಓದಿ- Global Home Price Index 2021: ಭಾರತದಲ್ಲಿ ಮನೆಗಳ ಬೆಲೆಗಳಲ್ಲಿ ಭಾರಿ ಕುಸಿತ, ನಮ್ಮ ಬೆಂಗಳೂರಿನಲ್ಲಿ ಎಷ್ಟು ಕುಸಿತ?

ಇದರ ಜೊತೆಗೆ ನ್ಯಾಯಾಲಯವು ಸೆಪ್ಟೆಂಬರ್ 23, 2011 ರಂದು ವಿದ್ಯುತ್ ಇಲಾಖೆ ಹೊರಡಿಸಿದ ಸುತ್ತೋಲೆಯ ನಿಬಂಧನೆಯನ್ನು ಬದಿಗೊತ್ತಿದೆ. ಈ ಸುತ್ತೊಲೆಯಲ್ಲಿ ಸಕ್ರಮ ಮದುವೆಯ ಹೊರಗೆ ಹುಟ್ಟಿದ ಮಕ್ಕಳು ಸಹಾನುಭೂತಿಯ ನೇಮಕಾತಿಗೆ ಅರ್ಹರಲ್ಲ ಎಂದು ಹೇಳಲಾಗಿತ್ತು.

ಇದನ್ನೂ ಓದಿ-HDK V/s Sumalatha: ‘ಬೇರೆಯವರಿಗೆ ಕೆಸರು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಕೆಸರಾಗುತ್ತದೆ’

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News